ಏಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಆಲಿಯಾ-ರಣಬೀರ್

Public TV
1 Min Read

ಬಾಲಿವುಡ್ ಕ್ಯೂಟ್ ಕಪಲ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಏಪ್ರಿಲ್‍ನಲ್ಲೇ ಆಗುತ್ತೆ ಎಂದು ಬಿ’ಟೌನ್‍ನಲ್ಲಿ ಕಳೆದ ವಾರದಿಂದ ಹರಿದಾಡುತ್ತಿತ್ತು. ಸುಮಾರು 4 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿ ಬಂದಿದೆ. ಶುಕ್ರವಾರ, ಆಲಿಯಾ ಅವರ ಚಿಕ್ಕಪ್ಪ ರಾಬಿನ್ ಭಟ್ ಸಂದರ್ಶನದಲ್ಲಿ ಅವರ ಮದುವೆಯ ದಿನಾಂಕವನ್ನು ಬಹಿರಂಗಪಡಿಸಿದರು.

Ranbir- Alia Wedding: ಮದುವೆಗೂ ಮುನ್ನ ರಣಬೀರ್ ಬ್ಯಾಚುಲರ್ ಪಾರ್ಟಿ; ಆಹ್ವಾನಿತರ ಹೆಸರು ಬಹಿರಂಗ | Ranbir Kapoor and Alia Bhatt wedding Ranbir Kapoor bachelors party guest list revealed | TV9 Kannada

ರಾಬಿನ್ ಭಟ್ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಏಪ್ರಿಲ್ 14 ರಂದು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹವಾಗಲಿದ್ದಾರೆ ಎಂದು ಖಚಿತಪಡಿಸಿದರು. ಆಲಿಯಾ ಅವರ ಮೆಹಂದಿ ಸಮಾರಂಭವು ಏಪ್ರಿಲ್ 13 ರಂದು ನಡೆಯಲಿದೆ. ರಣಬೀರ್ ಅವರ ಬಾಂದ್ರಾ ಮನೆಯಲ್ಲಿ ಮದುವೆ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. ರಾಬಿನ್ ಅವರು ಮಹೇಶ್ ಭಟ್ ಅವರ ಮಲಸಹೋದರ ಮತ್ತು ಬಾಲಿವುಡ್ ಬರಹಗಾರರಾಗಿದ್ದಾರೆ. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

Does Ranbir Kapoor Alia Bhatt gets secretly married ranbir alia these photos gets viral amid wedding bells | शादी की खबरों से बीच सामने आईं रणबीर कपूर और आलिया भट्ट की ये

ಪ್ರೀತಿ ಪ್ರಾರಂಭವಾಗಿದ್ದು ಯಾವಾಗ?
ರಣಬೀರ್ ಮತ್ತು ಆಲಿಯಾ 2017 ರಲ್ಲಿ ‘ಬ್ರಹ್ಮಾಸ್ತ್ರ’ ಸಿನಿಮಾ ಸೆಟ್‍ನಲ್ಲಿ ಭೇಟಿಯಾಗಿದ್ದರು. ಈ ವೇಳೆಯೇ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಮೇ 2018 ರಲ್ಲಿ ನಟ ಸೋನಮ್ ಕಪೂರ್ ಅವರ ವಿವಾಹದ ಆರತಕ್ಷತೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ ಈ ಜೋಡಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು.

ಆಲಿಯಾ, ರಣಬೀರ್ ಬೈಸಾಖಿ ವೇಳೆ ಮದುವೆಯಾಗಲು ಇಚ್ಛಿಸುತ್ತಿರುವುದೇಕೆ? Why Ranbir and Alia want to marry on Baisakhi? - Lokadarshan Daily Kannada News

ಸಂದರ್ಶನವೊಂದರಲ್ಲಿ ರಣಬೀರ್ ಕೂಡ ತಾವು ಡೇಟಿಂಗ್ ಮಾಡುತ್ತಿರುವುದನ್ನು ಖಚಿತಪಡಿಸಿದ್ದರು. 2020 ರಲ್ಲಿ, ಕೋವಿಡ್-19 ಇಲ್ಲದಿದ್ದರೆ ನಾವು ಮದುವೆಯಾಗುತ್ತಿದ್ದೆವು ಎಂದು ರಣಬೀರ್ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *