ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಯ್ತು ಅಪರೂಪದ ಕಪ್ಪು ವಜ್ರ

Public TV
1 Min Read

ಅಬುಧಾಬಿ: 555-ಕ್ಯಾರೆಟ್‌ನ ಪರೂಪದ ಕಪ್ಪು ವಜ್ರವನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಅಪರೂಪದಲ್ಲಿ ಅಪರೂಪದ ವಜ್ರ ಭೂಮಿಯ ವಸ್ತುವೇ ಅಲ್ಲ ಎಂದು ನಂಬಲಾಗಿದೆ.

ಎನಿಗ್ಮಾ ಹೆಸರಿನ ಅಪರೂಪದ ಕಪ್ಪು ಕಾರ್ಬನಾಡೋ ವಜ್ರವನ್ನು ದುಬೈನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ವಜ್ರವನ್ನು ಫೆಬ್ರವರಿಯಲ್ಲಿ ಹರಾಜಿಗೆ ಇಡಲಿದ್ದು, 5 ಮಿಲಿಯನ್ ಡಾಲರ್‌ಗೆ ಮಾರಾಟವಾಗುವ ಸಾಧ್ಯತೆ ಇದೆ. ಇದರ ಮಾರಾಟಕ್ಕೂ ಮೊದಲು ಸೋಮವಾರ ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನೂ ಓದಿ: ಹಾಂಕಾಂಗ್‌ನಲ್ಲಿ 2000 ಪ್ರಾಣಿಗಳನ್ನು ಕೊಲ್ಲಲು ಆದೇಶ!

2.6 ಶತಕೋಟಿ ವರ್ಷಗಳ ಹಿಂದೆ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದಾಗ ಈ ವಜ್ರ ರಚನೆಯಾಗಿದೆ ಎಂದು ಆಭರಣ ತಜ್ಞ ಸೋಫಿ ಸ್ಟೀವನ್ಸ್ ಅಭಿಪ್ರಾಯಪಟ್ಟಿದ್ದಾರೆ. 555.55-ಕ್ಯಾರೆಟ್ ಹೊಂದಿರುವ ವಜ್ರವನ್ನು ಕತ್ತರಿಸುವುದು ಅತ್ಯಂತ ಕಷ್ಟಕರ. ಆದರೂ ತಜ್ಞರು ಅದನ್ನು 55 ಮುಖದ ಆಭರಣವಾಗಿ ಪರಿವರ್ತಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮಿನಿ ಕೃತಕ ಚಂದ್ರ – ಚೀನಾದ ಹೊಸ ಪ್ರಯತ್ನ

ವಿಭಿನ್ನವಾದ ಈ ವಜ್ರ ಅತಿ ದೊಡ್ಡ ಕಟ್ ಡೈಮಂಡ್ ಎಂದು ಗಿನ್ನೆಸ್ ವಿಶ್ವ ದಾಖಲೆಯನ್ನೂ ಹೊಂದಿದೆ. ದುಬೈನಲ್ಲಿ ಪ್ರದರ್ಶನದ ಬಳಿಕ ವಜ್ರವನ್ನು ಲಾಸ್ ಏಂಜಲೀಸ್ ಮತ್ತು ಲಂಡನ್‌ಗೆ ಕೊಂಡೊಯ್ಯಲಾಗುತ್ತದೆ. ಫೆಬ್ರವರಿ 3ರಿಂದ ಏಳು ದಿನಗಳ ಕಾಲ ಹರಾಜು ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *