ಮದುವೆಯ ದಿನ ನಮಗೆ ಬಾಯಿಗೆ ಬಂದಂತೆ ಬೈದರು: ವೆಡ್ಡಿಂಗ್ ಆ್ಯನಿವರ್ಸರಿಗೆ ಸನ್ನಿ ಲಿಯೋನ್ ಭಾವುಕ ಪತ್ರ

Public TV
2 Min Read

ಬಾಲಿವುಡ್ ಖ್ಯಾತಿಯ ಮಾದಕ ಸುಂದರಿ ಮತ್ತು ಪಡ್ಡೆ ಹುಡುಗರ ಕನಸಿನ ರಾಣಿ ಸನ್ನಿ ಲಿಯೋನ್ ಮದುವೆಯಾಗಿ ಇವತ್ತಿಗೆ 11 ವರ್ಷ ಕಳೆದಿದ್ದು, ವೆಡ್ಡಿಂಗ್ ಆ್ಯನಿವರ್ಸರಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಅವರು ತಮ್ಮ ಮದುವೆ ಫೋಟೋ ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ದಂಪತಿ ಇಬ್ಬರು ಸಿಖ್ ಧರ್ಮದ ಸಂಪ್ರದಾಯದಂತೆ ವೆಡ್ಡಿಂಗ್ ಡ್ರೆಸ್ ಮೇಲೆ ಗುರುದ್ವಾರದಲ್ಲಿ ಗುಲಾಬಿ ಹೂವುಗಳ ದಳದ ಮೇಲೆ ಮಂಡಿ ಉರಿ ಕುಳಿತುಕೊಂಡು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

 

View this post on Instagram

 

A post shared by Sunny Leone (@sunnyleone)

ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್ ಒಬ್ಬರನ್ನೊಬ್ಬರು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇವತ್ತಿಗೆ 11 ವರ್ಷಗಳು ಕಳೆದಿವೆ. ವೃತ್ತಿಪರ ಜೀವನದಲ್ಲಿಯೂ ಸಹ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದವರು.

ಈ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿರುವ ಕನ್ನಡದ ಶೇಷಮ್ಮ, ’11 ವರ್ಷಗಳ ಹಿಂದೆ ಅಂದು ಮದುವೆ ಆದಾಗ ಹಣವಿಲ್ಲದೇ ಮದುವೆಗೆ ಕೇವಲ 50 ಜನರನ್ನು ಮಾತ್ರ ಆಹ್ವಾನ ಮಾಡಿದ್ದೆವು. ಆರತಕ್ಷತೆ ಮಾಡಿಕೊಳ್ಳಲು ಸಹ ನಮ್ಮ ಹತ್ತಿರ ಬಿಡಿಗಾಸು ಇರಲ್ಲಿಲ್ಲ. ಮದುವೆಯಲ್ಲಿ ಮಾಡಿದ ಹೂವುಗಳ ಅಲಂಕಾರ ಕೂಡಾ ಸರಿ ಇರಲಿಲ್ಲ. ಅಂದು ನಮ್ಮ ಮದುವೆಗೆ ಬಂದಿದ್ದ ಗೆಸ್ಟ್‌ಗಳೆಲ್ಲಾ ಸ್ಟೇಜ್ ಮೇಲೆ ನಿಂತು ಕುಡಿದ ಅಮಲಿನಲ್ಲಿ ನಮಗೆ ಬಾಯಿಗೆ ಬಂದಂತೆ ಬೈಯಿದಿದ್ದರು. ನಮ್ಮ ಜೀವನದಲ್ಲಿ ಆದ ಕೆಲ ಕಹಿ ಘಟನೆಗಳನ್ನೆಲ್ಲಾ ದಾಟಿ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇಷ್ಟು ವರ್ಷ ಒಂದು ಸುಂದರ ಜೀವನ ಕಟ್ಟಿಕೊಂಡಿದ್ದೇವೆ. ಲವ್ ಯ್ಯೂ ಬೇಬಿ’ ಎಂದು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.

ಸನ್ನಿ ಮತ್ತು ಡೇನಿಯಲ್ ಇತ್ತೀಚೆಗೆ ಮೂವರು ಸುಂದರ ಮಕ್ಕಳಿಗೆ ಪೊಷಕರಾಗಿದ್ದಾರೆ. ಕಳೆದ ವರ್ಷ ಅವರ ಹಿರಿಯ ಮಗಳನ್ನು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಿಂದ ದತ್ತು ಪಡೆದಿದ್ದರು. ಬಾಡಿಗೆ ತಾಯ್ತನದ ಮೂಲಕ ಅವರ ಇಬ್ಬರು ಅವಳಿ ಗಂಡು ಮಕ್ಕಳು ಜನಿಸಿವೆ.

ಈಗಾಗಲೇ ಅವರು ತಮ್ಮ ವೃತ್ತಿಜೀವನದಲ್ಲಿ ಯಶಸ್ವಿ ಆಗಿದ್ದು, ಕನ್ನಡದಲ್ಲೂ ಇವರು ಎರಡು ಸಿನಿಮಾಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಕನ್ನಡದ ಮತ್ತೊಂದು ಚಿತ್ರದ ಹಾಡಿಗೂ ಹೆಜ್ಜೆ ಹಾಕಿ ಹೋಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *