ರಜನಿಕಾಂತ್‌ಗೆ ವಿಲನ್‌ ಆದ ರಾಣಾ ದಗ್ಗುಬಾಟಿ

Public TV
1 Min Read

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ‘ಲಾಲ್ ಸಲಾಂ’ (Lal Salam) ಸಿನಿಮಾ ಸೋಲಿನ ನಂತರ ವೆಟ್ಟೈಯಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತಲೈವಾ ಸಿನಿಮಾದಲ್ಲಿ ಟಾಲಿವುಡ್ ನಟ ರಾಣಾ ದಗ್ಗುಬಾಟಿ (Rana Daggubati) ನಟಿಸಿದ್ದಾರೆ. ರಜನಿಕಾಂತ್‌ ಮುಂದೆ ರಾಣಾ ಅಬ್ಬರಿಸಿದ್ದಾರೆ.

‘ಜೈ ಭೀಮ್’ (Jai Bhim) ಖ್ಯಾತಿಯ ಜ್ಞಾನ್‌ವೇಲ್ ನಿರ್ದೇಶನದ ‘ವೆಟ್ಟೈಯಾನ್’ ಸಿನಿಮಾಗೆ ಸಾಥ್‌ ನೀಡಿದ್ದಾರೆ. ಚಿತ್ರೀಕರಣ ಕೂಡ ಬಿರುಸಿನಿಂದ ನಡೆಯುತ್ತಿದೆ. ರಜನಿಕಾಂತ್‌ ಮುಂದೆ ರಾಣಾ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ತಲೈವಾ ಮುಂದೆ ನೆಗೆಟಿವ್‌ ಶೇಡ್‌ನಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.

ಅಂದಹಾಗೆ, ರಜನಿಕಾಂತ್ ನಟನೆಯ 170ನೇ ಸಿನಿಮಾ ವೆಟ್ಟೈಯಾನ್ ಇದೇ ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ಬಿಗ್ ಸ್ಕ್ರೀನ್‌ಗೆ ಲಗ್ಗೆ ಇಡಲಿದೆ. ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ವೆಟ್ಟೈಯಾನ್ ಸಿನಿಮಾ ಮೂಲಕ ಮೂರು ದಶಕದ ಬಳಿಕ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಅಭೂತಪೂರ್ವ ಸಮಾಗಮಕ್ಕೆ ವೇದಿಕೆ ನಿರ್ಮಿಸಿದೆ. ಇದನ್ನೂ ಓದಿ:ಡಾಲಿ ನಟನೆಯ ‘ಉತ್ತರಕಾಂಡ’ ಟೀಮ್ ಸೇರಿಕೊಂಡ ಚೈತ್ರಾ ಆಚಾರ್

ವೆಟ್ಟೈಯಾನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿರಲಿದೆ. ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್ ಇತ್ತೀಚೆಗೆ ‘ಪೊನ್ನಿಯಿನ್ ಸೆಲ್ವನ್’ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ‘ವೆಟ್ಟೈಯಾನ್’ ಸಿನಿಮಾ ನಿರ್ಮಿಸುತ್ತಿದೆ.

Share This Article