ಕಿಯಾರಾ ಜೊತೆ ರಾಮ್ ಚರಣ್ ರೊಮ್ಯಾನ್ಸ್- ‘ಗೇಮ್ ಚೇಂಜರ್’ ಸಾಂಗ್ ಔಟ್

Public TV
1 Min Read

ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ (Kiara Advani) ಮತ್ತು ರಾಮ್ ಚರಣ್ (Ram Charan) ನಟನೆಯ ‘ಗೇಮ್ ಚೇಂಜರ್’ (Game Changer) ಸಿನಿಮಾದ ರೊಮ್ಯಾಂಟಿಕ್ ಸಾಂಗ್‌ವೊಂದು ರಿಲೀಸ್ ಆಗಿದೆ. ಕಿಯಾರಾ ಜೊತೆಗಿನ ರಾಮ್ ಚರಣ್ ಲವ್ಲಿ ಸಾಂಗ್ ನೋಡಿ ಫ್ಯಾನ್ಸ್‌ಗೆ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಧನುಷ್, ಐಶ್ವರ್ಯಾಗೆ ಡಿವೋರ್ಸ್ ಮಂಜೂರು ಮಾಡಿದ ಕೋರ್ಟ್- 18 ವರ್ಷಗಳ ದಾಂಪತ್ಯ ಅಂತ್ಯ

‘ಗೇಮ್ ಚೇಂಜರ್’ ಸಿನಿಮಾದ ಹಾಡಿನಲ್ಲಿ ಕಿಯಾರಾ, ರಾಮ್ ಚರಣ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕಲರ್‌ಫುಲ್ ಬ್ಯಾಕ್ ಗ್ರೌಂಡ್‌ನಲ್ಲಿ ಈ ಜೋಡಿ ಕುಣಿದು ಕುಪ್ಪಳಿಸಿದೆ. ಗಾಯಕಿ ಶ್ರೇಯಾ ಘೋಷಾಲ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಸದ್ಯ ಈ ಹಾಡು ನೋಡಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

 

View this post on Instagram

 

A post shared by Thirunavukarasu (@dop_tirru)

ಈ ಚಿತ್ರಕ್ಕೆ ಶಂಕರ್ ಎಸ್. ಆ್ಯಕ್ಷನ್ ಕಟ್ ಹೇಳಿದ್ದಾರೆ. ಮುಂದಿನ ವರ್ಷ ಜ.10ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ರಾಮ್ ಮತ್ತು ಕಿಯಾರಾ ಎರಡನೇ ಬಾರಿ ಈ ಚಿತ್ರಕ್ಕಾಗಿ ಒಂದಾಗಿದ್ದಾರೆ.

Share This Article