ದರೋಜಿ ಕರಡಿಧಾಮದಲ್ಲಿ ಅಪರೂಪದ ಸ್ಕಾಪ್ಸ್ ಗೂಬೆ ಪತ್ತೆ

Public TV
1 Min Read

ಬಳ್ಳಾರಿ: ವಿಶಿಷ್ಟ ಕಿವಿ ಹೊಂದಿರುವ ಭಾರತೀಯ ಸ್ಕಾಪ್ಸ್ ಗೂಬೆಯು (Scops Owl) ಮೊದಲ ಬಾರಿ ದರೋಜಿ ಕರಡಿಧಾಮದಲ್ಲಿ (Daroji Bear Sanctuary) ಬಳಿ ಪತ್ತೆಯಾಗಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ದರೋಜಿ ಕರಡಿಧಾಮದ ಬಳಿ ಪತ್ತೆಯಾಗಿರುವ ಈ ಗೂಬೆಯು, ಗಾತ್ರದಲ್ಲಿ ಚಿಕ್ಕದಾಗಿದ್ದು 20-25 ಸೆ.ಮೀ. ಉದ್ದ ಹಾಗೂ ಬೂದು ಬಣ್ಣದ್ದಾಗಿದೆ. ಕಣ್ಣು ಕಡು ಬಣ್ಣವಿದೆ. ದೇಹದ ಬಣ್ಣ ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವುದರಿಂದ ಹಗಲಿನಲ್ಲಿ ಇದನ್ನು ಪತ್ತೆ ಹಚ್ಚುವುದು ಕಷ್ಟ. ಇದನ್ನೂ ಓದಿ: ಮೈದುನನ ಜೊತೆ ಮಲಗೋಕೆ ಒತ್ತಾಯಿಸ್ತಿದ್ರು, ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಿದ್ದಾರೆ – ವಿಡಿಯೋ ಮಾಡಿಟ್ಟು ಗೃಹಿಣಿ ಆತ್ಮಹತ್ಯೆ

ಇದರ ವಟ್ ವಟ್ ಸದ್ದಿನಿಂದ ಹಿಂಬಾಲಿಸಿದ ಪಕ್ಷಿ ಪ್ರೇಮಿಗಳಾದ ಸಬ್ಯಸಾಚಿ ರಾಯ್, ಶ್ರೀಧರ್ ಪೆರುಮಾಳ್ ಮತ್ತು ಪಂಪಯ್ಯ ಸ್ವಾಮಿ ಮಳೆಮಠ ಹರಸಾಹಸ ಪಟ್ಟು ಗೂಬೆಯ ಚಿತ್ರ ಸೆರೆಹಿಡಿದ್ದಾರೆ. ಸ್ಕಾಪ್ಸ್ ಗೂಬೆ ಈ ಭಾಗದಲ್ಲಿ ಹೊಸದಾಗಿ ಗೋಚರಿಸಿರುವುದು ಅಚ್ಚರಿ ಸಂಗತಿಯಾಗಿದೆ.

Share This Article