ವಿನಯ್ ಜೊತೆ ರಮ್ಯಾ ಸುತ್ತಾಟ ಎಂದವರಿಗೆ ತಿರುಗೇಟು ಕೊಟ್ಟ ಮೋಹಕತಾರೆ

Public TV
1 Min Read

ಮೋಹಕತಾರೆ ನಟಿ ರಮ್ಯಾ (Ramya) ಅಮೆರಿಕದಲ್ಲಿ ಫುಲ್ ಮಸ್ತಿ ಮಾಡುತ್ತಿದ್ದಾರೆ. ಅಮೆರಿಕದಲ್ಲಿ ನಡೆಯುವ ನಾವಿಕ ಕಾರ್ಯಕ್ರಮಕ್ಕೆ ಈ ಬಾರಿ ನಟಿ ರಮ್ಯಾ ಅತಿಥಿಯಾಗಿ ಹೋಗಿದ್ದಾರೆ. ಸಮಾರಂಭದ ಬಿಡುವಿನ ವೇಳೆ ಅಮೆರಿಕದ (America) ಬ್ಯೂಟಿಫುಲ್ ಲೊಕೇಶನ್‌ನಲ್ಲಿ ಸುತ್ತಾಟ ನಡೆಸಿದ್ದಾರೆ. ಈ ಬಾರಿಯ ನಾವಿಕ ಸಮಾರಂಭಕ್ಕೆ ರಮ್ಯಾ ಜೊತೆ ನಟ ವಿನಯ್ ರಾಜ್‌ಕುಮಾರ್ (Vinay Rajkumar) ಕೂಡ ಹೋಗಿದ್ದಾರೆ. ವಿಶೇಷ ಅಂದ್ರೆ ಪುನೀತ್ ರಾಜ್‌ಕುಮಾರ್ ಕಿರಿಯ ಪುತ್ರಿ ವಂದಿತಾ ಕೂಡಾ ಇವರ ಜೊತೆಗಿದ್ದಾರೆ.

ಅಮೆರಿಕದಲ್ಲಿ ಮೂವರೂ ಎಂಜಾಯ್ ಮಾಡ್ತಿರುವ ಫೋಟೋಗಳನ್ನ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡ್ಕೊಂಡಿದ್ದು, ಫೋಟೋಗಳ ಜೊತೆಗೆ ಅದಕ್ಕೆ ಕ್ಯಾಪ್ಷನ್ ಹಾಕಿರುವ ರಮ್ಯಾ `ನಾನು ಹಾಗೂ ಬೆಸ್ಟ್ ಕಂಪನಿ’ ಎಂದು ವಿನಯ್ ರಾಜ್‌ಕುಮಾರ್ ಮತ್ತು ವಂದಿತಾ ಪುನೀತ್ ರಾಜ್‌ಕುಮಾರ್ ಹೆಸರನ್ನು ಮೆನ್ಷನ್ ಮಾಡಿದ್ದಾರೆ. ರಮ್ಯಾ ಹಂಚಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದ್ದವು. ನಟಿ ರಮ್ಯಾ ಫೋಟೋಗಳಿಗೆ ಹಲವರು ಡೇಟಿಂಗ್‌ನಲ್ಲಿ ಇದ್ದಾರೆ ಎಂದು ಬರೆದುಕೊಂಡಿದ್ದರು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ರಮ್ಯಾ `ನೀವು ತುಂಬಾ ತಮಾಷೆ ಮಾಡುತ್ತಿದ್ದೀರಾ.. ನನಗೆ ಸಹೋದರ ಸಮಾನರು ವಿನಯ್ ರಾಜ್‌ಕುಮಾರ್. ನಿಮ್ಮ ಕಲ್ಪನೆ, ಮಾತುಗಳಿಗೆ ಹಿಡಿತವಿರಲಿ’ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ರಮ್ಯಾ ವಿನಯ್ ರಾಜ್‌ಕುಮಾರ್ ಚಿಕ್ಕಪ್ಪ ಹಾಗೂ ದೊಡ್ಡಪ್ಪ ಅವರ ಜೊತೆಗೆ ಸಿನಿಮಾಗಳಲ್ಲಿ ನಾಯಕಿಯಾಗಿ ಪಾತ್ರವನ್ನ ಮಾಡಿದ್ದಾರೆ. ಅವರಿಬ್ಬರ ಮಧ್ಯೆ ಡೇಟಿಂಗ್ ಎನ್ನುವ ಯೋಚನೆ ಮಾಡುವವರಿಗೆ ಖಡಕ್ ರಿಪ್ಲೈ ಕೊಟ್ಟಿದ್ದಾರೆ ನಟಿ ರಮ್ಯಾ.

Share This Article