ಟಾಲಿವುಡ್‌ನಲ್ಲಿ ಕನ್ನಡತಿಯರ ದರ್ಬಾರ್- ತೆಲುಗು ನಟಿಯರ ಬಗ್ಗೆ ಅಲ್ಲು ಅರ್ಜುನ್ ಬೇಸರ

Public TV
2 Min Read

ತೆಲುಗು ಸಿನಿಮಾರಂಗದಲ್ಲಿ ಸದ್ಯ ಆನಂದ್ ದೇವರಕೊಂಡ, ವೈಷವಿ, ವಿರಾಜ್ ನಟನೆಯ ಬೇಬಿ ಸಿನಿಮಾದ ಹವಾ ಜೋರಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದೀಗ ‘ಬೇಬಿ’ (Baby) ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮಕ್ಕೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಸಾಥ್ ನೀಡಿದ್ದಾರೆ. ಜೊತೆಗೆ ನಮ್ಮ ಟಾಲಿವುಡ್‌ನಲ್ಲಿ ತೆಲುಗು ನಟಿಯರ ಬೆಳವಣಿಗೆ ಕಮ್ಮಿಯಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.

‘ಪುಷ್ಪ’ (Pushpa) ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟನಾಗಿ ಮಿಂಚ್ತಿರೋ ಅಲ್ಲು ಅರ್ಜುನ್ ಅವರು ಇತ್ತೀಚಿಗೆ ‘ಬೇಬಿʼ  ಸಕ್ಸಸ್ ಮೀಟ್‌ಗೆ ಸಾಥ್ ನೀಡಿ, ಇಡೀ ಚಿತ್ರತಂಡಕ್ಕೆ ಶುಭಕೋರಿದ್ದರು. ಸಿನಿಮಾದ ಕಥೆ, ನಿರ್ದೇಶನ- ಆನಂದ್, ವೈಷ್ಣವಿ, ವಿರಾಜ್ ಪ್ರಮುಖ ಪಾತ್ರಧಾರಿಗಳ ನಟನೆಗೆ ಭೇಷ್ ಎಂದು ಹೊಗಳಿದ್ದರು. ಇದನ್ನೂ ಓದಿ:ದುಬೈನಲ್ಲಿ ಬಿಗ್ ಬಾಸ್ ದೀಪಿಕಾ ದಾಸ್ ಮೋಜು-ಮಸ್ತಿ

ಇನ್ನೂ ನಾಯಕಿ ವೈಷ್ಣವಿ ಚೈತನ್ಯ ಅವರು ಬೇಬಿ ಸಿನಿಮಾದಲ್ಲಿನ ನಟನೆಗೆ ಹಾಡಿ ಹೊಗಳಿದ್ದಾರೆ. ಈ ಹಿಂದೆ ‘ಅಲ್ಲಾ ವೈಕುಂಠಪುರಮಲ್ಲೋ’ ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ತಂಗಿಯಾಗಿ ವೈಷ್ಣವಿ ನಟಿಸಿದ್ದರು. ವೈಷ್ಣವಿ ಬೆಳವಣಿಗೆ ಬಗ್ಗೆ ಐಕಾನ್ ಸ್ಟಾರ್ ಹೆಮ್ಮೆಯಿಂದ ಮಾತನಾಡಿದ್ದರು. ‘ಬೇಬಿʼ ಸಿನಿಮಾದ ನಿಮ್ಮ ನಟನೆಗೆ ಖಂಡಿತವಾಗಿಯೂ ಬೆಸ್ಟ್ ಹೀರೋಯಿನ್ ಅವಾರ್ಡ್ ಬರುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

ಇತ್ತೀಚಿಗೆ ನಾನು ಪ್ರಶಸ್ತಿ ಸಮಾರಂಭಕ್ಕೆ ಹೋಗಿದ್ದೆ, ಅಲ್ಲಿ ಆಯಾ ಭಾಷಾ ನಾಯಕಿಯರು ಬೆಸ್ಟ್ ನಾಯಕಿ ಅವಾರ್ಡ್ ಪಡೆಯುತ್ತಿದ್ದರು. ನಮ್ಮ ತೆಲುಗಿನಿಂದ ತೆಲುಗು ನಟಿಯರೇ ಇಲ್ಲದಂತೆ ಭಾಸವಾಗಿತ್ತು. ಟಾಲಿವುಡ್ ಚಿತ್ರರಂಗ ಫಾಸ್ಟ್ ಬೆಳಯುತ್ತಿರುವ ಇಂಡಸ್ಟ್ರಿ, ನಮ್ಮ ತೆಲುಗಿನಲ್ಲಿ ಕಡಿಮೆ ಅವಧಿಯಲ್ಲಿ ರಶ್ಮಿಕಾ(Rashmika)- ಶ್ರೀಲೀಲಾ (Sreeleela) ಅಂತಹ ನಾಯಕಿಯರು ಗುರುತಿಸಿಕೊಳ್ಳುತ್ತಿದ್ದಾರೆ. ಅಪ್ಪಟ ತೆಲುಗಿನ ನಟಿಯರು ಕೂಡ ಗುರುತಿಸಿಕೊಳ್ಳಬೇಕು ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ನಮ್ಮ ನೆಲದಲ್ಲಿ ನಮ್ಮ ನಟಿಯರು ಬೆಳೆಯಬೇಕು. ಹೆಣ್ಣು ಮಕ್ಕಳು ಬೆಳೆಯಲು ಕುಟುಂಬದವರು ಕೂಡ ಸಾಥ್ ನೀಡಬೇಕು ಎಂದು ನಟ ಕಿವಿ ಮಾತು ಹೇಳಿದ್ದಾರೆ. ಜೊತೆಗೆ ಕನ್ನಡತಿಯರ ದರ್ಬಾರ್‌ಗೆ ತೆಲುಗು ನಟಿಯರಿಗೆ ಐಕಾನ್ ಸ್ಟಾರ್ ಬುಲಾವ್ ಹೇಳಿದ್ದಾರೆ.

ಇನ್ನೂ ರಶ್ಮಿಕಾ ಮಂದಣ್ಣ- ಶ್ರೀಲೀಲಾ ಇಬ್ಬರು ಕನ್ನಡದವರು. ಕನ್ನಡ ಸಿನಿಮಾದಿಂದ ಪರಿಚಿತರಾಗಿ, ತೆಲುಗಿನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡವರು. ರಶ್ಮಿಕಾ, ತೆಲುಗು ಸಿನಿಮಾದಿಂದ ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿ ಗುರುತಿಸಿಕೊಳ್ಳುತ್ತಿದ್ದರೆ, ಶ್ರೀಲೀಲಾ ಅವರು ತೆಲುಗಿನ 10ಕ್ಕೂ ಹೆಚ್ಚ ಸಿನಿಮಾಗಳಿಗೆ ನಾಯಕಿಯಾಗಿದ್ದಾರೆ. ಹಾಗಾಗಿ ಅಲ್ಲು ಅರ್ಜುನ್‌ ಅವರು ಈ ಬಗ್ಗೆ ಮಾತನಾಡಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್