ಆಸ್ಕರ್‌ನಲ್ಲಿ ಜ್ಯೂ.ಎನ್‌ಟಿಆರ್-ಚರಣ್ ಡ್ಯಾನ್ಸ್ ಮಾಡಿಲ್ಲ ಯಾಕೆ? ಇಲ್ಲಿದೆ ಅಸಲಿ ಕಾರಣ

Public TV
2 Min Read

ತೆಲುಗಿನ (Telagu) ನಟ ಜ್ಯೂ.ಎನ್‌ಟಿಆರ್ (Jr.Ntr) ಮತ್ತು ರಾಮ್ ಚರಣ್ (Ram Charan) ಜಬರ್‌ದಸ್ತ್ ಆಗಿ ಕುಣಿದಿದ್ದ `ನಾಟು ನಾಟು’ (Naatu Naatu) ಹಾಡಿಗೆ ಈ ವರ್ಷ ಆಸ್ಕರ್ ಅವಾರ್ಡ್ (Oscar Award) ಒಲಿದಿದೆ. ವಿಶ್ವದ ಎಲ್ಲೆಡೆ ಈ ಹಾಡು ಈಗ ಸಂಚಲನ ಮೂಡಿಸುತ್ತಿದೆ. ಹೀಗಿರುವಾಗ ಆಸ್ಕರ್ ವೇದಿಕೆಯಲ್ಲಿ ತಾರಕ್- ಚರಣ್ ನಾಟು ನಾಟು ಹಾಡಿಗೆ ಪ್ರದರ್ಶನ ನೀಡಬೇಕಿತ್ತು. ಕೊನೆಯ ಹಂತದಲ್ಲಿ ಪ್ರದರ್ಶನ ಕ್ಯಾನ್ಸಲ್ ಆಗಿದ್ದೇಕೆ ಎಂಬುದನ್ನ ನಿರ್ಮಾಪಕ ರಾಜ್‌ ಕಪೂರ್  ಅಸಲಿ ವಿಚಾರವನ್ನ ಬಿಚ್ಚಿಟ್ಟಿದ್ದಾರೆ.

`ಆರ್‌ಆರ್‌ಆರ್’ (RRR) ಸಿನಿಮಾಗಾಗಿ ರಾಜಮೌಳಿ ಮತ್ತು ಟೀಮ್ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. `ನಾಟು ನಾಟು’ ಹಾಡನ್ನ ಉಕ್ರೇನ್‌ನಲ್ಲಿ ಅದ್ದೂರಿಯಾಗಿ ಶೂಟಿಂಗ್ ಮಾಡಲಾಗಿತ್ತು. ತೆರೆಯ ಮೇಲೆ ಕಮಾಲ್ ಮಾಡಿದ್ದಂತಹ ನಾಟು ನಾಟು ಸಾಂಗ್‌ಗೆ ಆಸ್ಕರ್ ವೇದಿಕೆಯಲ್ಲೂ ಪ್ರದರ್ಶನ ಮಾಡುವ ಯೋಜನೆ ಇತ್ತು. ಕಡೆಯ ಕ್ಷಣದಲ್ಲಿ ಬದಲಾಗಿದ್ದು ಯಾಕೆ ಎಂಬುದನ್ನ ನಿರ್ಮಾಪಕ ರಾಜ್ ಕಪೂರ್ (Raj Kapoor) ಇದೀಗ ತಿಳಿಸಿದ್ದಾರೆ.

ರಾಮ್ ಚರಣ್ ಮತ್ತು ತಾರಕ್ ಇಬ್ಬರೂ ಪ್ರತಿಷ್ಠಿತ ವೇದಿಕೆಯಲ್ಲಿ ಡಾನ್ಸ್ ಮಾಡಲು ಆರಾಮದಾಯಕವಾಗಿರದ ಕಾರಣ ಪ್ರದರ್ಶನ ನೀಡಿಲ್ಲ ಎಂದು ರಾಜ್ ಕಪೂರ್ ಬಹಿರಂಗಪಡಿಸಿದ್ದಾರೆ. ವೇದಿಕೆಯ ಮೇಲೆ ಡ್ಯಾನ್ಸ್ ಮಾಡುವ ಮುನ್ನ ಮತ್ತೆ ಕಾರ್ಯಕ್ರಮದ ಸಿದ್ಧತೆ ಸಮಯದ ಅಭಾವವಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ನಮ್ಮ ಭಾರತದ ಹೆಮ್ಮೆ ಎಂದು ಹಾಡಿ ಹೊಗಳಿದ ಕಂಗನಾ

ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಗಾಯಕರ ಜೊತೆ ಇವರಿಬ್ಬರೂ ಪ್ರದರ್ಶನ ನೀಡಬೇಕಿತ್ತು. ಎಂ.ಎಂ ಕೀರವಾಣಿ ಹೇಳಿದ ಬಳಿಕ ನಾವು ರಾತ್ರೋರಾತ್ರಿ ಭಾರತದ ಮತ್ತು ಲಾಸ್ ಏಂಜಲೀಸ್‌ನಲ್ಲಿರುವ ಕೋರಿಯೋಗ್ರಾಫರ್‌ಗಳಿಗೆ ಕರೆ ಮಾಡಿ ಮಾತನಾಡಿದೆವು. ನಾವು ಕಾಸ್ಟಿಂಗ್ ಆಯ್ಕೆಗಳು, ವಸ್ತ್ರ ವಿನ್ಯಾಸ ಮತ್ತು ಭಾರತದ ತಂಡದೊಂದಿಗೆ ಸ್ಟೇಜ್ ರೆಂಡರಿಂಗ್ ಎಲ್ಲವೂ ಸಿದ್ಧತೆ ಮಾಡಿಕೊಂಡಿದ್ದೇವು. ಆದರೆ ಎಲ್ಲದಕ್ಕೂ ಸಮಯದ ಅಭಾವವಿತ್ತು ಎಂದಿದ್ದಾರೆ. ಪ್ರತಿಷ್ಠಿತ ವೇದಿಕೆಯಲ್ಲಿ ನೃತ್ಯ ಮಾಡೋದಾದ್ರೆ ಅದಕ್ಕೆ ಸಿದ್ಧತೆ ಕೂಡ ಚೆನ್ನಾಗಿರಬೇಕು ಎಂಬ ಕಾರಣಕ್ಕೆ ಪ್ರದರ್ಶನ ನೀಡಲಾಗಲಿಲ್ಲ‌ ಬಳಿಕ ಹಾಲಿವುಡ್‌ ನಟಿ ಲಾರೆನ್‌ ಮತ್ತು ಅವರ ತಂಡ ಅದ್ಭುತವಾಗಿ ಪ್ರದರ್ಶಿಸಿದರು ಎಂದು ನಿರ್ಮಾಪಕ ರಾಜ್ ಕಪೂರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *