ರಾಮ ಹಿಂದೂಗಳಿಗಷ್ಟೇ ಅಲ್ಲ, ಎಲ್ಲರಿಗೂ ದೇವರು: ಫಾರೂಕ್ ಅಬ್ದುಲ್ಲಾ

Public TV
1 Min Read

ಶ್ರೀನಗರ: ಭಗವಂತ ಶ್ರೀರಾಮ (Ram) ಕೇವಲ ಹಿಂದೂಗಳಿಗಷ್ಟೇ (Hindu) ದೇವರಲ್ಲ. ಧರ್ಮದ ಹೊರತಾಗಿ ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರಿಗೂ ದೇವರು ಎಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಮಾಜಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ.

ಗುರುವಾರ ಉದಯಪುರದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಪಕ್ಷ ಅಧಿಕಾರದಲ್ಲಿ ಉಳಿಯಲು ರಾಮನ ಹೆಸರನ್ನು ಮಾತ್ರ ಬಳಸುತ್ತಿದೆ. ಆದರೆ ರಾಮ ಕೇವಲ ಹಿಂದೂಗಳ ದೇವರಲ್ಲ ಎಂದು ಕಿಡಿಕಾರಿದ್ದಾರೆ.

ರಾಮ ಕೇವಲ ಹಿಂದೂಗಳ ದೇವರಲ್ಲ. ದಯವಿಟ್ಟು ಈ ಕಲ್ಪನೆಯನ್ನು ನಿಮ್ಮ ಮನಸ್ಸಿನಿಂದ ಕಿತ್ತು ಹಾಕಿ. ಭಗವಂತ ರಾಮ ಪ್ರತಿಯೊಬ್ಬನಿಗೂ ದೇವರು. ಅದು ಮುಸ್ಲಿಂ ಆಗಿರಲಿ ಅಥವಾ ಕಿಶ್ಚಿಯನ್ ಆಗಿರಲಿ, ಅಮೆರಿಕನ್ ಅಥವಾ ರಷ್ಯನ್ ಆಗಿರಲಿ. ಆತನ ಮೇಲೆ ನಂಬಿಕೆಯಿರುವ ಪ್ರತಿಯೊಬ್ಬರಿಗೂ ಆತ ದೇವರಾಗುತ್ತಾನೆ ಎಂದು ಹೇಳಿದರು. ಇದನ್ನೂ ಓದಿ: ನನ್ನನ್ನು ಶೂರ್ಪನಖಿ ಎಂದ ಮೋದಿ ವಿರುದ್ಧ ಮಾನನಷ್ಟ ಕೇಸ್‌ ಹಾಕ್ತೀನಿ: ರೇಣುಕಾ ಚೌಧರಿ

ನಾವು ರಾಮನ ಭಕ್ತರು ಎಂದು ನಿಮ್ಮ ಬಳಿಗೆ ಬರುವವರು ಮೂರ್ಖರು. ಅವರು ರಾಮನ ಹೆಸರಿನಲ್ಲಿ ಲಾಭ ಪಡೆದುಕೊಳ್ಳಲು ಬಯಸುತ್ತಾರೆ. ಅವರಿಗೆ ರಾಮನ ಮೇಲೆ ಪ್ರೀತಿ ಇರುವುದಿಲ್ಲ. ಬದಲಿಗೆ ಅಧಿಕಾರದ ಮೇಲೆ ಇರುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಘೋಷಣೆಯಾದಾಗ ಅವರು ಸಾಮಾನ್ಯ ಜನರ ಗಮನ ಬೇರೆಡೆಗೆ ತಿರುಗಿಸಲು ರಾಮ ಮಂದಿರವನ್ನು ಉದ್ಘಾಟಿಸುತ್ತಿದ್ದಾರೆ ಎಂಬುದು ತಿಳಿದುಬರುತ್ತದೆ. ಆದ್ದರಿಂದ ದಯವಿಟ್ಟು ಜನರ ನಡುವೆ ಹೋಗಿ ದ್ವೇಷದ ಪ್ರಚಾರವನ್ನು ನಿಲ್ಲಿಸಲು ಮನವಿ ಮಾಡುತ್ತೇವೆ ಎಂದಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲೂ ಅಬ್ದುಲ್ಲಾ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ರಾಮ ಪ್ರತಿಯೊಬ್ಬರಿಗೂ ದೇವರು. ಕೇವಲ ಹಿಂದೂಗಳಿಗಲ್ಲ ಎಂದಿದ್ದರು. ಇದನ್ನೂ ಓದಿ: ಇಂದಿನಿಂದ ರಂಜಾನ್ ಉಪವಾಸ ಆಚರಣೆ – ಪ್ರಧಾನಿ ಮೋದಿ ವಿಶ್

Share This Article
Leave a Comment

Leave a Reply

Your email address will not be published. Required fields are marked *