Gold Smuggling Case | ಸ್ವಂತ ಚಿನ್ನಾಭರಣ ಮಳಿಗೆ ಆರಂಭಿಸಲು ಪ್ಲ್ಯಾನ್‌ ಮಾಡಿದ್ದ ರನ್ಯಾ

Public TV
2 Min Read

– 2020ರಿಂದ ಈವರೆಗೆ 90 ಬಾರಿ ವಿದೇಶಿ ಪ್ರಯಾಣ ಬೆಳೆಸಿದ್ದ ನಟಿ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ (Gold Smuggling Case) ದಿನಕ್ಕೊಂದು ಟ್ವಿಸ್ಟ್ ಸಿಗ್ತಾ ಇದೆ. ನಟಿ ರನ್ಯಾ ರಾವ್ (Ranya Rao) ಬೇರೆಯವರಿಗೆ ಚಿನ್ನ ನೀಡಿ ಅದರ ಲಾಭಾಂಶದಿಂದ ಬೇಸತ್ತಿದ್ಲಂತೆ. ಅಷ್ಟೊಂದು ಕಷ್ಟ ಪಟ್ಟು ವಿದೇಶದಿಂದ ಬೆಂಗಳೂರಿಗೆ ತರ್ತೀನಿ ಅದ್ರಲ್ಲಿ ಸಿಗ್ತಾ ಇರೋದು ಪುಡಿಗಾಸು, ಜೀವ, ಜೀವನ ಪಣಕ್ಕಿಟ್ಟು ಚಿನ್ನ ತಂದ್ರೆ ಲಕ್ಷ ಲೆಕ್ಕದಲ್ಲಿ ಲಾಭ ಪಡೆಯೋದರ ಬದಲಾಗಿ ತಾನಗಿಯೇ ಚಿನ್ನಾಭರಣದ ಅಂಗಡಿ ಪ್ರಾರಂಭಿಸೋ ಚಿಂತನೆಯಲ್ಲಿದ್ಲಂತೆ ರನ್ಯಾರಾವ್.

ಬೆಂಗಳೂರಿನಲ್ಲೊಂದು (Bengaluru) ದೊಡ್ಡದಾದ ಗ್ರ್ಯಾಂಡ್ ಜ್ಯುವೆಲ್ಲರ್ಸ್ ತೆರೆಯೋದಕ್ಕೆ ತಯಾರಿ ನಡೆದಿತ್ತು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪುತ್ರನ ನಾಮಕರಣ ಸಂಭ್ರಮದ ಫೋಟೋ ಹಂಚಿಕೊಂಡ ಅಂಬಿ ಸೊಸೆ

ಇತರ ಮಹಾನಗರಗಳಿಂದ್ಲೂ ರನ್ಯಾ ದುಬೈ ಪ್ರವಾಸ:
ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಸಂಭಂಧ ಟ್ರಾವೆಲ್ ಹಿಸ್ಟರಿಯಲ್ಲಿ ಭಾರತದ ಯಾವ ಯಾವ ಏರ್ಪೋರ್ಟ್‌ನಿಂದ ದುಬೈ ಟ್ರಿಪ್ ಮಾಡಿದ್ದಾಳೆ ಅನ್ನೊ ಅಂಶ ಹೊರಬಿದ್ದಿದೆ. 2020 ರಿಂದ ಇದುವರೆಗೆ 90 ಬಾರಿ ವಿದೇಶ ಪ್ರಯಾಣ ಮಾಡಿರುವ ರನ್ಯಾ ರಾವ್, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 60 ಬಾರಿ ಪ್ರಯಾಣ ಮಾಡಿದ್ದಾಳೆ ಎಂಬುದು ಗೊತ್ತಾಗಿದೆ.

ಇನ್ನೂ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 25 ಬಾರಿ ಪ್ರಯಾಣ, ಚೆನ್ನೈ, ಹೈದರಾಬಾದ್‌ನಿಂದ ತಲಾ ಎರಡು ಬಾರಿ ಪ್ರಯಾಣ, ಕೋಲ್ಕತ್ತಾದಿಂದ ಒಂದು ಬಾರಿ ರನ್ಯಾ ಪ್ರಯಾಣ ಮಾಡಿರೋದು ಗೊತ್ತಾಗಿದೆ. ಕಳೆದ 5 ವರ್ಷಗಳ ಟ್ರಾವಲ್ ಹಿಸ್ಟರಿಯಲ್ಲಿ 2024 ಈಕೆಗೆ ಗೋಲ್ಡನ್ ಎರಾ ಆಗಿದ್ದು, 2024ರ ಜನವರಿಯಿಂದ ಮಾರ್ಚ್ 2025ರ ವರೆಗೆ 46 ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದದಿಂದ ದುಬೈಗೆ ಪ್ರಯಾಣ ಮಾಡಲಾಗಿದೆ. ಇನ್ನು ತನಿಖೆಯಲ್ಲಿ 2023 ಜುಲೈ 28 ರಿಂದ ಸ್ಮಗ್ಲಿಂಗ್ ನಡೆಸಿರೊ ಶಂಕೆ ವ್ಯಕ್ತಪಡಿಸಲಾಗಿದ್ದು, 51 ಬಾರಿ ದುಬೈಗೆ ತೆರಳಿ 24 ಘಂಟೆ ಒಳಗೆ ರನ್ಯಾ ವಾಪಸ್ಸು ಬಂದಿರೋದು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಇಷ್ಟು ಬಾರಿಯೂ ಗೋಲ್ಡ್ ಸ್ಮಗ್ಲಿಂಗ್ ಮಾಡಿರುವ ಬಗ್ಗೆ ಅನುಮಾನಗೊಂಡಿರುವ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಹೆಚ್‍ಡಿಕೆ ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ

Share This Article