ಕಾಂಗ್ರೆಸ್ ಸಚಿವರಿಗೆ ರನ್ಯಾ ಕರೆ ಮಾಡಿದ್ದಾಳೆ: ಶಾಸಕ ಭರತ್ ಶೆಟ್ಟಿ ಬಾಂಬ್

Public TV
1 Min Read

– ನಟಿಯನ್ನ ಬಚಾವ್ ಮಾಡಲು ಸಚಿವರು ಪ್ರಭಾವ ಬೀರಿದ್ದಾರೆ ಎಂದು ಆರೋಪ

ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ (Gold Smuggling) ಕೇಸಲ್ಲಿ ರನ್ಯಾ ರಾವ್ (Ranya Rao) ಕೆಲವು ಕಾಂಗ್ರೆಸ್ ಸಚಿವರಿಗೆ ಕರೆ ಮಾಡಿ ಬಚಾವ್ ಆಗಲು ಯತ್ನಿಸಿದ್ದಾಳೆ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ (Bharath Shetty) ಹೊಸ ಬಾಂಬ್ ಸಿಡಿಸಿದ್ದಾರೆ.

ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವರು ಕೂಡ ಆಕೆಯನ್ನು ರಕ್ಷಿಸಲು ಕರೆ ಮಾಡಿ ಪ್ರಭಾವ ಬೀರುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಮಾತನಾಡುತ್ತಿದ್ದಾರೆ. ಈಗ ಸಿಬಿಐ ಈ ಪ್ರಕರಣವನ್ನು ತೆಗೆದುಕೊಂಡ ಕಾರಣ ಇದರ ಹಿಂದೆ ಯಾರೆಲ್ಲಾ ಇದ್ದಾರೆ, ಯಾರ ಕೈವಾಡವಿದೆ ಎಂಬುದು ಖಂಡಿತ ಮುನ್ನಲೆಗೆ ಬರುತ್ತದೆ. ಸಿಬಿಐ ತನಿಖಾ ವರದಿಗೋಸ್ಕರ ನಾವೆಲ್ಲಾ ಕಾಯುತ್ತಿದ್ದೇವೆ ಎಂದರು. ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ ಅಕ್ರಮ ಆರೋಪ – ಛತ್ತೀಸ್‌ಗಢ ಮಾಜಿ ಸಿಎಂ, ಪುತ್ರನ ಮನೆ ಮೇಲೆ ED ದಾಳಿ

ರನ್ಯಾ ರಾವ್ ಒಡೆತನದ ಕಂಪನಿಗೆ ಸರ್ಕಾರ ಜಮೀನು ಮಂಜೂರು ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಕ್ರಿಮಿನಲ್ ಕೇಸ್ ಆಗಿದೆ. ಜಮೀನು ಮಂಜೂರಾತಿ ಪ್ರಕ್ರಿಯೆಯಲ್ಲಿ ತಪ್ಪಿದ್ದರೆ ಹೇಳಲಿ. ಈ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪುಗಳಾಗಿಲ್ಲ. ಜಮೀನು ಮಂಜೂರಾತಿ ಪ್ರಕ್ರಿಯೆ ಬೇಗ ಆಗಿದೆ ಎಂಬುದು ಇವರ ಆರೋಪ. ನಿಮ್ಮದೇ ಸರ್ಕಾರ ಇದೆ. ಜಾಗ ಮಂಜೂರಾತಿಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ತನಿಖೆ ಮಾಡಿಸಿ ಎಂದು ಹೇಳಿದರು. ಇದನ್ನೂ ಓದಿ: ಹಾವೇರಿ| 33 ಸೆಕೆಂಡ್ ನಲ್ಲಿ 33 ಲಕ್ಷ ಹಣ ಕಳ್ಳತನ – ಓರ್ವ ಆರೋಪಿ ಅರೆಸ್ಟ್

Share This Article