ಮಣಿರತ್ನಂ ಸಿನಿಮಾಗಳು ನನಗೆ ಇಷ್ಟವಿಲ್ಲ: ರಾಮ್ ಗೋಪಾಲ್ ವರ್ಮಾ ಸ್ಫೋಟಕ ಹೇಳಿಕೆ

Public TV
1 Min Read

ಟಾಲಿವುಡ್‍ನ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ತಮ್ಮ ಸಿನಿಮಾಗಳಿಗಿಂತ ವಿವಾದಾತ್ಮಕ ಹೇಳಿಕೆಗಳಿದಂಲೇ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಸಿನಿಮಾ ಮಾಡಿ ಆ ಮೂಲಕ ಸದಾ ಸುದ್ದಿಯಲ್ಲಿರುವ ಅದೆಷ್ಟೋ ನಟರು, ನಿರ್ದೇಶಕರುಗಳು ನಮ್ಮ ಕಣ್ಮುಂದಿನ ಉದಾಹರಣೆಗಳು. ಆದರೆ ಆರ್‌ಜಿವಿ ಮಾತ್ರ ಯಾವುದಾದರೂ ಒಂದು ವಿಚಾರವನ್ನ ಕೆದಕಿ ಆ ಮೂಲಕ ಸದ್ದು ಗದ್ದಲ ಮಾಡುತ್ತಿರುತ್ತಾರೆ.

ಇದೀಗ ಹಿರಿಯ ನಿರ್ದೇಶಕ ಮಣಿರತ್ನಂ (Mani Ratnam) ಅವರ ಬಗ್ಗೆ ಹೇಳಿಕೆ ನೀಡುವ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಮಣಿರತ್ನಂ ಅವರು ನನ್ನ ಸಿನಿಮಾಗಳನ್ನ (Cinema) ಇಷ್ಟಪಡುವುದಿಲ್ಲ. ಹಾಗಾಗಿ ನಾನೂ ಕೂಡಾ ಅವರ ಸಿನಿಮಾಗಳನ್ನ ಇಷ್ಟಪಡುವುದಿಲ್ಲ ಅಂತಾ ಸ್ಪೋಟಕ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತ್ನಾಡಿದ್ದಾರೆ. ಇದನ್ನೂ ಓದಿ: ಸಿಲ್‌ಸಿಲಾ ರೇಖಾ ರೀತಿ ರೆಡಿಯಾದ ಅಲಿಯಾ ಭಟ್

ಅಂದಹಾಗೆ ರಾಮ್ ಗೋಪಾಲ್ ವರ್ಮಾ ಹಾಗೂ ಮಣಿರತ್ನಂ ಒಟ್ಟಿಗೆ ಸಿನಿಮಾವನ್ನ ತಯಾರಿಸಿದ್ದಾರೆ. ಆದರೆ ಮಣಿರತ್ನಂ ನನ್ನ ಸಿನಿಮಾ ಇಷ್ಟಪಡುವುದಿಲ್ಲ ಹಾಗಾಗಿ ನಾನು ಅವರ ಸಿನಿಮಾವನ್ನ ಇಷ್ಟಪಡುವುದಿಲ್ಲ ಎಂದಿದ್ದಾರೆ. ಮಣಿರತ್ನಂ ಹಾಗೂ ಕಮಲ್ ಹಾಸನ್ ನಟನೆಯ ಐಕಾನಿಕ್ ಮೂವಿ ನಾಯಕನ್ ಚಿತ್ರ ನನಗೆ ಇಷ್ಟವಾಗಿಲ್ಲ ಎಂದಿದ್ದಾರೆ.

ಅಲ್ಲದೇ ಒಬ್ಬ ವ್ಯಕ್ತಿಯಾಗಿ, ಸ್ನೇಹಿತರಾಗಿ ನಾನು ಅವರನ್ನ ಇಷ್ಟಪಡುತ್ತೇನೆ ಆದರೆ ಅವರ ಸಿನಿಮಾಗಳನ್ನ ಅಲ್ಲ ಎಂದು ಹೇಳಿದ್ದಾರೆ. ಪರಸ್ಪರ ನಾನು ಅವರ ಸಿನಿಮಾ ಇಷ್ಟಪಡುವುದಿಲ್ಲ, ಅವರು ನನ್ನ ಸಿನಿಮಾ ಇಷ್ಟಪಡುವುದಿಲ್ಲ ಎಂದು ಕಡ್ಡಿತುಂಡ ಆಗುವಂತೆ ಮಾತಾಡಿದ್ದಾರೆ. ಇದನ್ನೂ ಓದಿ: ಕಲ್ಕಿ 2898ADಗೆ ಒಂದು ವರ್ಷದ ಸಂಭ್ರಮ : ಕಲ್ಕಿ ಪಾರ್ಟ್-2 ಯಾವಾಗ..?

Share This Article