ಮಲಯಾಳಂ ಖ್ಯಾತ ನಿರ್ದೇಶಕನ ವಿರುದ್ಧ ಅತ್ಯಾಚಾರ ದೂರು ದಾಖಲು

Public TV
1 Min Read

ರು ಅಡಾರ್ ಲವ್ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮಲಯಾಳಂ (Malayalam)ನಿರ್ದೇಶಕ ಒಮರ್ ಲಲ್ಲು (Omar Lulu) ವಿರುದ್ಧ ಅತ್ಯಾಚಾರ ದೂರು ದಾಖಲಾಗಿದೆ. ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಾಗಿದೆ.

ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಿರ್ದೇಶಕರು ತಮಗೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ದಾಖಲು ಮಾಡಿದ್ದರು. ಈ ಪ್ರಕರಣ ಈಗ ನಿಡುಂಬಸ್ಸೇರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಅವಕಾಶ ಕೊಡುವ ನೆಪದಲ್ಲಿ ನನ್ನೊಂದಿಗೆ ನಿರ್ದೇಶಕ ಪ್ರವಾಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಈ ಪ್ರಕರಣವನ್ನು ನಿರ್ದೇಶಕರು ತಳ್ಳಿ ಹಾಕಿದ್ದಾರೆ. ನನ್ನ ಘನತೆಯನ್ನು ಹಾಳು ಮಾಡುವುದಕ್ಕಾಗಿ ಈ ನಟಿ ಸುಳ್ಳು ಆರೋಪ ಮಾಡಿ, ದೂರು ನೀಡಿದ್ದಾರೆ. ಅವರಿಗೆ ಅವಕಾಶ ನೀಡಲಿಲ್ಲ ಎನ್ನುವ ಕಾರಣವೂ ಇದೆ ಎಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಲ್ಲು ಅವರಿಗೆ ಮಧ್ಯಂತರ ಜಾಮೀನು ಕೂಡ ಮಂಜೂರಾಗಿದೆ.

Share This Article