‘ಕೂರ್ಗ್’ನಲ್ಲಿ ಸೀರೆ ಶೂಟಿಂಗ್ ಶುರು ಮಾಡಿದ ರಾಮ್ ಗೋಪಾಲ್ ವರ್ಮಾ

Public TV
1 Min Read

ಕ್ಷಿಣದ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂರ್ಗ್ (Coorg) ನಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ ಹೊಸ ಸೀರೆ ಸಿನಿಮಾದ ಹಾಡಿನ ಚಿತ್ರೀಕರಣವನ್ನು (Shooting) ಅವರು ಕೊಡಗಿನಲ್ಲಿ ಮಾಡುತ್ತಿದ್ದು, ಆ ಸಣ್ಣದೊಂದು ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕೂರ್ಗ್ ಅದ್ಭುತ ಲೋಕೇಷನ್ ಎಂದು ಹಾಡಿ ಹೊಗಳಿದ್ದಾರೆ.

ವರ್ಮಾ ಈ ಹಿಂದೆ ‘ಸೀರೆ’ (Saree) ಹೆಸರಿನ ಸಿನಿಮಾವೊಂದನ್ನು ಘೋಷಣೆ ಮಾಡಿದ್ದರು. ಈ ಸಿನಿಮಾಗೆ ಮಲಯಾಳಿ ನಟಿ ಆರಾಧ್ಯ ದೇವಿ (Aradhya Devi) ಅಲಿಯಾಸ್ ಶ್ರೀಲಕ್ಷ್ಮಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಯಾವಾಗ ಶೂಟಿಂಗ್ ಶುರುವಾಗಲಿದೆ ಎಂದು ಮಾಹಿತಿ ನೀಡಿರಲಿಲ್ಲ. ಈಗ ಚಿತ್ರೀಕರಣ ನಡೆಸುತ್ತಿರುವ ಕುರಿತು ಮಾಹಿತಿ ನೀಡಿದ್ದಾರೆ.

ಈ ಸಿನಿಮಾದ ಶೂಟಿಂಗ್ ಗಾಗಿ ಭರ್ಜರಿಯ ಸಿದ್ಧತೆಯನ್ನೇ ಮಾಡಿಕೊಂಡಿದ್ದಾರೆ ವರ್ಮಾ. ಚಿತ್ರೀಕರಣಕ್ಕೂ ಮುನ್ನ  ನಾಯಕಿಯು  ಬದಲಾದ ಪರಿಗೆ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾಗಾಗಿ ನಾಯಕಿ ಭಾರೀ ಬದಲಾವಣೆ ಆಗಿರುವ ಕುರಿತು ಮೊನ್ನೆಯಷ್ಟೇ ಮಾಹಿತಿ ನೀಡಿದ್ದರು ರಾಮ್ ಗೋಪಾಲ್ ವರ್ಮಾ.

ಆರಾಧ್ಯ ದೇವಿಯ ಹೊಸ ಫೋಟೋ ಶೂಟ್ ಅನ್ನು ಹಂಚಿಕೊಂಡಿದ್ದ ಆರ್.ಜಿ.ವಿ ನಟಿಯ ಬದಲಾವಣೆ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಅದಕ್ಕಾಗಿ ಅವರು ಮಾಡಿಕೊಂಡಿದ್ದ ತಯಾರಿಯನ್ನು ಹಾಡಿ ಹೊಗಳಿದ್ದರು. ಜೊತೆಗೆ ಕ್ಯಾಮೆರಾದಲ್ಲಿ ಆಕೆಯನ್ನು ಸೆರೆ ಹಿಡಿದವರನ್ನು ವರ್ಮಾ ನೆನೆದಿದ್ದರು. ಆರಾಧ್ಯ ಫೋಟೋ ಶೂಟ್ ನಲ್ಲಿ ಸಖತ್ ಹಾಟ್ ಹಾಟ್ ಆಗಿ ಕಂಡಿದ್ದಾರೆ.

ರಾಮ್ ಗೋಪಾಲ್ ವರ್ಮಾ (Ram Gopal Varma) ಇತ್ತೀಚಿನ ವರ್ಷಗಳಲ್ಲಿ ಸಿನಿಮಾಕ್ಕಿಂತ ಹೆಚ್ಚು ಹುಡುಗಿಯರ ಅಂದವನ್ನು ಹೊಗಳುವುದರಲ್ಲಿ ಮತ್ತು ಸದಾ ಹುಡುಗಿಯರ ಜತೆಯೇ ಕಾಲ ಕಳೆಯುವುದರಲ್ಲಿ ಬ್ಯುಸಿಯಾಗಿದ್ದಾರೆ.

 

ಮಾಡೆಲ್ ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಬಿಂದಾಸ್ ಆಗಿ ಇರುವುದನ್ನೇ ಹವ್ಯಾಸ ಮಾಡಿಕೊಂಡಿರುವ ವರ್ಮಾ, ಈಗ ನಟಿ ಅಪ್ಸರಾ ರಾಣಿಯ ಹಿಂದೆ ಬಿದ್ದಿದ್ದಾರೆ. ನಿತ್ಯವೂ ಅಪ್ಸರಾ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿರುವ ವರ್ಮಾ, ಅದಕ್ಕೊಂದು ಕ್ಯಾಪ್ಷನ್ ಕೊಟ್ಟು ಕುತೂಹಲ ಮೂಡಿಸುತ್ತಿದ್ದಾರೆ.

Share This Article