ಸತ್ಯ ಒಪ್ಪಿಕೊಂಡ ರಕ್ಷಕ್: ಆಡಿಯೋ ವೈರಲ್ ಬಗ್ಗೆ ಹೇಳಿದ್ದೇನು?

Public TV
1 Min Read

ಟ ಪ್ರಥಮ್ (Pratham) ಇತ್ತೀಚೆಗೆ ದೇವಸ್ಥಾನದ ಪೂಜೆಗೆಂದು ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದ ಶಕ್ತಿ ದೇವತೆ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿರುತ್ತಾರೆ. ಈ ವೇಳೆ ಕೆಲ ಕಿಡಿಗೇಡಿಗಳು ದರ್ಶನ್ ಅಭಿಮಾನಿಗಳು(Darshan Fans) ಅಂತಾ ಅವರ ಹೆಸರು ಹೇಳಿಕೊಂಡು ಪ್ರಥಮ್‌ರನ್ನ ಸುತ್ತುವರೆದಿದ್ದಾರೆ. ಬಳಿಕ ಪಾರ್ಟಿ ನಡೆಯುತ್ತಿದ್ದ ಜಾಗಕ್ಕೆ ಕರೆದುಕೊಂಡು ಹೋಗಿ ಮಾರಾಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ ಅಂತಾ ನಟ ಪ್ರಥಮ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಈ ಘಟನೆ ನಡೆದಾಗ ಆ ಜಾಗದಲ್ಲಿ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ (Rakshak Bullet) ಇದ್ದರು ಎಂದಿದ್ದಾರೆ. ಇದನ್ನೂ ಓದಿ: ನಿಮ್ಮಿಂದಲೇ ಹೆಣ್ಮಕ್ಕಳಿಗೆ ದೌರ್ಜನ್ಯ – ದರ್ಶನ್‌ ಫ್ಯಾನ್ಸ್‌ ವಿರುದ್ಧ ರಮ್ಯಾ ಕೆಂಡಾಮಂಡಲ

 

ನಟ ಪ್ರಥಮ್ ಹೇಳಿಕೆ ಬಳಿಕ ನಟ ಹಾಗೂ ಬಿಗ್‌ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ ತಾನು ಆ ಜಾಗದಲ್ಲಿ ಇರೋ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ನಾನಿದ್ದಿದ್ದು ನಿಜ, ಆದರೆ ಈ ಘಟನೆಗೂ ನನಗೂ ಯಾವುದೇ ರೀತಿ ಸಂಬಂಧವಿಲ್ಲ. ದಯವಿಟ್ಟು ಈ ರೀತಿ ಜಾಲತಾಣದಲ್ಲಿ ವೈರಲ್ ಆಗ್ತಿರುವ ತಹರೇವಾರಿ ಸುದ್ದಿಗೆ ನಮ್ಮ ಕುಟುಂಬದ ಸದಸ್ಯರು ಆತಂಕಕ್ಕೀಡಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ನಟನೆಯ ಮೈಸಾ ಚಿತ್ರಕ್ಕೆ ಮುಹೂರ್ತ: ಗೋಂಡ್ ಹಾಡಿಗೆ ಡಾನ್ಸ್

ಮಹೇಶ್ ಎನ್ನುವವರು ದೇವಸ್ಥಾನಕ್ಕೆ ನನ್ನ ಕರೆದಿದ್ದರು, ನಾನು ಹೋದೆ ಪೂಜೆ ಮುಗಿಸಿಕೊಂಡೆ ಊಟ ಮಾಡಿ ಬಂದೆ ಅಷ್ಟೇ ಹೊರತು ಆ ಘಟನೆಗೂ ನನಗೂ ಯಾವ ಸಂಬಂಧವಿಲ್ಲ ಅಂತಾ ಖಡಾಖಂಡಿತವಾಗಿ ಖಂಡಿಸಿದ್ದಾರೆ. ಪ್ರಥಮ್ ಅಣ್ಣ ನಾನು ಫ್ಯಾಮಿಲಿ ಫ್ರೆಂಡ್ಸ್, ಬೇರೆಯವರಿಗೆ ತೊಂದ್ರೆ ಮಾಡ್ಬೇಕು ಅಂತಾ ಬಂದಿಲ್ಲ. ಕಲಾವಿದರ ಫ್ಯಾಮಿಲಿಯಿಂದ ಬಂದವನು ನಾನು’ ಎಂದು ಮಾತನಾಡಿದ್ದಾರೆ.

Share This Article