ಬಾಲಕಿಯ ಮೇಲೆ ಅತ್ಯಾಚಾರ – ಐವರು ಕಾಮುಕರು ಅರೆಸ್ಟ್

Public TV
1 Min Read

ಮಡಿಕೇರಿ: ಇಬ್ಬರು ಬಾಲಕಿಯರನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಓರ್ವ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಕೇರಳ ಹಾಗೂ ಕೊಡಗು ಗಡಿಭಾಗದ ಕುಟ್ಟ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕುಟ್ಟ ಸಮೀಪದ ನಾಥಂಗಾಲದ ನವೀಂದ್ರ (24), ಅಕ್ಷಯ್ (27), ಕೇರಳದ ತೋಳಟ್ಟಿಯ ನಡುಂದನ ಕಾಲೊನಿಯ ರಾಹುಲ್ (21), ಮನು (25) ಹಾಗೂ ಸಂದೀಪ್ (27) ಎಂದು ಗುರುತಿಸಲಾಗಿದೆ. ಐವರು ಯುವಕರು ನಾಥಂಗಾಲದ ಸಮೀಪ ಇಬ್ಬರು ಬಾಲಕಿಯರನ್ನು ಬಲವಂತವಾಗಿ ಕಾರಿನಲ್ಲಿ ಹತ್ತಿಸಿಕೊಂಡಿದ್ದಾರೆ. ಬಳಿಕ ಓರ್ವ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಮತ್ತೊರ್ವ ಬಾಲಕಿ ತಪ್ಪಿಸಿಕೊಂಡು ಸಮೀಪದಲ್ಲೇ ಇದ್ದ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾಳೆ. ಕೂಡಲೇ ಗ್ರಾಮಸ್ಥರು ಕಾರನ್ನು ತಡೆದಿದ್ದಾರೆ. ಈ ವೇಳೆ ಯುವಕರು ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದರು.‌ ಇದನ್ನೂ ಓದಿ: Love Jihad| ನಾಪತ್ತೆಯಾಗಿದ್ದ ಯುವತಿ ಅನ್ಯಕೋಮಿನ ಯುವಕನೊಂದಿಗೆ ಪತ್ತೆ

ಓರ್ವ ಬಾಲಕಿಯ ಮೇಲೆ ಇಬ್ಬರು ಯುವಕರು ಅತ್ಯಾಚಾರ ಎಸಗಿದ್ದು, ಮತ್ತೊಬ್ಬ ಬಾಲಕಿಯ ಮೇಲೆ ಮೂವರು ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮುಂಬೈ ಹಿಟ್&ರನ್ ಕೇಸ್ – ಆರೋಪಿಗೆ ಮದ್ಯ ನೀಡಿದ್ದ ಪಬ್ ನೆಲಸಮ

Share This Article