ಗಿಲ್‌ ಶತಕದಾಟ ವ್ಯರ್ಥ – ಪಂಜಾಬ್‌ ವಿರುದ್ಧ ಗೆದ್ದು ಬೀಗಿದ ಕರ್ನಾಟಕ

Public TV
1 Min Read

– ಕರ್ನಾಟಕ ತಂಡಕ್ಕೆ ಇನ್ನಿಂಗ್ಸ್‌ ಜೊತೆಗೆ 207 ರನ್‌ಗಳ ಭರ್ಜರಿ ಜಯ

ಬೆಂಗಳೂರು: ರಣಜಿ ಟ್ರೋಫಿ ದೇಶೀಯ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡ ಇನ್ನಿಂಗ್ಸ್‌ ಜೊತೆಗೆ 207 ರನ್‌ಗಳ ಜಯ ಸಾಧಿಸಿದೆ. ಶುಭಮನ್‌ ಗಿಲ್‌ ಶತಕದಾಟ ವ್ಯರ್ಥವಾಗಿದ್ದು, ಪಂಜಾಬ್‌ ಹೀನಾಯ ಸೋಲನುಭವಿಸಿದೆ.

ಶನಿವಾರ ನಡೆದ 3ನೇ ದಿನದಾಟದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 63.4 ಓವರ್‌ಗಳಲ್ಲಿ 213 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು. ಪಂಜಾಬ್‌ ನಾಯಕ ಶುಭಮನ್‌ ಗಿಲ್‌ (102) ಶತಕದ ಸಾಧನೆ ಮಾಡಿದರು. ಗಿಲ್‌ ಹೊರತುಪಡಿಸಿ ಉಳಿದ ಯಾವ ಬ್ಯಾಟರ್‌ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು.

ಕರ್ನಾಟಕದ ಪರ ಯಶೋವರ್ಧನ್‌ ಹಾಗೂ ಶ್ರೇಯಸ್‌ ಗೋಪಾಲ್‌ ತಲಾ ಮೂರು ಮತ್ತು ಪ್ರಸಿದ್ಧ ಕೃಷ್ಣ ಎರಡು ವಿಕೆಟ್‌ ಕಿತ್ತರು.

ಮೊದಲ ಇನ್ನಿಂಗ್ಸ್‌ನಲ್ಲಿ ವಾಸುಕಿ ಕೌಶಿಕ್‌ (4) ಮತ್ತು ಅಭಿಲಾಷ್‌ ಶೆಟ್ಟಿ (3) ದಾಳಿಗೆ ನಲುಗಿದ್ದ ಪಂಜಾಬ್‌ ಕೇವಲ 55ಕ್ಕೆ ಆಲೌಟ್‌ ಆಗಿತ್ತು. ಇದಕ್ಕೆ ಉತ್ತರವಾಗಿ ಕರ್ನಾಟಕ 475 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಸ್ಮರಣ್‌ ರವಿಚಂದ್ರನ್‌ ಚೊಚ್ಚಲ ದ್ವಿಶತಕ (203) ಆಟವಾಡಿ ಗಮನ ಸೆಳೆದರು. ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 320 ರನ್‌ಗಳ ಮುನ್ನಡೆ ಸಾಧಿಸಿತ್ತು.

Share This Article