ನಟ ರಮೇಶ್ ಅರವಿಂದ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ವಿಶೇಷವಾಗಿ ದೈಜಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮದ ನಟ ರಮೇಶ್ ಅರವಿಂದ್, ದರ್ಶನ್ ಅವರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಜೈಲಿನಲ್ಲಿ ಕಷ್ಟದ ದಿನಗಳನ್ನ ದೂಡುತ್ತಿದ್ದಾರೆ. ಇದೇ ಸೆ.9ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ದರ್ಶನ್ ಹಾಜರಾಗಿದ್ದಾರೆ. ಜೈಲಿನಲ್ಲಿ ಇರಲು ಕಷ್ಟವಾಗುವ ಬಗ್ಗೆ ಮಾತ್ನಾಡುತ್ತಾ ವಿಷ ಕೊಡುವಂತೆ ಆದೇಶ ಮಾಡಿ ಎಂದು ಜಡ್ಜ್ ಮುಂದೆ ಹೇಳಿದ್ದಾರೆ. ಜಡ್ಜ್ ಆ ರೀತಿ ಮಾಡಲು ಆಗುವುದಿಲ್ಲ ಎಂದು ಹೇಳಿದ್ದರು. ಈ ವಿಚಾರದ ಬಗ್ಗೆ ನಟ ರಮೇಶ್ ಅರವಿಂದ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
‘ದರ್ಶನ್ ಪ್ರಕರಣದಲ್ಲಿ ಈಗ ಏನಾಗಿದೆ ಅಂತಾ ಡಿಟೇಲ್ ಆಗಿ ನನಗೆ ಗೊತ್ತಿಲ್ಲ. ನೀವು ಹೇಳಿದ್ದನ್ನು ಕೇಳಿದಾಗ, ನಮ್ಮ ಸಹೋದ್ಯೋಗಿಗೆ ಈಥರ ಆಗಿದೆ ಅಂತಾ ಹೇಳ್ತೀದ್ದೀರಾ. ಆದರೆ ಕಾನೂನು ಅಂತಾ ಒಂದಿದೆ. ಅದರ ಪ್ರಕಾರ ಎಲ್ಲವೂ ನಡಿಬೇಕು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.