ಜಪಾನ್ ನಲ್ಲಿ ಕುತ್ಕೊಂಡು ತನಗೀಗ 40 ವರ್ಷ ಎಂದು ಘೋಷಿಸಿಕೊಂಡ ರಮ್ಯಾ

Public TV
1 Min Read

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ಜಪಾನ್ ಗೆ ಹಾರಿದ್ದು, ಅಲ್ಲಿಂದಲೇ ವಯಸ್ಸಿನ ಮೇಘ ಸಂದೇಶವನ್ನೂ ಕಳುಹಿಸಿದ್ದಾರೆ. ಇವತ್ತು ತಮಗೀಗ 40 ವರ್ಷ ತುಂಬಿದ್ದು, ನಲವತ್ತರ ಕ್ಲಬ್ ನ ಸದಸ್ಯೆಯಾಗಿ ಬಡ್ತಿ ಪಡೆದಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ರಮ್ಯಾ ಅವರೇ ಹಂಚಿಕೊಂಡಿದ್ದಾರೆ.

ರಮ್ಯಾ ಅವರಿಗೆ ಡಾಲಿ ಧನಂಜಯ್, ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಶುಭಾಶಯ ಕೋರಿದ್ದಾರೆ. ಬಹುತೇಕ ಸಂದೇಶಗಳಿಗೆ ಅವರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.  ಈ ಹುಟ್ಟು ಹಬ್ಬಕ್ಕೆ ರಮ್ಯಾ ಅವರಿಗೆ ಡಬಲ್ ಧಮಾಕಾ. ಒಂದು ಕಡೆ ಅವರ ನಿರ್ಮಾಣ ಸಂಸ್ಥೆಯಿಂದ ಬರುತ್ತಿರುವ ಸಿನಿಮಾ ಶೂಟಿಂಗ್ ಮುಗಿಸಿದೆ. ಮತ್ತೊಂದು ಕಡೆ ಇನ್ನಷ್ಟೇ ಅವರ ನಟನೆಯ ಉತ್ತರ ಕಾಂಡ ಚಿತ್ರ ಶೂಟಿಂಗ್ ಆಗಬೇಕಿದೆ. ಹಾಗಾಗಿ ರಮ್ಯಾ ಅವರಿಗೆ ಈ ಹುಟ್ಟು ಹಬ್ಬ ವಿಶೇಷವಾಗಿದೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್‌ನಲ್ಲಿ ತಮಿಳು ನಟ ವಿಜಯ್ ಸೇತುಪತಿ

ರಮ್ಯಾ ಅವರ ಹುಟ್ಟು ಹಬ್ಬಕ್ಕೆ ಅವರ ಸಿನಿಮಾದ ಪೋಸ್ಟರ್ ಅಥವಾ ಉತ್ತರಕಾಂಡ ಸಿನಿಮಾದ ಫಸ್ಟ್ ಲುಕ್ ಏನಾದರೂ ರಿಲೀಸ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ರಮ್ಯಾ ಅವರು ಈ ದೇಶದಲ್ಲೇ ಇರದೇ ಇರುವ ಕಾರಣಕ್ಕಾಗಿ ಬಹುಶಃ ಬಿಡುಗಡೆ ಪ್ಲ್ಯಾನ್ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *