ಬೆಟ್ಟಿಂಗ್ ಭೂತಕ್ಕೆ ಕಾಂಗ್ರೆಸ್ ಕಾರ್ಯಕರ್ತ ಬಲಿ – ಲಾಡ್ಜ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ!

Public TV
1 Min Read

ರಾಮನಗರ: ಕಾಂಗ್ರೆಸ್ (Congress) ಕಾರ್ಯಕರ್ತನೊಬ್ಬ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ ಕೋಟಿ ಕೋಟಿ ಹಣ ಬೆಟ್ಟಿಂಗ್ (Betting) ಕಟ್ಟಿ, ಸಾಲದ ಸುಳಿಗೆ ಸಿಕ್ಕು ನೇಣಿಗೆ ಶರಣಾದ ಘಟನೆ ಬಿಡದಿಯಲ್ಲಿ ನಡೆದಿದೆ.

ರಾಮನಗರ (Ramanagara) ತಾಲೂಕಿನ ಕೆಂಚನಕುಪ್ಪೆ ಗ್ರಾಮದ ಶಿವರಾಜು (44) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಶಿವರಾಜು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಾಗಿ 1 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಬೆಟ್ಟಿಂಗ್ ಕಟ್ಟಿ ಕಳೆದುಕೊಂಡಿದ್ದರು. ಕಾಂಗ್ರೆಸ್‍ಗೆ ಸೋಲಾದ ಹಿನ್ನೆಲೆ, ಅವರು ತೀವ್ರ ಸಾಲದ ಸುಳಿಗೆ ಸಿಲುಕಿದ್ದಾರೆ. ಇದರಿಂದ ಬೇಸತ್ತು ಬಿಡದಿಯ ಲಾಡ್ಜ್ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಐದಾರು ಲಾರಿಗಳ ಮಾಲೀಕರಾಗಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬಾಡಿಗೆ ಹಣಕ್ಕೆ ಕಿರಿಕ್ – ಪತ್ನಿಯನ್ನು ಹತ್ಯೆಗೈದಿದ್ದ ಪಾಪಿ ಪತಿ ಅರೆಸ್ಟ್

ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿ ವಿಜಯೋತ್ಸವದ ಬಳಿಕ ಚಾಕು ಇರಿತ ಪ್ರಕರಣ- ಮೂವರು ಪೊಲೀಸ್ ವಶಕ್ಕೆ

Share This Article