ಮತ್ತೆ ರೊಮ್ಯಾನ್ಸ್‌ಗೆ ರೆಡಿಯಾದ ರಶ್ಮಿಕಾ-ವಿಜಯ್ ದೇವರಕೊಂಡ

By
1 Min Read

ಒಟ್ಟಿಗೆ ನಟಿಸಿದ್ದು ಎರಡೇ ಸಿನಿಮಾ ಆದ್ರೂ ಈ ಜೋಡಿ ಒಟ್ಟಿಗೆ ಕಾಣಿಸ್ಕೊಂಡಾಗ ತೆರೆಮೇಲೆ ಮ್ಯಾಜಿಕ್ ಆಗೋದು ಗ್ಯಾರಂಟಿ. ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Deverakonda) ಟಾಲಿವುಡ್‌ನ ಹಾಟ್ ಕಪಲ್. ಆನ್‌ಸ್ಕ್ರೀನ್‌ ಕೆಮಿಸ್ಟ್ರಿ ವರ್ಕೌಟ್ ಆದ್ಮೇಲೆ ಆಫ್‌ಸ್ಕ್ರೀನ್‌ನಲ್ಲೂ ಕೆಮೆಸ್ಟ್ರಿ ನಿಭಾಯಿಸಿಕೊಂಡು ಬಂದಿರುವ ತಾರೆಗಳು ಇವರು. ಇದೇ ಗ್ಯಾಪಲ್ಲೇ 3ನೇ ಬಾರಿ ಆನ್‌ಸ್ಕ್ರೀನ್‌ ಜೋಡಿಯಾಗಿ ಕಾಣಿಸ್ಕೊಳ್ಳಲು ಈ ತಾರೆಗಳು ರೆಡಿಯಾಗಿದ್ದಾರೆ.

ತೆಲುಗಿನ ರಾಹುಲ್ ಸಂಕೃತ್ಯ ನಿರ್ದೇಶನದಲ್ಲಿ ಮುಂಬರುವ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮತ್ತೆ ತೆರೆಯ ಮೇಲೆ ಒಂದಾಗಲಿದ್ದಾರೆ. ಗೀತ ಗೋವಿಂದಂ (Geetha Govindam), ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಈ ಹಿಂದೆ ಒಟ್ಟಿಗೆ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದ ನೆಚ್ಚಿನ ಜೋಡಿ ಇದು. ಈ ಬಾರಿ 1800ರ ದಶಕದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ನಡೆದ ಕಥೆಯಲ್ಲಿ ಈ ಜೋಡಿ ಪರದೆ ಹಂಚಿಕೊಳ್ಳಲಿದ್ದಾರೆ. ಇದು ಐತಿಹಾಸಿಕ ಕಥೆಯಾಗಿರುವುದು ವಿಶೇಷ. ಇದನ್ನೂ ಓದಿ:  ಯಶ್ ನಟನೆಯ ರಾಮಾಯಣ-2 ಚಿತ್ರಕ್ಕೆ VFX ಗಾಗಿ ಗಾಡ್ಜಿಲ್ಲ ತಂತ್ರಜ್ಞರು ಎಂಟ್ರಿ

ಪ್ರಾಥಮಿಕ ಮಾಹಿತಿಯ ಪ್ರಕಾರ, ನಟ ವಿಜಯ್ ದೇವರಕೊಂಡ ಆಂಧ್ರದ ರಾಯಲುಸೀಮೆಯ ಹಳ್ಳಿಗಾಡಿನ ಪಾತ್ರವನ್ನು ನಿರ್ವಹಿಸುವ ನಿರೀಕ್ಷೆ ಇದೆ. ಇದು ಅವರ ವೃತ್ತಿಜೀವನದಲ್ಲಿ ಮೊದಲ ಪ್ರಯತ್ನ. ರಶ್ಮಿಕಾ ಕೂಡ ವಿಭಿನ್ನ ಪಾತ್ರದಲ್ಲೇ ಕಾಣಿಸ್ಕೊಳ್ಳಲಿದ್ದಾರೆ. ಆ್ಯಕ್ಷನ್ ಕಥೆಯ ಬಿಗ್ ಬಜೆಟ್ ಚಿತ್ರವಾಗಿ ಶೀಘ್ರದಲ್ಲೇ ಸೆಟ್ಟೇರಲು ಸಿದ್ಧವಾಗಿದೆ. ಇನ್ನಷ್ಟು ಮಾಹಿತಿಗಳು ಒಂದೊಂದಾಗೇ ಹೊರಬೀಳುವ ಸಾಧ್ಯತೆ ಇದೆ. ಇನ್ನು 6 ವರ್ಷಗಳ ಬಳಿಕ ಒಂದಾಗುತ್ತಿರುವ ರಶ್ಮಿಕಾ ಹಾಗೂ ವಿಜಯ್ ದೇವಕೊಂಡ ಜೋಡಿ ಮತ್ತೊಮ್ಮೆ ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸುವಂತೆ ಭಾಸವಾಗುತ್ತಿದೆ. ಇದನ್ನೂ ಓದಿ: ಮದ್ವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.5 ಲಕ್ಷ ಅಲ್ಲ ಕೇವಲ 2,700 ರೂ.

Share This Article