ನಿಂಗೆ ಗಿಲ್ಲಿ ಬೇಕು: ರಕ್ಷಿತಾ ವಿರುದ್ಧ ಗುಡುಗಿ ಕಳಪೆ ಕೊಟ್ಟ ರಾಶಿಕಾ

1 Min Read

ಗಿಲ್ಲಿ (Gilli) ವಿಚಾರವಾಗಿ ರಕ್ಷಿತಾ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ರಾಶಿಕಾ (Rashika) ಸಿಟ್ಟು ಹೊರಹಾಕಿದ್ದಾರೆ. ರಕ್ಷಿತಾ ವಿರುದ್ಧ ಒಂದಷ್ಟು ಆರೋಪಗಳನ್ನು ಮಾಡಿ ಕಳಪೆ ಕೊಟ್ಟಿದ್ದಾರೆ.

ರಾಶಿಕಾ ಆರೋಪಗಳೇನು?
ಬೀನ್‌ ಬ್ಯಾಗ್‌ನೆಲ್ಲ ತೆಗೆದು ರಕ್ಷಿತಾ (Rakshitha) ಎಲ್ಲೊಲ್ಲೋ ಇಡ್ತಾಳೆ. ಯಾರಾದ್ರು ಬಂದು ಗಿಲ್ಲಿ ಜೊತೆ ಕೂತ್ಕೊಂಡು ಮಾತಾಡ್ತಾರೆ ಅನ್ಕೊಂಡು ಹಾಗೆ ಮಾಡ್ತಾಳೆ ಅಂತ ರಾಶಿಕಾ ಆರೋಪ ಮಾಡಿದ್ದಾರೆ. ಗಿಲ್ಲಿ ಮಾತಾಡ್ತಿದ್ರೆ, ನೀನು ಮಾತಾಡ್ಬೇಡ ಅಂತ ಹೇಳೋಕೆ ನೀನ್ಯಾರು ಅಂತ ರಾಶಿಕಾ ಪ್ರಶ್ನಿಸಿದಾಗ, ‘ಹೌದು.. ನನಗೆ ಪ್ರೈವಸಿ ಬೇಕಿತ್ತು’ ಅಂತ ರಕ್ಷಿತಾ ತಿರುಗೇಟು ಕೊಡ್ತಾರೆ. ಗಿಲ್ಲಿ ಮತ್ತು ನನ್ನ ವಿಚಾರವಾಗಿ ಯಾಕೆ ಮಧ್ಯ ಪ್ರವೇಶ ಮಾಡ್ತೀರಾ ಅಂತ ರಾಶಿಕಾಗೆ ರಕ್ಷಿತಾ ಪ್ರಶ್ನೆ ಮಾಡ್ತಾರೆ. ಇದನ್ನೂ ಓದಿ: ಇನ್ನೆರಡೇ ದಿನದಲ್ಲಿ ಮನೆಯಿಂದ ಇಬ್ರು ಹೋಗ್ತಾರೆ ಎಂದಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ಧ್ರುವಂತ್

ಆಗ ಸಿಟ್ಟಾದ ರಾಶಿಕಾ, ನಿನಗೆ ಆಗಲ್ಲ ತಡ್ಕೊಳ್ಳೋಕೆ ಯಾಕೆ ಗೊತ್ತಾ? ನಿನಗೆ ಗಿಲ್ಲಿ ಬೇಕು. ನಿಜ ಹೇಳಿದ ತಕ್ಷಣ ನಿನಗೆ ನಗು ಬಂದುಬಿಡುತ್ತೆ. ಯಾಕಂದ್ರೆ ನಿನ್ನ ಮನಸ್ಸಲ್ಲಿರೋದು ಅದೇ ಅಲ್ವ ಅಂತ ರಕ್ಷಿತಾ ವಿರುದ್ಧ ಗುಡುಗಿದ್ದಾರೆ.

ಬಿಗ್‌ ಬಾಸ್‌ (Bigg Boss) ಮನೆಯಲ್ಲಿ ಗಿಲ್ಲಿ ಜೊತೆ ರಕ್ಷಿತಾ ಒಳ್ಳೆ ಬಾಂಡಿಂಗ್‌ ಹೊಂದಿದ್ದಾರೆ. ಗಿಲ್ಲಿ ನನ್ನ ಒಳ್ಳೆ ಸ್ನೇಹಿತ.. ಅವನ ಥರ ಹುಡುಗಾಟಿಕೆ ಮಾಡುವ ಹುಡುಗರೆಂದರೆ ನಂಗೆ ಇಷ್ಟ ಅಂತ ಕೂಡ ರಕ್ಷಿತಾ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಕಾವ್ಯ ಹಿಂದೆಯೇ ಗಿಲ್ಲಿ ಇರೋದನ್ನು ಕೂಡ ರಕ್ಷಿತಾ ಸಹಿಸಿಕೊಳ್ಳುತ್ತಿರಲಿಲ್ಲ. ಇತ್ತೀಚೆಗೆ ಗಿಲ್ಲಿ ಜೊತೆಯೇ ರಕ್ಷಿತಾ ಹೆಚ್ಚಾಗಿ ಸಮಯ ಕಳೆಯುತ್ತಿದ್ದಾರೆ. ಇದನ್ನೂ ಓದಿ: `ಮಾ ಇಂಟಿ ಬಂಗಾರಂ’.. ಸಮಂತಾ ರಗಡ್ ಅವತಾರ..!

Share This Article