‘ಕೆಡಿ’ ಚಿತ್ರದಲ್ಲಿ ಧ್ರುವ ಸರ್ಜಾ ಅಣ್ಣನಾಗಿ ಎಂಟ್ರಿ ಕೊಟ್ಟ ರಮೇಶ್ ಅರವಿಂದ್

By
1 Min Read

ಜೋಗಿ ಪ್ರೇಮ್ (Prem) ಅಡ್ಡಾದಿಂದ ಬ್ರೇಕಿಂಗ್ ಸುದ್ದಿಯೊಂದು ಬಂದಿದೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಕೆಡಿ’ (KD) ಚಿತ್ರ ತಂಡಕ್ಕೆ ಮತ್ತೋರ್ವ ಖ್ಯಾತ ನಟನ ಆಗಮನವಾಗಿದ್ದು, ಧ್ರುವ ಸರ್ಜಾ (Dhruva Sarja) ಜೊತೆ ಇದೇ ಮೊದಲ ಬಾರಿಗೆ ರಮೇಶ್ ಅರವಿಂದ್  (Ramesh Aravind) ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಮಾಹಿತಿಯನ್ನು ಸ್ವತಃ ಪ್ರೇಮ್ ಅವರೇ ಬಹಿರಂಗ ಪಡಿಸಿದ್ದಾರೆ.

ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಅಣ್ಣನಾಗಿ ರಮೇಶ್ ಅರವಿಂದ್ ನಟಿಸಲಿದ್ದಾರೆ. ಸದ್ಯದಲ್ಲೇ ತಮ್ಮ ಭಾಗದ ಚಿತ್ರೀಕರಣದಲ್ಲೂ ಅವರು ಭಾಗಿಯಾಗಲಿದ್ದಾರೆ. ತಾರಾಗಣದ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಮೂಡಿಸಿದ್ದು, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹೀಗೆ ಹೆಸರಾಂತ ಕಲಾವಿದರೇ ತಾರಾಗಣದಲ್ಲಿದ್ದಾರೆ.

ಹಿಂದೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ (Reeshma Nanaiah) ಅವರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ ಪ್ರೇಮ್. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೂಪರ್ ಸ್ಟಾರ್ಗಳಿರುವ ತಾರಾಗಣ ಅಂದ್ರೆ ಅದು ಕೆಡಿ ಸಿನಿಮಾ. ಧ್ರುವ ಸರ್ಜಾ, ರವಿಚಂದ್ರನ್‌, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) , ಸಂಜಯ್ ದತ್ (Sanjay Dutt), ಹೀಗೆ ಸ್ಟಾರ್ಗಳನ್ನ ಸ್ಟಾರ್ ಡೈರೆಕ್ಟರ್ ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡ್ತಿದ್ದಾರೆ. ವಿಭಿನ್ನ ಕಥೆ ಹೊತ್ತು, ಪ್ಯಾನ್ ಇಂಡಿಯಾ ಸಿನಿಮಾ ಹೊತ್ತು ತರುತ್ತಿದ್ದಾರೆ.

 

1968ರಿಂದ 1978 ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸ್ತಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್