1,000 ಡ್ಯಾನ್ಸರ್ಸ್ ಜೊತೆ ಮೈಸೂರಲ್ಲಿ ರಾಮ್ ಚರಣ್ ಸಿನಿಮಾ ಶೂಟಿಂಗ್

Public TV
1 Min Read

ತೆಲುಗು ಸ್ಟಾರ್ ರಾಮ್ ಚರಣ್ (Ram Charan) ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ʻಪೆದ್ದಿʼ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೀಗ ಚಿತ್ರತಂಡ ಗೌರಿ-ಗಣೇಶ ಹಬ್ಬದ ನಡುವೆಯೇ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದೆ.

ಮೈಸೂರಿನಲ್ಲಿ ರಾಮ್ ಚರಣ್ ನಾಯಕನಾಗಿ ಅಭಿನಯಿಸುತ್ತಿರುವ ಪೆದ್ದಿ (Peddi) ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅದ್ಧೂರಿ ಸೆಟ್ ಹಾಕಿ ಮಾಸ್ ಸಾಂಗ್ ವೊಂದನ್ನು ಶೂಟಿಂಗ್ ನಡೆಸಲಾಗಿದೆ. 1,000 ಡ್ಯಾನ್ಸರ್ಸ್ ಜೊತೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹಾಡಿಗೆ ಹೆಜ್ಜೆ ಹಾಕ್ತಿದ್ದು, ಖ್ಯಾತ ಡ್ಯಾನ್ಸ್ ಮಾಸ್ಟರ್ ಜಾನಿ ಈ ಹಾಡಿಗೆ ಕೊರಿಯೋಗ್ರಾಫ್‌ ಮಾಡುತ್ತಿದ್ದಾರೆ. ಬಹಳ ಅದ್ಧೂರಿಯಾಗಿ ದೊಡ್ಡ ಬಜೆಟ್‌ನಲ್ಲಿ ಈ ಸಾಂಗ್ ಚಿತ್ರೀಕರಣ ನಡೆಸಲಾಗುತ್ತಿದೆ.

ಉಪ್ಪೇನ ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನ ಪೆದ್ದಿ ಸ್ಫೋರ್ಟ್ ಆಕ್ಷನ್ ಡ್ರಾಮಾ ಕಥಾಹಂದರ ಹೊಂದಿದೆ. ರಾಮ್ ಚರಣ್‌ಗೆ ಜಾನ್ವಿ ಕಪೂರ್ (Janhvi Kapoor) ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಜಗಪತಿ ಬಾಬು ಮತ್ತು ದಿವೇಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Share This Article