ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಬಾಲಿವುಡ್‌ನಲ್ಲಿ ಲಕ್ ಕೈ ಕೊಟ್ಟಿದೆ. ಗುಡ್ ಬೈ, ಮಿಷನ್ ಮಜ್ನು (Mission Majnu) ಈ ಎರಡು ಸಿನಿಮಾಗಳ ಸೋಲಿನ ನಂತರ ಇದೀಗ ಅನಿಮಲ್ ಚಿತ್ರದ ಮೂಲಕ ಕಿರಿಕ್ ನಟಿ ಬರುತ್ತಿದ್ದಾರೆ. ರಣ್‌ಬೀರ್, ರಶ್ಮಿಕಾ ನಟನೆಯ ‘ಅನಿಮಲ್’ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸದ್ದು ಮಾಡುತ್ತಿದೆ.
‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ, ಅಂಜನಿಪುತ್ರ, ಚಮಕ್, ಪೊಗರು ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ರು. ಜೊತೆಗೆ ತೆಲುಗಿನ ‘ಗೀತಾ ಗೋವಿಂದಂ’, ಸರಿಲೇರು ನಿಕ್ಕೇವರು, ಪುಷ್ಪ ಸೇರಿದಂತೆ ತೆಲುಗಿನ ಚಿತ್ರಗಳಲ್ಲಿ ಕೊಡಗಿನ ಕುವರಿ ಗಮನ ಸೆಳೆದರು.

ಸದ್ಯ ‘ಅನಿಮಲ್’ ಸಿನಿಮಾದ ರಿಲೀಸ್ ಆಗಿರುವ ಟೀಸರ್‌ನಲ್ಲಿ ರಣಬೀರ್ ಕಪೂರ್ ಕೊಡಲಿ ಹಿಡಿದು ಬರುವುದನ್ನು ಕಾಣಬಹುದು. ಕೆಲವು ಮಾಸ್ಕ್ ಧರಿಸಿದ ಮಂದಿ ನಟನಿಗಾಗಿ ಕಾಯುತ್ತಿರುತ್ತಾರೆ. ನಟ ಬಿಳಿ ಕುರ್ತಾ ಹಾಗೂ ಧೋತಿ ಧರಿಸಿರುತ್ತಾರೆ. ನಟನ ಮುಖದ ದೃಶ್ಯವೂ ಕಾಣಿಸುತ್ತದೆ. ಈ ಲುಕ್ ನೋಡಿದರೆ ರಣಬೀರ್ ಕಪೂರ್ ಅವರು ಕ್ರೂರವಾದ ಗ್ಯಾಂಗ್‌ಸ್ಟರ್ ಪಾತ್ರ ಮಾಡುತ್ತಿರುವಂತೆ ಕಾಣಿಸುತ್ತದೆ. ರಣಬೀರ್ ಅವರು ಒಂಟಿಯಾಗಿ ಫೈಟ್ ಮಾಡುತ್ತಾರೆ. ಪಂಜಾಬಿ ಸಾಂಗ್ ಒಂದು ಹಿನ್ನೆಲೆಯಲ್ಲಿ ಪ್ಲೇ ಆಗುತ್ತದೆ. ರಣಬೀರ್ ಅವರ ಟ್ರಾನ್ಸ್ಫರ್ಮೇಶನ್ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಚಿತ್ರದಲ್ಲಿ ಮೊದಲ ಬಾರಿಗೆ ರಣ್‌ಬೀರ್ ಕಪೂರ್‌ಗೆ (Ranbir Kapoor) ಜೋಡಿಯಾಗಿ ನಟಿಸಿದ್ದಾರೆ. ರಶ್ಮಿಕಾ ನಟಿಸಿರುವ ಹಿಂದಿ 2 ಸಿನಿಮಾಗಳು ಸೋತಿದ್ರು ಕೂಡ ‘ಪುಷ್ಪ’ ಚಿತ್ರದ ಯಶಸ್ಸು ಮತ್ತು ನಟನೆ ನೋಡಿ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟಿದ್ದಾರೆ. ಇದೇ ಆಗಸ್ಟ್ 11ಕ್ಕೆ ಅನಿಮಲ್ ಸಿನಿಮಾ ತೆರೆಗೆ ಅಬ್ಬರಿಸುತ್ತಿದೆ. ಗುಡ್ ಬೈ, ಮಿಷನ್ ಮಜ್ನು ಚಿತ್ರದ ಸೋಲಿನ ಬಳಿಕ ‘ಅನಿಮಲ್’ (Animal) ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣಗೆ (Rashmika Mandanna) ಬಾಲಿವುಡ್‌ನಲ್ಲಿ ಗಟ್ಟಿನೆಲೆ ಗಿಟ್ಟಿಸಿಕೊಳ್ಳುತ್ತಾರಾ ಕಾದುನೋಡಬೇಕಿದೆ.


