ಗೌಡ್ರು ಎಂಬ ಕಾರಣಕ್ಕೆ ʻಎಕ್ಸ್‌ಕ್ಯೂಸ್‌ ಮಿʼ ಸಿನಿಮಾ ಒಪ್ಪಿಕೊಂಡೆ: ರಮ್ಯಾ

Public TV
2 Min Read

ಮೋಹಕತಾರೆ ರಮ್ಯಾ (Ramya) ಸಿನಿಮಾರಂಗಕ್ಕೆ ಬಂದು 20 ವರ್ಷಗಳಾಗಿದೆ. ಎರಡು ದಶಕಗಳಿಂದ ರಮ್ಯಾ ಮೋಡಿ ಮಾಡಿರುವ ಪರಿ ಅಷ್ಟೀಷ್ಟಲ್ಲ. ಸಾಧಕರ ಸಾಲಿನಲ್ಲಿ ಕುಳಿತು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಸಾಧಕಿಯ ಸ್ಥಾನ ಅಲಂಕರಿಸಿರುವ ರಮ್ಯಾ ಎಲ್ಲೂ ಹೇಳಿರದ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಸಕ್ಸಸ್‌ಫುಲ್ ಚಿತ್ರ Excuse Me ಚಿತ್ರವನ್ನು ಮೊದಲು ರಮ್ಯಾ ರಿಜೆಕ್ಟ್ ಮಾಡಿದ್ರಂತೆ, ಬಳಿಕ ಈ ಸಿನಿಮಾ ಒಪ್ಪಿಕೊಳ್ಳೊಕೆ ಅಸಲಿ ಕಾರಣ ಎನು ಎಂಬುದನ್ನ ನಟಿ ಹಂಚಿಕೊಂಡಿದ್ದಾರೆ.

ದಿವ್ಯಾ ಸ್ಪಂದನ ರಮ್ಯಾ ಮೊದಲು ಆಡಿಷನ್ ಕೊಟ್ಟಿದ್ದು, ಪುನೀತ್ ನಟನೆಯ `ಅಪ್ಪು’ (Appu) ಚಿತ್ರಕ್ಕೆ ಆದರೆ ಈ ಸಿನಿಮಾಗೆ ರಮ್ಯಾ ರಿಜೆಕ್ಟ್ ಆಗಿದ್ದರು. ಬಳಿಕ ಮತ್ತೆ `ವಜ್ರೇಶ್ವರಿ ಕಂಬೈನ್ಸ್’ ರಮ್ಯಾ ಅವರನ್ನು ಸಂಪರ್ಕ ಮಾಡಿ ಅಭಿ (Abhi) ಚಿತ್ರಕ್ಕೆ ಆಫರ್ ನೀಡಿದರು. ಆಡಿಷನ್ ಮಾಡದೆ ಅಭಿ ಚಿತ್ರಕ್ಕೆ ರಮ್ಯಾ ಸೆಲೆಕ್ಟ್ ಆಗಿದ್ದರು. ಈ ಮೂಲಕ ರಮ್ಯಾ ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು.

ಅಭಿ ಸಿನಿಮಾ ಭರ್ಜರಿಯಾಗಿ ಹಿಟ್ ಆಗಿತ್ತು. ಮೊದಲ ಚಿತ್ರದಲ್ಲಿಯೇ ರಮ್ಯಾ ಪ್ರೇಕ್ಷಕರ ಗಮನ ಸೆಳೆದರು. ಈ ಚಿತ್ರದ ರಿಲೀಸ್‌ಗೂ ಮೊದಲೇ ರಮ್ಯಾಗೆ `ಎಕ್ಸ್‌ಕ್ಯೂಸ್‌ ಮಿ’ ಸಿನಿಮಾಗೆ ಆಫರ್ ಬಂದಿತ್ತು. ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ರಮ್ಯಾ ನಾಯಕಿಯಾಗಿ ಮಿಂಚಿದರು. ಆದರೆ ಈ ಸಿನಿಮಾದಲ್ಲಿ ನಟಿಸಲು ಇಷ್ಟವಿರಲಿಲ್ಲ ಎಂದು ರಮ್ಯಾ ರಿವೀಲ್ ಮಾಡಿದ್ದಾರೆ. ಪ್ರೇಮ್ (Director Prem) ಅವರು ಈ ಸಿನಿಮಾದ ಆಫರ್ ಮಾಡಿದಾಗ ನನಗೆ ಇಷ್ಟವಿರಲಿಲ್ಲ. ಆದರೆ ಅಮ್ಮ ನಮ್ಮ ಮಂಡ್ಯ ಗೌಡ್ರು ಒಪ್ಪಿಕೊ ಎಂದು ಹೇಳಿದರು. ಗೌಡ್ರು ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ ಎಂದು ಹೇಳಿದರು. ಮೊದಲು ಈ ಸಿನಿಮಾದ ಅರ್ಧ ಭಾಗದ ಕಥೆ ಮಾತ್ರ ಹೇಳಿದ್ರು ಎಂದರು.

ನಿರ್ದೇಶಕ ಪ್ರೇಮ್ ಸಿನಿಮಾ ಸೆಟ್‌ನಲ್ಲಿ ಕುಳಿತು ಕ್ಲೈಮ್ಯಾಕ್ಸ್ ಬರೆದರು ಎಂದು ಬಹಿರಂಗ ಪಡಿಸಿದ್ದಾರೆ. ಕ್ಲೈಮ್ಯಾಕ್ಸ್ ಬಗ್ಗೆ ಎಲ್ಲರಿಗೂ ಕ್ಯೂರಿಯಾಸಿಟಿ ಇತ್ತು. ಏನಾಗಲಿದೆ ಎಂದು ಎಲ್ಲರೂ ಕಾಯುತ್ತಿದ್ವೆ. ಪ್ರೇಮ್ ಕ್ಲೈಮ್ಯಾಕ್ಸ್ ಬರ್ದೆ ಇರಲಿಲ್ಲ. ಸೆಟ್‌ನಲ್ಲೇ ಕುಳಿತು ಬರೆದರು. ಅವರು ಕ್ಲೈಮ್ಯಾಕ್ಸ್ ಬರೆಯುವಾಗ ನಾವೆಲ್ಲಾ ಕುಳಿತು ಏನು ಬರೆಯುತ್ತಾರೆ ಎಂದು ಕಾಯುತ್ತಿದ್ವಿ. ಬಳಿಕ ಸಿನಿಮಾ ಮುಗಿಸಿ ರಿಲೀಸ್ ಆಯ್ತು. `ಎಕ್ಸ್‌ಕ್ಯೂಸ್‌ ಮಿ’ ಚಿತ್ರ ಯಶಸ್ವಿಯಾಯಿತು ಎಂದು ರಮ್ಯಾ ಹಳೆಯ ನೆನಪುಗಳನ್ನ ಬಿಚ್ಚಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *