ಭಕ್ತರು ಚಳಿಯಿಂದ ರಕ್ಷಿಸಿಕೊಳ್ಳಲು ಅಯೋಧ್ಯೆಯಲ್ಲಿ ಮಾಡಲಾಗಿದೆ ವಿಶೇಷ ವ್ಯವಸ್ಥೆ

Public TV
1 Min Read

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ (Pran Prathistha Ceremony) ದಿನಗಣನೆ ಆರಂಭವಾಗಿದೆ. ಇಡೀ ದೇಶದಲ್ಲಿ ಈಗಾಗಲೇ ಸಮಾರಂಭದ ಬಗ್ಗೆ ಉತ್ಸಾಹದ ವಾತಾವರಣವಿದೆ. ಅಯೋಧ್ಯೆಯಲ್ಲಿಯೂ ಸಹ ಸಮಾರಂಭಕ್ಕೆ ಭರದಿಂದ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ದೇಶದಾದ್ಯಂತ ಅನೇಕ ಪ್ರಸಿದ್ಧ ವ್ಯಕ್ತಿಗಳು ಶ್ರೀರಾಮನ ದರ್ಶನಕ್ಕಾಗಿ ಇಲ್ಲಿಗೆ ಬರಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಚಳಿ ಹಾಗೂ ತಾಪಮಾನ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಷನ್ ಹೊಡ ಐಡಿಯಾವೊಂದನ್ನು ಕಂಡುಕೊಂಡಿದೆ.

ಹೌದು. ಉತರಪ್ರದೇಶ (Uttar Pradesh) ಸೇರಿದಂತೆ ದೇಶಾದ್ಯಂತ ವಿಪರೀತ ಚಳಿ ಇದೆ. ಚಳಿಯಿಂದಾಗಿ ಮಂಜು ಕೂಡ ದಟ್ಟವಾಗಿರುತ್ತದೆ. ಅಲ್ಲದೇ ಮಂಜು ಮುಸುಕಿರುವುದರಿಂದ ರೈಲುಗಳು ಮತ್ತು ವಿಮಾನ ಸೇವೆಗಳಲ್ಲಿ ವ್ಯತ್ಯಯವಾಗುತ್ತದೆ. ರಸ್ತೆಗಳಲ್ಲಿಯೂ ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಹೀಗಾಗಿ ಈ ಚಳಿಯನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯೆಯಲ್ಲಿ ವಿಶೇಷ ವ್ಯವಸ್ಥೆಯೊಂದನ್ನು ಮಾಡಲಾಗಿದೆ. ಇದನ್ನೂ ಓದಿ: ರಾಮನ ಪ್ರಾಣಪ್ರತಿಷ್ಠೆಗೆ ದಿನಗಣನೆ- ಸೀತಾ ಮಾತೆಯ ರಕ್ಷಣೆಗೆ ಜಟಾಯು ಹೋರಾಡಿದ್ದ ಸ್ಥಳಕ್ಕೆ ಮೋದಿ ಭೇಟಿ

ಭಕ್ತರನ್ನು ಚಳಿಯಿಂದ ರಕ್ಷಿಸಲು ಈ ಕೆಲಸ ಮಾಡಲಾಗಿದ್ದು, ಅಯೋಧ್ಯೆಯಾದ್ಯಂತ ಹಲವಾರು ಸ್ಥಳಗಳಲ್ಲಿ ಸ್ವಲ್ಪ ಕೆಂಪು ಬಣ್ಣದಲ್ಲಿರುವ ಹೊರಾಂಗಣ ಹೀಟರ್‌ಗಳನ್ನು ಅಳವಡಿಸಲಾಗಿದೆ. ಇದು ತಾಪಮಾನವು ಕುಸಿಯುತ್ತಿರುವ ನಡುವೆ ಜನರು ಬೆಚ್ಚಗಾಗಲು ಸಹಾಯ ಮಾಡುತ್ತದೆ. ಈ ಹೀಟರ್‌ಗಳಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿಯೂ ಜನರು ಚಳಿಯನ್ನು ಅನುಭವಿಸುವುದಿಲ್ಲ. ಹೀಗಾಗಿ ಅವರು ಆರಾಮವಾಗಿ ರಾಮಲಲ್ಲಾನ ದರ್ಶನವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಹೀಟರ್‌ಗಳನ್ನು ಮುನ್ಸಿಪಲ್ ಕಾರ್ಪೊರೇಶನ್ ಅಯೋಧ್ಯೆ ಸ್ಥಾಪಿಸಿದೆ.

Share This Article