ಹೋಟೆಲ್ ಉದ್ಯಮದಲ್ಲಿ ನಾವೆಲ್ಲ ಅಣ್ಣ-ತಮ್ಮಂದಿರು, ಅನ್ನ ನೀಡುತ್ತೇವೆ ಹೊರತು ಕಿತ್ತುಕೊಳ್ಳುವುದಿಲ್ಲ: ರಾಮೇಶ್ವರಂ ಕೆಫೆ ಮಾಲೀಕ

By
2 Min Read

– ಶಿವರಾತ್ರಿ ದಿನ ಮತ್ತೆ ರಾಮೇಶ್ವರಂ ಕೆಫೆ ಗ್ರ್ಯಾಂಡ್ ಆಗಿ ಓಪನ್ ಆಗಲಿದೆ

ಬೆಂಗಳೂರು: ಹೋಟೆಲ್ ಉದ್ಯಮದಲ್ಲಿ ನಾವೆಲ್ಲ ಅಣ್ಣ-ತಮ್ಮಂದಿರು, ನಾವು ಒಬ್ಬರಿಗೆ ಅನ್ನ ನೀಡುತ್ತೇವೆ. ಅನ್ನ ಕಿತ್ತುಕೊಳ್ಳುವುದಿಲ್ಲ ಎಂದು ರಾಮೇಶ್ವರಂ ಕೆಫೆ (Rameshwaram Cafe) ಮಾಲೀಕ ರಾಘವೇಂದ್ರ ರಾವ್ ಹೇಳಿದ್ದಾರೆ.

ಹೋಟೆಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲ ಎಂಜಿನಿಯರ್ಸ್‌, ಆಗೆಲ್ಲ ನಮಗೆ ಕೆಲಸ ಸಿಗ್ತಿರಲಿಲ್ಲ. ಆಗ 2012ರಲ್ಲಿ ಫುಟ್‍ಪಾತ್‍ಲ್ಲಿ ರಾಮೇಶ್ವರಂ ಕೆಫೆ ಆರಂಭಿಸಿದ್ದು. ಅಬ್ದುಲ್ ಕಲಾಂ ಅವರಿಂದ ಪ್ರೇರಣೆ ಪಡೆದು, ಅವರ ಜನ್ಮಸ್ಥಳದ ಹೆಸರಿಟ್ಟಿದ್ದೇವೆ. ನಮ್ಮ ಹೋಟೆಲ್‍ನಲ್ಲಿ ಕೆಲಸ ಮಾಡುವವರು ಎಲ್ಲಾ ಹಳ್ಳಿ ಮಕ್ಕಳು. ಒಂದಲ್ಲ ಒಂದು ರೀತಿಯಲ್ಲಿ ಯಾರಿಗೂ ಬೇಡವಾದವರ ಆಶ್ರಯ ತಾಣ ಇದಾಗಿದೆ. ಓದು ಹತ್ತದೆ, ಮನೆಯಿಂದ ಹೊರಗೆ ಹಾಕಲ್ಪಟ್ಟವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ದೇವೇಗೌಡರು ಕಷ್ಟಪಟ್ಟು ಪಕ್ಷ ಕಟ್ಟಿದ್ರು, ಈಗ ಇಂತಹ ಸ್ಥಿತಿ ಬಂತಲ್ಲ: ಡಿ.ಕೆ ಶಿವಕುಮಾರ್ ವ್ಯಂಗ್ಯ

ನಮಗೆ ಆರಂಭದಿಂದಲೂ ಒಂದಲ್ಲ ಒಂದು ಹೊಡೆತಗಳು ಬೀಳುತ್ತಿವೆ. ಅದನ್ನೆಲ್ಲ ಮೆಟ್ಟಿ ಇಷ್ಟು ಎತ್ತರಕ್ಕೆ ಬೆಳೆದಿದ್ದೇವೆ. ಈ ಶುಕ್ರವಾರ ಹೋಟೆಲ್‍ನಲ್ಲಿ ಸ್ಫೋಟವಾಗಿದೆ. ಮತ್ತೆ ಬರುವ ಶುಕ್ರವಾರ ಗ್ರ್ಯಾಂಡ್ ಆಗಿ ಲಾಂಚ್ ಮಾಡುತ್ತೇವೆ. ನಮಗೆ ಸಹಕಾರ ನೀಡುತ್ತಿರುವ ಜನರು, ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದಿದ್ದಾರೆ.

ಇನ್ನೂ ಬಾಂಬ್ ಸ್ಫೋಟಕ್ಕೆ ಕಾರಣ ಏನಿರಬಹುದು? ವ್ಯಾವಹಾರಿಕ ದ್ವೇಷವೇ? ಉಗ್ರ ಕೃತ್ಯವೇ? ಎಂಬ ಸುದ್ದಿಗಾರರ ಪ್ರಶ್ನೆಗೆ, ಈ ಬಗ್ಗೆ ನಮಗೆ ಗೊತ್ತಿಲ್ಲ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ತಿಳಿಯಲಿದೆ. ನಮ್ಮ ಹೋಟೆಲ್ ವ್ಯವಹಾರದಲ್ಲಿ ನಾವೆಲ್ಲ ಅಣ್ಣ-ತಮ್ಮಂದಿರು, ಈ ವ್ಯವಹಾರದಲ್ಲಿ ನಾವು ಒಬ್ಬರಿಗೆ ಅನ್ನ ನೀಡುತ್ತೇವೆ. ಅನ್ನವನ್ನು ಕಿತ್ತುಕೊಳ್ಳುವ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬ್ಯಾಗ್ ಅಲ್ಲಿತ್ತು, ಅದು ಯಾರದೋ ಗ್ರಾಹಕರದ್ದು ಎಂದು ತಿಳಿದುಕೊಂಡಿರುತ್ತೇವೆ. ಯಾರು ಇಲ್ಲದೇ ಇದ್ದರೆ ಮಾತ್ರ ಆ ಬಗ್ಗೆ ನೋಡಲು ಹೋಗುತ್ತೇವೆ. ಇನ್ನೂ ರಾಜಾಜಿನಗರದಲ್ಲಿ ಸಿಕ್ಕಿದ್ದು ನಾರ್ಮಲ್ ಬ್ಯಾಗ್, ಅದರಲ್ಲಿ ಬಟ್ಟೆ ಇತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನಿಡಿದ್ದೆವು. ಬಳಿಕ ಪೊಲೀಸರು ಅದನ್ನು ಪರಿಶೀಲಿಸಿ, ಎಸೆದಿದ್ದಾರೆ ಎಂದರು.

ಇನ್ನೂ ಮೆಟಲ್ ಡಿಟೆಕ್ಟರ್ ಇಟ್ಟು ಪರಿಶೀಲಿಸುವಂತೆ ಡಿ.ಕೆ ಶಿವಕುಮಾರ್ ಹಾಗೂ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಮೋದಿ, ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಸ್ಮೃತಿ ಇರಾನಿ – ಬಿಜೆಪಿ ಮೊದಲ ಪಟ್ಟಿಯಲ್ಲಿರೋ ಪ್ರಮುಖರು ಯಾರ‍್ಯಾರು?

Share This Article