ಕಿಚ್ಚನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರಕ್ಷಕ್‌ ಬುಲೆಟ್‌

Public TV
1 Min Read

‘ಬಿಗ್ ಬಾಸ್’ ಕನ್ನಡ ಸೀಸನ್ 10ರಲ್ಲಿ (Bigg Boss Kannada 10) ಸ್ಪರ್ಧಿಯಾಗಿ ರಕ್ಷಕ್ ಬುಲೆಟ್ (Rakshak Bullet) ಭಾಗವಹಿಸಿದ್ದರು. ದೊಡ್ಮನೆಯಿಂದ ಬಂದ್ಮೇಲೆ ‘ಬಿಗ್ ಬಾಸ್’ ಶೋ ಕುರಿತು ರಕ್ಷಕ್ ಕಟುವಾಗಿ ಮಾತನಾಡಿದ್ದರು. ಈ ಪರಿಣಾಮ, ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ರಕ್ಷಕ್‌ಗೆ ಕಿಚ್ಚ (Sudeep)  ತಿರುಗೇಟು ನೀಡಿದ್ದರು. ಇದೀಗ ಕಿಚ್ಚನ ಜೊತೆ ಇರುವ ಫೋಟೋವೊಂದನ್ನು ರಕ್ಷಕ್ ಹಂಚಿಕೊಂಡಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ಪ್ರೀತಿಯಿಂದ ರಕ್ಷಕ್ ಫೋಟೋ ಹಂಚಿಕೊಂಡಿದ್ದಾರೆ. ಫಿನಾಲೆ ಬಳಿಕ ಕಿಚ್ಚನ ಜೊತೆ ಕಳೆದ ಕ್ಷಣ ಫೋಟೋ ಶೇರ್ ಮಾಡಿದ್ದಾರೆ. ‘ಅಣ್ಣ’ ಎಂದು ಅಡಿಬರಹ ನೀಡಿದ್ದಾರೆ. ಇದನ್ನೂ ಓದಿ:‘ಅಗ್ನಿಲೋಕ’ ಚಿತ್ರಕ್ಕೆ ಯಶಸ್ವ ಹೀರೋ: ಇವರು ಮೂರ್ತಿ ಮೊಮ್ಮಗ

 

View this post on Instagram

 

A post shared by rakshak sena (@rakshak_bullet)

ಅದಷ್ಟೇ ಅಲ್ಲ, ರಕ್ಷಕ್‌ಗೆ (Rakshak) ಕಿಚ್ಚ ಕನ್ನಡಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬಗ್ಗೆ ಕೂಡ ಖುಷಿಯಿಂದ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಈ ವೇಳೆ, ನಡೆದ ಮಾತುಕತೆ ಹೇಗಿತ್ತು? ಎಂದು ರಕ್ಷಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಗಾಸಿಪ್‌ಗೆಲ್ಲಾ ರಕ್ಷಕ್ ಬ್ರೇಕ್ ಹಾಕಿದ್ದಾರೆ.

ನಾನು ನಿನ್ನೆ ನನ್ನ ಜೀವನದ ಒಂದು ಅವಿಸ್ಮರಣೀಯ ಸಮಯವನ್ನು ಸುದೀಪ್ ಅಣ್ಣ ಅವರೊಂದಿಗೆ ಕಳೆದೆ. ಸುದೀಪ್ ಅಣ್ಣ ಅವರ ಮತ್ತು ನನ್ನ ತಂದೆಯ ನಡುವಿನ ಆತ್ಮೀಯತೆ, ಸ್ನೇಹ, ಪ್ರೀತಿ ಹಾಗೂ ಬಾಂಧವ್ಯದ ಬಗ್ಗೆ ಹೇಳಿದರು. ನಾನು ತುಂಬಾ ಭಾವುಕನಾದೆ. ನನಗೆ ಸಾಕಷ್ಟು ವಿಚಾರಗಳನ್ನು ನನಗೆ ಹೇಳಿದ್ದಾರೆ. ಬದುಕಿನಲ್ಲಿ ಹೇಗಿರಬೇಕು ಎಂದು ಉತ್ತಮ ಸಲಹೆ ನೀಡಿದರು. ವಿಶೇಷ ಎಂದರೆ, ಅವರು ತಮ್ಮ ಕನ್ನಡಕವನ್ನು ನನಗೆ ಉಡುಗೊರೆಯಾಗಿ ನೀಡಿದರು. ಅದು ನಿಜಕ್ಕೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಥ್ಯಾಂಕ್ಸ್ ಎ ಲಾಟ್ ಸುದೀಪ್ ಅಣ್ಣ ಎಂದು ಸೋಷಿಯಲ್‌ ಮೀಡಿಯಾದಲ್ಲಿ ರಕ್ಷಕ್ ಬುಲೆಟ್ ಬರೆದುಕೊಂಡಿದ್ದಾರೆ.

Share This Article