– ಎಸ್‌ಐಟಿಗೆ ಷಡ್ಯಂತ್ರ ಅಂತ ಡಿಕೆಶಿ ಹೇಳಿಲ್ಲ
– ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮ ಆಗ್ಬೇಕು ಎಂದ ಸಚಿವ
ಬೆಂಗಳೂರು: ಧರ್ಮಸ್ಥಳ ಬಗ್ಗೆಯಾಗಲಿ ಅಥವಾ ಧರ್ಮಾಧಿಕಾರಿಯವರ ವಿರುದ್ಧ ಆಗಲಿ ಯಾರೂ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ.
ವಿಧಾನಸೌಧ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ (Dharamasthala Case) ಎಸ್‌ಐಟಿ 14 ರಿಂದ 15 ಕಡೆ ಅಗೆದರೂ ಸಾಕ್ಷ್ಯ ಸಿಕ್ಕಿಲ್ಲ. ಧರ್ಮಸ್ಥಳ ಬಗ್ಗೆಯಾಗಲೀ, ಧರ್ಮಾಧಿಕಾರಿಯವರ ವಿರುದ್ಧ ಆಗಲೀ ಯಾರೂ ಇಲ್ಲ. ಒಂದು ಕ್ಲಾರಿಟಿ ಸಿಗಬೇಕು ಅಂತ ಎಸ್‌ಐಟಿ ರಚಿಸಲಾಗಿದೆ. ಇವತ್ತು ಪರಮೇಶ್ವರ್ ಅವರು ಸದನದಲ್ಲಿ ಅದರ ಬಗ್ಗೆ ಮಾತಾಡ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಕೇಸರಿ ಪಡೆ ʻಧರ್ಮʼ ಯುದ್ಧ – ಷಡ್ಯಂತ್ರದ ಹಿಂದಿರೋರು ಯಾರು? – ಅಪಪ್ರಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹ
ಬಿಜೆಪಿಯವರಿಗಿಂತಲೂ ಕಾಂಗ್ರೆಸ್‌ನಲ್ಲಿ ಧರ್ಮಸ್ಥಳದ ಭಕ್ತರಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿಯವ್ರು ರಾಜಕೀಯ ಮಾಡ್ತಿದ್ದಾರೆ. ಸೌಜನ್ಯ ಪ್ರಕರಣಕ್ಕೂ ನ್ಯಾಯ ಸಿಗಬೇಕು. ಯೂಟ್ಯೂಬರ್‌ಗಳು ಅಪಪ್ರಚಾರ ಮಾಡ್ತಿದ್ದಾರೆ. ಇವರ ವಿರುದ್ಧ ಕೇಸ್ ಹಾಕಿ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – ಪರಂ ಉತ್ತರ ಭಾರೀ ಕುತೂಹಲ
ಡಿಕೆಶಿವರು ಎಸ್‌ಐಟಿಗೆ (SIT) ಷಡ್ಯಂತ್ರ ಮಾಡಿದ್ದಾರೆ ಅಂದಿಲ್ಲ. ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಮಾಡಿ ಅಪಪ್ರಚಾರ ಮಾಡ್ತಿದ್ದಾರೆ ಅಂತ ಹೇಳಿದ್ದರು. ಅವರ ಹೇಳಿಕೆಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೋಡ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅನಾಮಿಕ ವ್ಯಕ್ತಿ ಮೊದಲು 13 ಸ್ಥಳಗಳನ್ನು ತೋರಿಸಿದ್ದ. ಎಸ್‌ಐಟಿ ಅವರು 13 ಸ್ಥಳಗಳಲ್ಲಿ ಮಾತ್ರವೇ ಅಗೆಯಬೇಕಿತ್ತು. 17 ಕಡೆ ಬೇಡವಾಗಿತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.