ಬಲೇ..ಬಲೇ Guys ಮತ್ತೆ ಶುರುವಾಯ್ತು ವ್ಲಾಗಿಂಗ್ – ಬಿಗ್‌ಬಾಸ್ ಮನೇಲಿ ಫಿಶ್ ಫ್ರೈ ರೆಸಿಪಿ ಹೇಳಿಕೊಟ್ಟ ರಕ್ಷಿತಾ

1 Min Read

– ಅಮ್ಮ, ಮಗಳು ಸೇರಿ ವ್ಲಾಗ್ 

ಬಿಗ್‌ಬಾಸ್ ಸೀಸನ್ 12ರ (BiggBoss Season 12) ಈ ವಾರದಲ್ಲಿ ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಅದರಂತೆ ಇಂದು ರಕ್ಷಿತಾ (Rakshita Shetty) ಅವರ ಅಮ್ಮ ಆಗಮಿಸಿದ್ದಾರೆ. ಜೊತೆಗೆ ಬಿಗ್‌ಬಾಸ್ ಕ್ಯಾಮೆರಾ ಹಾಗೂ ಮೀನು ಕಳುಹಿಸಿಕೊಟ್ಟಿದ್ದು, ವ್ಲಾಗಿಂಗ್ ಮಾಡುವ ಮೂಲಕ ರಕ್ಷಿತಾ ಫಿಶ್  ಫ್ರೈ (Fish Fry) ರೆಸಿಪಿ ಹೇಳಿಕೊಟ್ಟಿದ್ದಾರೆ.

ಬಿಗ್‌ಬಾಸ್ (BBK 12) ನಡೆಸಿಕೊಂಡು ಬರುತ್ತಿರುವ ಸಂಪ್ರದಾಯದಂತೆ ಈ ಸೀಸನ್‌ನಲ್ಲಿಯೂ ಸ್ಪರ್ಧಿಗಳ ಮನೆಯವರು ಬಿಗ್ ಮನೆಗೆ ಎಂಟ್ರಿಕೊಡುತ್ತಿದ್ದಾರೆ. ಇಂದಿನ ಎಪಿಸೋಡ್‌ನಲ್ಲಿ ರಕ್ಷಿತಾ ಅಮ್ಮ ಬಂದಿದ್ದಾರೆ. ಈ ಕುರಿತು ವಾಹಿನಿ ಪ್ರೋಮೋ ರಿಲೀಸ್ ಮಾಡಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಭೇಟಿ

ರಕ್ಷಿತಾ ಅವರ ಅಮ್ಮ ಮನೆಯೊಳಗೆ ಬರುತ್ತಿದ್ದಂತೆ ಬಿಗ್‌ಬಾಸ್ ಎಲ್ಲರಿಗೂ Pause ಎಂದು ಹೇಳುತ್ತಾರೆ. ಆಗ ಅಮ್ಮನನ್ನು ನೋಡಿದ ರಕ್ಷಿತಾ ಭಾವುಕರಾಗಿ ಬಿಗಿದಪ್ಪಿಕೊಳ್ಳುತ್ತಾರೆ. ಜೊತೆಗೆ ಮನೆಗೆ ಬಂದ ಅಮ್ಮ ರಕ್ಷಿತಾಗೆ ತಲೆಬಾಚಿ, ಕೆಲವು ಬುದ್ಧಿಮಾತುಗಳನ್ನು ಹೇಳಿದ್ದಾರೆ. ಯಾರಿಗೆ ಏನು ಹೇಳ್ಬೇಡ, ಜಗಳ ಮಾಡಬೇಡ.. ಜಗಳಗಂಟಿ ಎಂದಿದ್ದಾರೆ.

ಇನ್ನೂ ಇದೇ ವೇಳೆ ಧ್ರುವಂತ ರಕ್ಷಿತಾ ಅಮ್ಮನಿಗೆ Sorry ಕೇಳಿದ್ದಾರೆ. ಕೊನೆಗೆ ಬಿಗ್‌ಬಾಸ್ ಸ್ಟೋರ್ ರೂಮ್‌ನಲ್ಲಿ ಮೀನು, ಕ್ಯಾಮೆರಾ ಕೊಟ್ಟು ಕಳುಹಿಸಿದ್ದಾರೆ. ಮನೆಯಲ್ಲಿ ಒಲೆ ಇದೆ, ಮೀನು, ಕ್ಯಾಮೆರಾ ಎಲ್ಲವೂ ತಯಾರಿದೆ. ವ್ಲಾಗಿಂಗ್ ಶುರು ಮಾಡಿ ಎಂದು ಹೇಳಿದ್ದಾರೆ. ಕೂಡಲೇ ರಕ್ಷಿತಾ.. ಹಾಯ್ ಗಾಯ್ಸ್ ಎಂದು ಫಿಶ್ ಫ್ರೈ ರೆಸಿಪಿ ಶುರು ಮಾಡಿದ್ದಾರೆ.ಇದನ್ನೂ ಓದಿ: ಕಂಟೆಸ್ಟೆಂಟ್‌ಗಳಲ್ಲ.. ಅತಿಥಿಗಳು – ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್

Share This Article