ಬಿಜೆಪಿ ಸರ್ಕಾರದ ಅಂತ್ಯ ಶುರುವಾಗಿದೆ: ಸುರ್ಜೆವಾಲಾ

Public TV
1 Min Read

ಬೆಳಗಾವಿ: ಕರ್ನಾಟಕದಲ್ಲಿ ಬಿಜೆಪಿಯಿಂದ ಅವರದೇ ಕಾರ್ಯಕರ್ತರ ಲೂಟಿ ನಡೆದಿದ್ದು, ಭ್ರಷ್ಟಾಚಾರದಲ್ಲಿ ಬೊಮ್ಮಾಯಿ ಸರ್ಕಾರ ಮುಳುಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಅವರದೇ ಪಕ್ಷದ ಕಾರ್ಯಕರ್ತನ ಹತ್ಯೆಯಾಗಿದೆ. ಆತ್ಮಹತ್ಯೆಗೆ ಪ್ರಚೋದಿಸಿದ್ದು ಮಂತ್ರಿ ಕೆ.ಎಸ್. ಈಶ್ವರಪ್ಪ. ಇಷ್ಟೆಲ್ಲಾ ಆದ ಬಳಿಕ ಬೊಮ್ಮಾಯಿ ಸರ್ಕಾರ ಈಶ್ವರಪ್ಪ ಜೊತೆಗೆ ನಿಂತುಕೊಂಡಿದೆ. ಇದರ ಅರ್ಥ ಈಶ್ವರಪ್ಪ ಅಷ್ಟೇ ಅಲ್ಲ ಬೊಮ್ಮಾಯಿ ಕೂಡ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಂತೋಷ್‌ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಕಾಂಗ್ರೆಸ್‌ ನಾಯಕರ ಸಾಂತ್ವನ


ಬಿಜೆಪಿ ಸರ್ಕಾರದ ಮೇಲೆ ಒಂದಲ್ಲಾ ಒಂದು ಆರೋಪಗಳು ಬರುತ್ತಿದೆ. ಗುತ್ತಿಗೆದಾರ ಸಂಘ ಕೂಡ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದೆ. ಸರ್ಕಾರದ ವ್ಯವಸ್ಥೆ ಭ್ರಷ್ಟವಾಗಿದೆ. ಈ ಭ್ರಷ್ಟಾಚಾರವನ್ನು ಕರ್ನಾಟಕದ ಜನರು ಸಹಿಸಿಕೊಳ್ಳುವುದಿಲ್ಲ. ಕಿತ್ತು ಜೈಲಿನ ಕಂಬಿ ಒಳಗೆ ಜನ ಬಿಸಾಕ್ತಾರೆ. ಬಿಜೆಪಿ ಸರ್ಕಾರದ ಅಂತ್ಯ ಶುರುವಾಗಿದೆ. ಸಂತೋಷ್ ಸಾವಿಗೆ ನ್ಯಾಯ ಕೊಡಿಸುತ್ತೇವೆ. ಪ್ರತಿಹಳ್ಳಿಗೂ, ಗಲ್ಲಿಗೂ ಹೋಗುತ್ತೇವೆ ಕೊನೆ ಕ್ಷಣದವರೆಗೂ ಸಂತೋಷ್ ಕುಟುಂಬದ ಜೊತೆಗೆ ಹೋರಾಟ ಮಾಡುತ್ತೇವೆ. ಕೊಲೆಗಾರ ಮಂತ್ರಿ ಜೈಲಿಗೆ ಹೋಗಬೇಕು. ಭ್ರಷ್ಟಾಚಾರ ನಿಲ್ಲಬೇಕು. ಅಲ್ಲಿವರೆಗೂ ಕಾಂಗ್ರೆಸ್ ಹೋರಾಟ ನಿಲ್ಲುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸಲಿ ಮಾಡೋದು ರಾಕ್ಷಸ ಪ್ರವೃತ್ತಿ: ಸಿದ್ದರಾಮಯ್ಯ

ರಾಜಸ್ಥಾನ, ಬಿಹಾರಕ್ಕೆ ಹೋಗಲಿಲ್ಲ ಬೆಳಗಾವಿಗೆ ಬರುತ್ತಿದ್ದೀರಿ ಎಂದು ಅರುಣ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅರುಣ್ ಸಿಂಗ್ ನಮಗಿಂತ ದೊಡ್ಡವರಿದ್ದಾರೆ. ಅವರ ಬಗ್ಗೆ ನನಗೆ ಗೌರವ ಇದೆ. ಆದ್ರೆ, ಅರುಣ್ ಸಿಂಗ್ ಅವರೇ ನೀವು ಇಷ್ಟು ನಿರ್ದಯಿ ಆಗಿ ಹೋದ್ರಾ. ಒಬ್ಬ ಅಮಾಯಕ ವಿಧವೆಯ ಕಣ್ಣೀರು ಕಾಣಿಸುವುದಿಲ್ವಾ. ನಿಮ್ಮ ಪರಿವಾರದಲ್ಲಿ ದುಃಖವನ್ನು ಯಾವತ್ತು ನೋಡೇ ಇಲ್ವಾ. ಬಿಜೆಪಿಯವರು ಇಷ್ಟೊಂದು ನಿರ್ದಯಿಗಳು ಆಗಿ ಹೋದ್ರಾ. ನಿಮಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *