ಬೆಂಗಳೂರು: ಸ್ಯಾಂಡಲ್‍ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ತಮ್ಮ ಸಾಕು ನಾಯಿಯನ್ನು ಕಳೆದುಕೊಂಡು ಆಘಾತಗೊಂಡಿದ್ದಾರೆ.
12 ವರ್ಷದಿಂದ ರಕ್ಷಿತಾ ಜೊತೆಯಲ್ಲೇ ಇದ್ದ ಶ್ವಾನ ಅಸುನೀಗಿದೆ. ಇದ್ದರಿಂದಾಗಿ ರಕ್ಷಿತಾ ತುಂಬಾ ದುಃಖದಲ್ಲಿದ್ದಾರೆ.
ರಕ್ಷಿತಾ ಅವರಿಗೆ ನಾಯಿಗಳೆಂದರೆ ತುಂಬಾ ಇಷ್ಟ. ಅವರ ಮನೆಯಲ್ಲಿ ಎರಡು ಸಾಕು ನಾಯಿಗಳಿತ್ತು. ಅದರಲ್ಲಿ ಹ್ಯಾಪಿ ಎಂಬ ನಾಯಿ ಮೃತಪಟ್ಟಿದೆ. ಈ ಹ್ಯಾಪಿ ಚೀನಾ ಮೂಲದ ಚಿಕ್ಕಮರಿ ಆಗಿದ್ದು, ‘ಪಗ್’ ಜಾತಿಗೆ ಸೇರಿದೆ. ಪಗ್ ಜಾತಿಯ ನಾಯಿಗಳು 12 ರಿಂದ 15 ವರ್ಷಗಳ ಕಾಲ ಬದುಕುತ್ತದೆ.
ಪ್ರೇಮ್ ಮದುವೆಯಾಗುವ ಮೊದಲೇ ಹ್ಯಾಪಿ ರಕ್ಷಿತಾ ಮನೆಯಲ್ಲಿ ಸ್ಥಾನ ಪಡೆದಿತ್ತು. ಹಲವು ವರ್ಷಗಳಿಂದ ಜೊತೆಗೆ ಇದ್ದ ಹ್ಯಾಪಿಯನ್ನು ಕಳೆದುಕೊಂಡು ರಕ್ಷಿತಾ ಬಹಳ ದುಃಖದಲ್ಲಿದ್ದಾರೆ.