ಸಹ ಕಲಾವಿದೆಯ ಮೇಲೆ ರೇಪ್‌ – ಮಡೆನೂರು ಮನು ಜೈಲುಪಾಲು

Public TV
1 Min Read

ಬೆಂಗಳೂರು: ಸಹ ಕಲಾವಿದೆಯ ಮೇಲೆ ಅತ್ಯಾಚಾರ (Rape) ಎಸಗಿದ ಪ್ರಕರಣದಲ್ಲಿ ನಟ ಮಡೆನೂರು ಮನು (Madenur Manu) ಜೈಲುಪಾಲಾಗಿದ್ದಾರೆ. ಕೋರ್ಟ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿದೆ.

5 ದಿನಗಳ ಪೊಲಿಸ್‌ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಇಂದು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಲತ್ತಹಳ್ಳಿಯಲ್ಲಿ ಮನುಗೆ ಮೆಡಿಕಲ್ ಟೆಸ್ಟ್ ಮಾಡಿಸಲಾಯಿತು. ಇದನ್ನೂ ಓದಿ: ಬೇಕಂತಲೇ ಪಿತೂರಿ ಮಾಡಲಾಗಿದೆ, ನನ್ನ ಗಂಡನಿಗೆ ನ್ಯಾಯ ಸಿಗೋವರೆಗೂ ಹೋರಾಡ್ತೀನಿ: ಮಡೆನೂರು ಮನು ಪತ್ನಿ

ಮೆಡಿಕಲ್‌ ಟೆಸ್ಟ್‌ ನಡೆದ ಬಳಿಕ ಪೊಲೀಸರು ಮಧ್ಯಾಹ್ನ 3ನೇ ಎಸಿಎಂಎಂ ಕೋರ್ಟ್‌ಗೆ (ACMM Court) ಹಾಜರು ಪಡಿಸಿದರು. ಈ ವೇಳೆ ನ್ಯಾಯಾಧೀಶರು ಮನು ಪರ ವಕೀಲರಿಗೆ ಕೆಲ ಪ್ರಶ್ನೆ ಕೇಳಿದರು.

ಈ ಪ್ರಶ್ನೆಗೆ, ನನ್ನ ಕಕ್ಷಿದಾರರು ರಿಯಾಲಿಟಿ ಶೋನಲ್ಲಿ ಅಭಿನಯಿಸಿದ್ದಾರೆ. ಮದುವೆಯಾಗಿದೆ, ಆದರೆ ದೂರುದಾರೆ ಬೇರೆಯವರು ಎಂದು ಉತ್ತರ ನೀಡಿದರು. ಇದನ್ನೂ ಓದಿ: ಅವಳ ಹಿಂದೆ ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್‌ ಇದ್ದಾಳೆ – ರೇಪ್‌ ಕೇಸ್‌ ದಾಖಲಾದ ಬಳಿಕ ಮಡೆನೂರು ಮನು ಬಾಂಬ್‌

ದೂರುದಾರೆಗೆ ಮದುವೆ ಆಗಿದ್ಯಾ ಎಂದು ಕೇಳಿದ್ದಕ್ಕೆ ಸಂತ್ರಸ್ತೆಯ ಪರ ವಕೀಲೆ ಮೊಬೈಲ್‌ನಲ್ಲಿರುವ ಕೆಲ ವಿಡಿಯೋವನ್ನು ನ್ಯಾಯಾಲಯಕ್ಕೆ ನೀಡಿದರು. ಅಂತಿಮವಾಗಿ ಕೋರ್ಟ್‌ 14 ದಿನಗಳ ಕಾಲ ಮನುವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

Share This Article