ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್

Public TV
1 Min Read

ಕ್ಷಿತ್ ತೀರ್ಥಹಳ್ಳಿಯವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ತಿಮ್ಮನ ಮೊಟ್ಟೆಗಳು ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಇದೇ ಜೂ.27ಕ್ಕೆ ತೆರೆಕಾಣುತ್ತಿದೆ.

ತಿಮ್ಮನ ಮೊಟ್ಟೆಗಳು ಚಿತ್ರತಂಡ ವಾಸುಕಿ ವೈಭವ್ ಹಾಡಿರುವ `ಕಾಡು ದಾರಿ’ ಎಂಬ ಹಾಡಿನ ಲಿರಿಕಲ್ ವಿಡಿಯೋ ಅನಾವರಣ ಮಾಡುವುದರೊಂದಿಗೆ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.ಇದನ್ನೂ ಓದಿ: ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ

ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಚೊಚ್ಚಲ ನಿರ್ಮಾಣಕ್ಕೆ ಆದರ್ಶ್ ಅಯ್ಯಂಗಾರ್ ಬಂಡವಾಳ ಹೂಡಿದ್ದಾರೆ. ರಕ್ಷಿತ್ ತೀರ್ಥಹಳ್ಳಿಯವರೇ ಬರೆದ ಕಾಡಿನ ನೆಂಟರು ಕಥಾಸಂಕಲನದಿಂದ ಆಯ್ದ ಒಂದು ಕಥೆ ತಿಮ್ಮನ ಮೊಟ್ಟೆಗಳು ಸಿನಿಮಾ ಆಗಿ ತೆರೆಕಾಣಲಿದೆ.

ಅಮೇರಿಕಾದ ಡಲ್ಲಾಸ್‌ನಲ್ಲಿ ಪ್ರಿಮೀಯರ್ ಶೋ ಮಾಡಿಕೊಂಡಿದ್ದ ಚಿತ್ರತಂಡಕ್ಕೆ ಉತ್ತಮ ಅಭಿಪ್ರಾಯಗಳು ಬಂದಿದ್ದವು. ಚಿತ್ರದ ಕಥಾವಸ್ತುವಿನಲ್ಲಿ ಕಾಳಿಂಗ ಹಾವು ಪ್ರಮುಖ ಪಾತ್ರವಹಿಸಿದ್ದು, ಮಾನವ ಹಾಗೂ ಪ್ರಾಣಿ ಸಂಬಂಧದ ಸಣ್ಣ ಎಳೆಯ ಭಾವುಕತೆ ಎಲ್ಲರ ಗಮನ ಸೆಳೆದು ಚಿತ್ರತಂಡ ಮೆಚ್ಚುಗೆಗೆ ಪಾತ್ರವಾಗಿತ್ತು. ಇದಕ್ಕೂ ಮುನ್ನ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಜೊತೆಗೆ ದೆಹಲಿಯಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಸ್ಪೆಷಲ್ ಜೂರಿ ಮೆನ್ಷನ್ ಅವಾರ್ಡ್ ಕೂಡ ಪಡೆದುಕೊಂಡಿತ್ತು.

ಪ್ರಕೃತಿ ಮತ್ತು ಮನುಷ್ಯನ ನಡುವಿನ ಸೂಕ್ಷ್ಮ ಸಂವೇದನೆಗಳನ್ನೊಳಗೊಂಡ ಈ ಚಿತ್ರದಲ್ಲಿ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಕರ್, ಶೃಂಗೇರಿ ರಾಮಣ್ಣ, ಪ್ರಗತಿ ಪ್ರಭು, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ, ಪೃಥ್ವಿರಾಜ್ ಕೊಪ್ಪ, ಪ್ರಾಣೇಶ್ ಕೂಳೆಗದ್ದೆ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪ್ರವೀಣ್.ಎಸ್ ಅವರ ಛಾಯಾಗ್ರಹಣ, ಕೆಂಪರಾಜು.ಬಿ.ಎಸ್ ಅವರ ಸಂಕಲನ ಹಾಗೂ ಹೇಮಂತ್ ಜೋಯಿಷ್ ಅವರ ಸಂಗೀತವಿದೆ.ಇದನ್ನೂ ಓದಿ: ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು

Share This Article