ಸುದೀಪ್ ಗಾಗಿ ರಕ್ಷಿತ್ ಶೆಟ್ಟಿ ಸಿನಿಮಾ: ಕಿಚ್ಚ ಹೇಳಿದ್ದೇನು?

Public TV
1 Min Read

ಕಿಚ್ಚ ಸುದೀಪ್ (Sudeep) ಅವರಿಗಾಗಿ ರಕ್ಷಿತ್ ಶೆಟ್ಟಿ (Rakshit Shetty) ಸಿನಿಮಾ ಮಾಡಲಿದ್ದಾರೆ ಎನ್ನುವ ವಿಷಯ ಹಲವು  ವರ್ಷಗಳಿಂದ ಹರಿದಾಡುತ್ತಲೇ ಇದೆ.  ಈ ಚಿತ್ರಕ್ಕೆ ಥಗ್ಸ್ ಆಫ್ ಮಾಲ್ಗುಡಿ (Thugs of Malgudi) ಎಂದು ಹೆಸರನ್ನೂ ಇಡಲಾಗಿದೆ. ಈ ಸಿನಿಮಾ ಯಾವಾಗ ಅಂತ ಅನೇಕ ಸಲ ಪ್ರಶ್ನೆ ಕೇಳಿದ್ದೂ ಇದೆ. ಈವರೆಗೂ ಅದಕ್ಕೆ ಉತ್ತರ ಸಿಗಲಿಲ್ಲ. ಇವತ್ತು ಅಭಿಮಾನಿಗಳಿಗೆ ಉತ್ತರ ಸಿಕ್ಕಿಲ್ಲ.

ಇಂದು ಬೆಳಗ್ಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅಭಿಮಾನಿಗಳ ಜೊತೆ ಮಾತನಾಡಲು ಸುದೀಪ್ ಕರೆ ನೀಡಿದ್ದರು. ನಿಮ್ಮ ಪ್ರಶ್ನೆಗಳನ್ನು ಕೇಳಿ, ಅದಕ್ಕೆ ಉತ್ತರಿಸುತ್ತೇನೆ ಎಂದೂ ಅವರು ಕೇಳಿದ್ದರು. ಅದಕ್ಕೆ ಹಲವರು ಪ್ರಶ್ನೆಗಳನ್ನು ಮಾಡಿದ್ದರು. ಅದರಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ ಕೂಡ ಇತ್ತು.

ನಿಮ್ಮ ಮತ್ತು ರಕ್ಷಿತ್ ಕಾಂಬಿನೇಷನ್ ಸಿನಿಮಾ ಯಾವಾಗ? ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದ್ದರು. ಅದಕ್ಕೆ ತಣ್ಣಗೆ ಉತ್ತರಿಸಿರುವ ಕಿಚ್ಚ, ಅವರು ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ರಕ್ಷಿತ್ ಅವರಿಗೆ ಒತ್ತಡ ಹಾಕೋದು ಬೇಡ ಎಂದು ಉತ್ತರಿಸಿದ್ದಾರೆ. ಈ ಮೂಲಕ ಸದ್ಯಕ್ಕೆ ಸಿನಿಮಾ ಆಗೋದು ಅನುಮಾನ ಎನ್ನುವುದನ್ನು ಇನ್ ಡೈರೆಕ್ಟ್ ಆಗಿ ಹೇಳಿದ್ದಾರೆ.

 

ರಕ್ಷಿತ್ ಶೆಟ್ಟಿ ಸಿನಿಮಾ ಜೊತೆಗೆ ಇನ್ನೂ ಹಲವಾರು ಪ್ರಶ್ನೆಗಳಿಗೂ ಕಿಚ್ಚ ಉತ್ತರಿಸಿದ್ದಾರೆ. ವರ್ಷಕ್ಕೆ ಎರಡು ಸಿನಿಮಾ ಮಾಡಿ ಎಂದು ಕೆಲವರು ಪ್ರಶ್ನೆ ಮಾಡಿದ್ದರೆ, ಇನ್ನೂ ಕೆಲವರು ಬೇಗ ಬೇಗ ಸಿನಿಮಾ ಅಪ್ ಡೇಟ್ ಕೊಡಿ ಎಂದು ಗದರಿದ್ದಾರೆ. ಎಲ್ಲದಕ್ಕೂ ಕಿಚ್ಚ ಉತ್ತರಿಸಿದ್ದಾರೆ.

Share This Article