ಲಿಂಗಾಯತರನ್ನು ಸಿಎಂ ಮಾಡಿ, ಆಗದೇ ಇದ್ದರೆ ಡಿಸಿಎಂ ಮಾಡಿ: ರಂಭಾಪುರಿ ಶ್ರೀ

Public TV
1 Min Read

ಕಲಬುರಗಿ: ಡಿಕೆ ಶಿವಕುಮಾರ್‌ಗೆ (DK Shivakumar) ಅಧಿಕಾರ ಹಸ್ತಾಂತರಿಸಬೇಕು ಎಂಬ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ನಿನ್ನೆ ಶ್ರೀಶೈಲ ಶ್ರೀಗಳು, ಇಂದು ರಂಭಾಪುರಿ ಶ್ರೀಗಳು (Rambhapuri Shree) ಲಿಂಗಾಯತ ಸಿಎಂ ದಾಳ ಉರುಳಿಸಿದ್ದಾರೆ.

ರಾಜ್ಯದಲ್ಲಿ ಒಂದು ವೇಳೆ ಸಿಎಂ ಸ್ಥಾನ ಬದಲಾವಣೆ ಸನ್ನಿವೇಶ ಬಂದರೆ ವೀರಶೈವ ಲಿಂಗಾಯತ (Veershaiv Lingayat) ಸಮಾಜಕ್ಕೆ ಕಾಂಗ್ರೆಸ್ ಹೈಕಮಾಂಡ್‌ (Congress High Command) ಆದ್ಯತೆ ನೀಡಬೇಕೆಂದು ಬಾಳೆ ಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ಡಾ.ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಯೋಗ್ಯತೆ ಇಲ್ಲ ಅಂದ್ರೆ ಜವಾಬ್ದಾರಿ ಬಿಟ್ಟು ಚುನಾವಣೆಗೆ ಹೋಗುವುದು ವಾಸಿ: ಸಚಿವ ರಾಜಣ್ಣಗೆ ಡಿಕೆಸು ತಿರುಗೇಟು

ಒಂದು ವೇಳೆ ಸಿಎಂ ಸ್ಥಾನ ಲಿಂಗಾಯತರಿಗೆ ನೀಡಲು ಆಗದೇ ಇದ್ದರೆ ಡಿಸಿಎಂ ಸ್ಥಾನವಾದರೂ ನೀಡಬೇಕು. ಸದ್ಯ ಸರ್ಕಾರದಲ್ಲಿ ವೀರಶೈವ ಲಿಂಗಾಯತರಿಗೆ ಒಳ್ಳೆಯ ಸಚಿವ ಸ್ಥಾನಗಳನ್ನು ನೀಡಿಲ್ಲ. ಸಿಎಂ ಅವರು ಕೆಲವೇ ಸಮುದಾಯದ ಜನರಿಗೆ ತುಷ್ಟೀಕರಣ ಮಾಡದೇ ಎಲ್ಲರನ್ನು ಸಮಾನಾಗಿ ಕಾಣಬೇಕಾಗಿದೆ ಎಂದರು. ಇದನ್ನೂ ಓದಿ: ಯಾರಾದರೂ ಆರಾಮಾಗಿ ಇರುತ್ತಾರಾ: ದರ್ಶನ್‌ ಭೇಟಿಯ ನಂತರ ರಕ್ಷಿತಾ ಪ್ರೇಮ್‌ ಭಾವುಕ

ಕಾಂಗ್ರೆಸ್‌ನಲ್ಲಿನ ಕೆಲವು ಹಗರಣ, ಬೆಲೆ ಏರಿಕೆಯಿಂದ ಜನರಿಂದ ಸರ್ಕಾರ ಸುಲಿಗೆ ಹೆಚ್ಚಾಗಿ ಮಾಡುತ್ತಿದೆ. ಇನ್ನು ಗ್ಯಾರಂಟಿ ಯೋಜನೆಗಳಿಂದ (Congress Guarantee) ಅಭಿವೃದ್ಧಿಗೆ ಹಣ ಇಲ್ಲ ಅಂತಾ ಹೇಳುತ್ತಿದ್ದಾರೆ. ಸರ್ಕಾರ ಜನರನ್ನ ದುಡಿಯುವಂತೆ ಮಾಡಬೇಕು ಸೋಮಾರಿತನ ಬರುವಂತೆ ಮಾಡಬಾರದು, ಪಕ್ಷದ ಜನಪ್ರಿಯರತೆ ಹೆಚ್ವಿಸಿಕೊಳ್ಳಲು ಅಗ್ಗದ ಪ್ರಚಾರ ಮಾಡಿ ಗ್ಯಾರಂಟಿಗಳಿಂದ ಹೊಡೆತ ಬಿದ್ದಿದೆ ಅಂತಾ ಗ್ಯಾರಂಟಿ ಯೋಜನೆ ವಿರುದ್ಧ ಸಹ ರಂಭಾಪುರಿ ಶ್ರೀ ಆಕ್ರೋಶ ವ್ಯಕ್ತಪಡಿಸಿದರು.

 

Share This Article