ಹೈದರಾಬಾದ್: ಟಾಲಿವುಡ್ ನ ಬಹುನಿರೀಕ್ಷತ ರಾಮ್‍ಚರಣ್ ಅಭಿನಯದ ‘ರಂಗಸ್ಥಳಂ’ ಮಾರ್ಚ್ 30ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆಗೆ ಈಗಾಗಲೇ ಅಭಿಮಾನಿಗಳು ಸೇರಿದಂತೆ ಟಾಲಿವುಡ್ ಗಣ್ಯರೆಲ್ಲಾ ಶುಭಕೋರುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಮ್‍ಚರಣ್ ತಂದೆ ಮೆಗಾಸ್ಟಾರ್ ಚಿರಂಜೀವಿ ಸಹ ಭಾವನಾತ್ಮಕವಾಗಿ ಪುತ್ರನ ಸಿನಿಮಾಗೆ ವಿಶ್ ಮಾಡಿದ್ದಾರೆ.
ಖೈದಿ ಸಿನಿಮಾ ಹೇಗೆ ನನ್ನ ಜೀವನದಲ್ಲಿ ಪ್ರಮುಖ ಪಾತ್ರವನ್ನ ಪಡೆದುಕೊಂಡಿದೆಯೋ, ಅದೇ ರೀತಿಯಲ್ಲಿ ರಂಗಸ್ಥಳಂ ಚಿತ್ರ ರಾಮ್ ಜೀವನದ ಮಹತ್ವದ ಮೈಲಿಗಲ್ಲು ಆಗಲಿದೆ. ಈಗಾಗಲೇ ನಾನು ಸಿನಿಮಾ ವೀಕ್ಷಣೆ ಮಾಡಿದ್ದು, ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ನನಗೆ ರಾಮ್ ಚರಣ್ ತಂದೆ ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ ಅಂತಾ ಮೆಗಾಸ್ಟರ್ ಹೇಳಿಕೊಂಡಿದ್ದಾರೆ.
ಸಿನಿಮಾ ಪ್ರಮೋಶನ್ ನಲ್ಲಿ ಬ್ಯೂಸಿಯಾಗಿರುವ ರಾಮ್ ಚರಣ್ ಮಂಗಳವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು. ರಾಮ್ ಬ್ಯೂಸಿ ಆಗಿದ್ದರಿಂದ ತಂದೆ ರವಿವಾರದಂದು ಮಗನ ಹುಟ್ಟುಹಬ್ಬ ಆಚರಿಸಿದ್ದಾರೆ. ಪುತ್ರ ರಾಮ್‍ಚರಣ್ ಪೋಷಕರು ಸುಂದರವಾದ ವಾಚ್ ಗಿಫ್ಟ್ ನೀಡಿದ್ದಾರೆ. ಬರ್ತ್ ಡೇ ಫೋಟೋಗಳನ್ನು ರಾಮ್‍ಚರಣ್ ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ತಂದೆ-ತಾಯಿಗೆ ಧನ್ಯವಾದ ಹೇಳಿದ್ದಾರೆ.
ಸುಕುಮಾರ್ ನಿರ್ದೇಶನದಲ್ಲಿ ರಂಗಸ್ಥಳಂ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ರಾಮ್‍ಚರಣ್ ಗೆ ನಾಯಕಿಯಾಗಿ ಸಮಂತಾ ಅಕ್ಕಿನೇನಿ ಜೊತೆಯಾಗಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತವಿದ್ದು, ನವೀನ್ ಯೆರ್ಮಿನಿ, ರವಿ ಶಂಕರ್ ಮತ್ತು ಮೋಹನ್ ಚೆರುಕುರಿ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.