ಬೈಕ್ ಮೇಲೆ ಎದ್ದು ನಿಂತ ಹೆಬ್ಬಾವು

Public TV
1 Min Read

ರಾಮನಗರ: ಬಿಡದಿಯ ಅವರೆಗೆರೆ ಗ್ರಾಮದಲ್ಲಿ ಕಾಣಿಸಿಕೊಂಡ 15 ಅಡಿ ಉದ್ದದ ಹೆಬ್ಬಾವು ಬೈಕ್ ಮೇಲೆ ಎದ್ದು ನಿಂತಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಆಹಾರ ಅರಸಿ ಬಂದ ಹೆಬ್ಬಾವು ರಾತ್ರಿ ರಸ್ತೆ ಪಕ್ಕದಲ್ಲಿ ಮಲಗಿದೆ. ಇದನ್ನು ನೋಡಿದ ಸ್ಥಳೀಯರು ಮೊಬೈಲ್ ಫೋನಿನಲ್ಲಿ ವಿಡಿಯೋ ಮಾಡುತ್ತಾ ಕಿರುಚಾಡಿದ್ದಾರೆ. ಈ ವೇಳೆ ರಸ್ತೆಗೆ ಬಂದ ಹೆಬ್ಬಾವು ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಹತ್ತಿದೆ. ಬೈಕ್ ಮೇಲೇರುತ್ತಿದ್ದಂತೆಯೇ ನೆರೆದಿರುವ ಜನ ಕಿರುಚಾಡಿದ್ದಾರೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಹೆಬ್ಬಾವನ್ನು ಕಂಡ ಜನ ಗಾಬರಿಗೊಂಡು ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹೆಬ್ಬಾವನ್ನು ಸೆರೆ ಹಿಡಿದು ಬನ್ನೇರುಘಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *