ಸ್ಟೇರಿಂಗ್ ಕಟ್ ಆಗಿ ವಿದ್ಯುತ್ ಕಂಬಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ

By
1 Min Read

ರಾಮನಗರ: ಸ್ಟೇರಿಂಗ್ ಕಟ್ ಆದ ಪರಿಣಾಮ ಸಾರಿಗೆ ಬಸ್ (Bus) ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಮಾಗಡಿಯ ಬಾಚೇನಹಟ್ಟಿ ಗ್ರಾಮದ ಬಳಿ ನಡೆದಿದೆ.

ಬಸ್ ಬೆಂಗಳೂರಿನಿಂದ (Bengaluru) ಮಾಗಡಿ ಮಾರ್ಗವಾಗಿ ಹುಲಿಯೂರು ದುರ್ಗಕ್ಕೆ ತೆರಳುತ್ತಿತ್ತು. ಈ ವೇಳೆ ಬಸ್ ಸ್ಟೇರಿಂಗ್ ಕಟ್ ಆಗಿದೆ. ಇದರಿಂದ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಸದ್ಯ ವಿದ್ಯುತ್ ಕಡಿತವಾಗಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‍ನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಇದನ್ನೂ ಓದಿ: ಸ್ಕೂಟರ್‌ಗೆ ಬೆಂಕಿ ಹಚ್ಚಿ ಪ್ರಿಯತಮೆಗೆ ವೀಡಿಯೋ ಕಾಲ್ ಮಾಡಿದ!

ಪ್ರತ್ಯೇಕ ಘಟನೆಯಲ್ಲಿ ಚನ್ನಪ್ಟಣದ ಡಿಪೋಗೆ ಸರ್ವಿಸ್‍ಗೆ ಬಂದಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್‍ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾಂಪೌಂಡ್‍ನ ಗೋಡೆ ಕುಸಿದು ಬಿದ್ದಿದೆ. ಸರ್ವಿಸ್‍ಗೆ ಬಂದಿದ್ದ ಬಸ್ಸನ್ನು ಮೆಕ್ಯಾನಿಕ್ ಚಲಾಯಿಸುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಅದೃಷ್ಟವಶಾತ್ ಯಾವುದೇ ಗಾಯ ಹಾಗೂ ಪ್ರಾಣಾಪಾಯ ಸಂಭವಿಸಿಲ್ಲ. ಇದನ್ನೂ ಓದಿ: ಗಲಭೆ, ಕ್ರೈಮ್‍ನಲ್ಲಿ ರಾಜಸ್ಥಾನವನ್ನು ಕಾಂಗ್ರೆಸ್ ನಂ.1 ಮಾಡಿದೆ: ಮೋದಿ ವಾಗ್ದಾಳಿ

Share This Article