ಭಾರತ ನೀಡಿದ ಹಣಕಾಸಿನ ನೆರವು ದೇಣಿಗೆಯಲ್ಲ: ಶ್ರೀಲಂಕಾ ಪ್ರಧಾನಿ

Public TV
1 Min Read

ಕೊಲೊಂಬೋ: ಭಾರತವು ಒದಗಿಸುವ ಹಣಕಾಸಿನ ನೆರವು ದೇಣಿಗೆಯಲ್ಲ ಎಂದು ಶ್ರೀಲಂಕಾದ ಪ್ರಧಾನ ಮಂತ್ರಿ ರಾನಿಲ್ ವಿಕ್ರಮಸಿಂಘೆ ಸ್ಪಷ್ಟಪಡಿಸಿದರು.

ಸಂಸತ್ತಿನಲ್ಲಿ ಮಾತನಾಡಿದ ಅವರು, ದೇಶವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿರುವುದರಿಂದ ಭಾರತವು ಹಣವನ್ನು ಸಾಲದ ರೂಪದಲ್ಲಿ ನೀಡಿದೆ. ಇದನ್ನು ಮರುಪಾವತಿ ಮಾಡಲು ಯೋಜನೆಯನ್ನು ಹೊಂದಬೇಕು ಎಂದು ತಿಳಿಸಿದರು.

ಭಾರತದಿಂದ ಕ್ರೆಡಿಟ್ ಲೈನ್ ಅಡಿಯಲ್ಲಿ 31,32,54,000 ರೂ. ಮೊತ್ತದ ಸಾಲವನ್ನು ತೆಗೆದುಕೊಂಡಿದ್ದೇವೆ. ಭಾರತವು ಈ ರೀತಿ ನಮ್ಮನ್ನು ನಿರಂತರವಾಗಿ ಬೆಂಬಲಿಸಲು ಸಾಧ್ಯವಾಗುವುದಿಲ್ಲ. ಅವರ ಸಹಾಯಕ್ಕೂ ಮಿತಿ ಇರುತ್ತದೆ. ಇದರಿಂದಾಗಿ ನಾವು ಸಾಲವನ್ನು ಮರುಪಾವತಿಸಬೇಕು ಎಂದು ತಿಳಿಸಿದರು.

SHRILANKA

ದ್ವೀಪ ರಾಷ್ಟ್ರ ತನ್ನ ಸ್ವಾತಂತ್ರ್ಯದ ಬಳಿಕ ಎಂದೂ ಸಂಭವಿಸದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲಿನ 2 ಕೋಟಿಗೂ ಅಧಿಕ ಜನರು ಆಹಾರ, ಇಂಧನ ಹಾಗೂ ಔಷಧಕ್ಕಾಗಿ ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ದೇಶ ಭಾರೀ ಹಣದುಬ್ಬರ ಹಾಗೂ ಸುದೀರ್ಘ ವಿದ್ಯುತ್ ಕಡಿತವನ್ನೂ ಎದುರಿಸುತ್ತಿದೆ. ಶ್ರೀಲಂಕಾ ಎರಡು ವಾರ ಶಟ್‍ಡೌನ್ – ತುರ್ತು ಸೇವೆಗಳು ಮಾತ್ರ ಲಭ್ಯ

ಸ್ಥಳೀಯ ಆರ್ಥಿಕ ಪರಿಸ್ಥಿತಿಗಳನ್ನು ನಿರ್ಣಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಉನ್ನತ ಶ್ರೇಣಿಯ ಅಧಿಕಾರಿಗಳ ತಂಡ ನಾಳೆ ಕೊಲಂಬೊಗೆ ಆಗಮಿಸಲಿದೆ. ಇದನ್ನೂ ಓದಿ: ಪೆಟ್ರೋಲ್‍ಗಾಗಿ ಕ್ಯೂ ನಿಂತ ಜನರಿಗೆ ಟೀ, ಬನ್ ನೀಡಿದ ಮಾಜಿ ಕ್ರಿಕೆಟಿಗ

Live Tv

Share This Article
Leave a Comment

Leave a Reply

Your email address will not be published. Required fields are marked *