ಅಪ್ಪಾ ಬೇಕು ಅಪ್ಪಾ ಬೇಕು ಎನ್ನುತ್ತಲೇ ತಂದೆ ಚಿತೆಗೆ ಪುತ್ರ ಅಗ್ನಿಸ್ಪರ್ಶ

Public TV
1 Min Read

ರಾಮನಗರ: ಐಟಿ ದಾಳಿಗೆ ಹೆದರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಮಾಜಿ ಡಿಸಿಎಂ ಜಿ.ಪರಮಶ್ವರ್ ಆಪ್ತ ಸಹಾಯಕ ರಮೇಶ್ ಅಂತ್ಯ ಸಂಸ್ಕಾರ ಇಂದು ನೆರವೇರಿತು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಪರಮೇಶ್ವರ್ ಅವರನ್ನು ತಬ್ಬಿ ಅಪ್ಪ ಬೇಕು, ಅಪ್ಪ ಬೇಕು ಅಂತಾ ಗೋಳಾಡಿದ ರಮೇಶ್ ಮಗನ ಗೋಳು ಎಲ್ಲರ ಕರಳು ಹಿಂಡಿತ್ತು.

ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಅಂತಿಮ ಸಂಸ್ಕಾರವನ್ನು ಅವರ ಸ್ವಗ್ರಾಮ ರಾಮನಗರ ಜಿಲ್ಲೆಯ ಮೆಳೇಹಳ್ಳಿಯ ಜಮೀನಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿಸಲಾಯಿತು. ರಮೇಶ್ ಅಂತ್ಯಕ್ರಿಯೆ ವೇಳೆ ಪುತ್ರ ಮೋಹಿತ್ ಅಪ್ಪಾ ಬೇಕು ಅಪ್ಪಾ ಬೇಕು ಎಂದು ಕಣ್ಣೀರು ಹಾಕಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: ರಮೇಶ್ ಜೊತೆಗಿನ ಕೊನೆಯ ಮಾತನ್ನು ಬಿಚ್ಚಿಟ್ಟ ಪರಮೇಶ್ವರ್

ಮೆಳೇಹಳ್ಳಿಯ ರಮೇಶ್ ನಿವಾಸದಿಂದ ಅಂತಿಮ ಯಾತ್ರೆ ಹೊರಟು ತಮ್ಮದೇ ಜಮೀನಿನಲ್ಲಿ ರಮೇಶ್ ಪಂಚಭೂತಗಳಲ್ಲಿ ಲೀನವಾದರು. ಇದಕ್ಕೂ ಮುನ್ನ ಮಾತನಾಡಿದ ರಮೇಶ್ ಸಹೋದರ ಸತೀಶ್ ಐಟಿ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮನೆಗೆ ಹೋಗಿ ವಿಚಾರಣೆ ನಡೆಸಿದ್ದಾರೆ. ಆದರೆ ಅವರು ದಾಳಿ ಮಾಡಿಲ್ಲೆಂದು ಸುಳ್ಳು ಹೇಳಿದ್ದಾರೆ. ಮನೆಗೆ ತೆರಳಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಐಟಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ:  ಪರಂ ಪಿಎ ಆತ್ಮಹತ್ಯೆಗೆ ಟ್ವಿಸ್ಟ್- ರಮೇಶ್ ಮನೆಗೆ ಐಟಿಯವ್ರು ಹೋಗಿರೋ ಸಿಸಿಟಿವಿ ದೃಶ್ಯ ಲಭ್ಯ

ತಮ್ಮ ತಂದೆ- ತಾಯಿಯನ್ನ, ಸಹೋದರನನ್ನು, ಹೆಂಡತಿ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸು ಕಂಡಿದ್ದ ರಮೇಶ್ ತಾನೇ ಅರ್ಧಕ್ಕೆ ಜೀವನದ ಪಯಣ ಮುಗಿಸಿದ್ದಾರೆ. ಇದೀಗ ಮನೆಯ ಮಗ ಮರಳಿ ಬಾರದ ಊರಿಗೆ ತೆರಳಿರುವುದು ಕುಟುಂಬಸ್ಥರಿಗೇ ದಿಕ್ಕೆ ತೋಚದಂತಾಗಿದೆ. ರಮೇಶ್ ಅಂತ್ಯ ಸಂಸ್ಕಾರದಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಬಾಲಕೃಷ್ಣ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

https://www.youtube.com/watch?v=SImuqOBddA0

Share This Article
Leave a Comment

Leave a Reply

Your email address will not be published. Required fields are marked *