ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಹಬ್ಬ ಆಚರಿಸಿದ ರಶ್ಮಿಕಾ

Public TV
1 Min Read

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಈ ಬಾರಿ ದೀಪಾವಳಿ ಹಬ್ಬವನ್ನು ವಿಜಯ್ ದೇವರಕೊಂಡ ಮನೆಯಲ್ಲಿ ಆಚರಿಸಿದ್ದಾರೆ. ಹಬ್ಬದ ಸೆಲೆಬ್ರೇಷನ್ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ

ವಿಜಯ್ ದೇವರಕೊಂಡ  (Vijay Devarakonda) ಜೊತೆ ರಶ್ಮಿಕಾ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರೊಂದಿಗೆ ಮತ್ತು ಅವರ ಫ್ಯಾಮಿಲಿ ಜೊತೆ ಉತ್ತಮ ಒಡನಾಟವಿದೆ. ಇಬ್ಬರ ಬಗ್ಗೆ ಆಗಾಗ ಡೇಟಿಂಗ್ ವದಂತಿ ಹರಿದಾಡುತ್ತಲೇ ಇರುತ್ತದೆ. ಇದರ ಬಗ್ಗೆ ಈ ಜೋಡಿ ರಿಯಾಕ್ಟ್ ಮಾಡಿರಲಿಲ್ಲ. ಈಗ ಅವರಿಬ್ಬರ ಡೇಟಿಂಗ್‌ ವಿಚಾರದಲ್ಲಿ ನೆಟ್ಟಿಗರಿಗೆ ಸಾಕ್ಷಿ ಸಿಕ್ಕಿದೆ.

ಈ ಬಾರಿ ಬೆಳಕಿನ ಹಬ್ಬವನ್ನು ವಿಜಯ್‌ ಮನೆಯಲ್ಲಿ ಆಚರಿಸಿದ್ದಾರೆ. ಹಬ್ಬದ ಕೆಲ ಫೋಟೋಗಳನ್ನು ನಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ದೀಪಾವಳಿ ಹಬ್ಬವನ್ನು ವಿಜಯ್ ಕುಟುಂಬದ ಜೊತೆ ಆಚರಿಸಿಕೊಂಡಿರುವ ಕುರಿತು ನಟಿ ಎಲ್ಲವೂ ರಿವೀಲ್ ಮಾಡಿಲ್ಲ. ಆದರೆ ಅವರು ಶೇರ್ ಮಾಡಿರುವ ಪೋಸ್ಟ್‌ಗೆ ಫೋಟೋ ಕ್ರೆಡಿಟ್ ಅನ್ನು ವಿಜಯ್‌ ಸಹೋದರ ಆನಂದ ದೇವರಕೊಂಡಗೆ (Anand Devarakonda) ನೀಡಿದ್ದಾರೆ. ಥ್ಯಾಂಕ್ಯೂ ಆನಂದ ಎಂದು ತಿಳಿಸಿದ್ದಾರೆ. ಇದರಿಂದ ವಿಜಯ್ ಮನೆಯಲ್ಲಿ ರಶ್ಮಿಕಾ ದೀಪಾವಳಿ ಹಬ್ಬ ಆಚರಿಸಿರೋದು ಪಕ್ಕಾ ಆಗಿದೆ. ಡೇಟಿಂಗ್‌ ಸುದ್ದಿಗೆ ಮತ್ತೆ ಪುಷ್ಠಿ ಸಿಕ್ಕಂತಾಗಿದೆ.

ಇನ್ನೂ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಜೋಡಿ ಮದುವೆ ಕುರಿತು ಸಿಹಿಸುದ್ದಿ ಕೊಡುತ್ತಾರಾ? ಎಂದು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

Share This Article