ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನಂದೇನಾದ್ರೂ ತಪ್ಪಿದ್ರೆ ದೇವ್ರು ನೋಡಿಕೊಳ್ಳಲಿ – ರಕ್ಷಕ್ ಬುಲೆಟ್

Public TV
3 Min Read

ಬೆಂಗಳೂರು: ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನನ್ನದೇನಾದರೂ ತಪ್ಪಿದ್ರೆ ದೇವರು ನೋಡಿಕೊಳ್ಳಲಿ ಎಂದು ನಟ ರಕ್ಷಕ್ ಬುಲೆಟ್ (Rakshak Bullet) ಕಿಡಿಕಾರಿದ್ದಾರೆ.

ದೊಡ್ಡಬಳ್ಳಾಪುರ (Doddaballapur) ದೇವಸ್ಥಾನಕ್ಕೆ ಹೋಗಿದ್ದ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿತ್ತು. ದುಷ್ಕರ್ಮಿಗಳ ಗುಂಪೊಂದು ಡ್ರ‍್ಯಾಗರ್ ತೋರಿಸಿ ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿತ್ತು. ಘಟನೆ ವೇಳೆ ರಕ್ಷಕ್ ಬುಲೆಟ್ ಕೂಡ ಇದ್ದರು. ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನ್ನನ್ನು ಒಬ್ಬರು ಕರೆದಿದ್ದರು. ಅದಕ್ಕೆ ಅಲ್ಲಿಗೆ ಹೋಗಿದ್ದೆ. ಹೋದೆ, ನನ್ನ ಕೆಲಸ ಮುಗಿಸಿ ಬಂದೆ. ಕೆಲವು ಕಡೆ ನಾನೇ ಬೆದರಿಕೆ ಹಾಕಿಸಿದ್ದೇನೆ, ಸುಪಾರಿ ಕೊಟ್ಟಿದೀನಿ ಅಂತ ಹೇಳಿದ್ದಾರೆ. ಆದರೆ ನಾನು ಇಲ್ಲಿ ರೌಡಿಸಂ, ಬೇರೆ ವ್ಯವಹಾರ ಮಾಡೋಕೆ ಬಂದಿಲ್ಲ. ನಿಯತ್ತಾಗಿ ನಾನು ನನ್ನ ಕೆಲಸ ಅಂತ ಇದೀನಿ. ಘಟನೆ ನಡೆದ ಜಾಗದಲ್ಲಿ ನಾನಿದ್ದೆ. ಆದರೆ ನನಗೂ ಇದ್ಯಾವುದಕ್ಕೂ ನನಗೆ ಸಂಬಂಧ ಇಲ್ಲ. ನಾನು ಮಧ್ಯದಲ್ಲಿ ಹೋದ್ರೆ ನನ್ನ ಮೇಲೆ ಬರುತ್ತೆ ಅಂತ ಹೋಗಿಲ್ಲ ಎಂದರು.ಇದನ್ನೂ ಓದಿ: ಏಯ್‌.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್‌ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್‌ ವಾರ್ನಿಂಗ್‌

ಈ ಘಟನೆ ವೇಳೆ ನಾನು ಆ ಜಾಗದಲ್ಲಿದ್ದೆ ಎನ್ನುವ ಕಾರಣದಿಂದಲೇ ಇಷ್ಟೆಲ್ಲಾ ಆಗ್ತಿದೆ. ಪ್ರಥಮ್ ನನಗೆ ಅಣ್ಣನ ತರ. ಬೇರೆಯವರಿಗೆ ತೊಂದರೆ ಕೊಡೋಕೆ ಬಂದಿಲ್ಲ. ಕಲಾವಿದರಾಗಿ ಕೆಲಸ ಮಾಡೋಕೆ ಬಂದಿದೀನಿ. ಅದನ್ನೇ ಮಾಡ್ತೀನಿ. ಇದರಲ್ಲಿ ನನ್ನ ಪಾತ್ರ ಇಲ್ಲ. ಹೀಗಾಗಿ ಯಾರೇ ಏನೇ ಕೇಳಿದರೂ ನಾನು ನಡೆದಿದ್ದನ್ನು ಹೇಳ್ತೀನಿ. ಏನೇ ಆದರೂ ನಾನು ಎದುರಿಸುತ್ತೇನೆ ಎಂದು ಖಡಕ್ಕಾಗಿ ತಿಳಿಸಿದರು.

ಈ ಘಟನೆ ದೇವಸ್ಥಾನದ ಮುಂದೆ ನಡೆದಿದೆ. ಅಲ್ಲಿದ್ದವರು ದೇವಸ್ಥಾನಕ್ಕೆ ಬರಲಿ, ನಾನು ಹೋಗ್ತೀನಿ. ಎಲ್ಲರೂ ಒಂದು ಕರ್ಪೂರ ಹಚ್ಚೋಣ. ನಾನೇನಾದ್ರೂ ತಪ್ಪು ಮಾಡಿದ್ರೆ ಆ ದೇವ್ರು ನಂಗೆ ಶಿಕ್ಷೆ ಕೊಡಲಿ. ಆ ತಾಯಿ ನನ್ನ ನೋಡಿಕೊಳ್ಳಲಿ. ಕರ್ಮ ಅನ್ನೋದು ಯಾರ ಮನೆ ಬಾಗಿಲನ್ನೂ ಬಿಡಲ್ಲ. ಪ್ರಥಮ್ ಅಣ್ಣನಿಗೆ ನಾನೇನಾದ್ರೂ ತೊಂದರೆ ಕೊಟ್ಟಿದ್ರೆ ಆ ದೇವ್ರು ನಂಗೆ ಶಿಕ್ಷೆ ಕೊಡಲಿ. ಅದನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದರು.

ಕೆಲವರಿಗೆ ನಾನೇನು ಮಾಡಿದ್ರೂ ಸಮಸ್ಯೆ, ಇಲ್ಲಿ ನನ್ನ ಪಾತ್ರವೇ ಇಲ್ಲ. ನನ್ನ ಬಗ್ಗೆ ಸುಮ್ಮನೇ ಅಪಪ್ರಚಾರ ಮಾಡ್ತಿದ್ದಾರೆ. ನನ್ನದಲ್ಲದ ತಪ್ಪಿಗೆ ನನ್ನ ಬಗ್ಗೆ ಮಾತಾಡ್ತಿದ್ದಾರೆ. ರಕ್ಷಕ್ ಜೊತೆ ಹುಡುಗರಿದ್ದರು ಅಂತ ಹೇಳ್ತಿದ್ದಾರೆ. ಇದ್ರಿಂದ ನಂಗೆ ತುಂಬಾ ನೋವಾಗಿದೆ. ನನ್ನ ಮನೆಯವರಿಗೂ ತುಂಬಾ ನೋವಾಗಿದೆ. ಘಟನೆಯ ಬಳಿಕ ನಾನು ಹಾಗೂ ಪ್ರಥಮ್ ಒಟ್ಟಿಗೆ ಚೆನ್ನಾಗಿ ಮಾತನಾಡಿದ್ದೇವೆ ಎಂದು ತಿಳಿಸಿದರು.

ಏನಿದು ಪ್ರಕರಣ? ದೊಡ್ಡಬಳ್ಳಾಪುರ ದೇವಸ್ಥಾನದ ಬಳಿ ಆಗಿದ್ದೇನು?
ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ ಅನ್ನೋ ಆಡಿಯೋವೊಂದು ಸ್ಫೋಟಗೊಂಡಿತ್ತು. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿದುಬಂದಿತ್ತು. ಈ ಕುರಿತು ವ್ಯಕ್ತಿಯೊಬ್ಬರೊಂದಿಗೆ ಪ್ರಥಮ್ ಮಾತನಾಡಿರುವ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದರು. ಪೂಜೆ ಮುಗಿಸಿ ಹೊರಟ ವೇಳೆ ಕಾರಿಗೆ ಅಡ್ಡಬಂದ ಕೆಲವರು ಪ್ರಥಮ್‌ನನ್ನ ಬಲವಂತವಾಗಿ ಕರೆದೊಯ್ದು, ನಮ್ ಬಾಸ್ ಬಗ್ಗೆ ಮಾತಾಡ್ತಿಯ ಅಂತ ಹಲ್ಲೆಗೆ ಯತ್ನಿಸಿ ಅವಾಚ್ಯವಾಗಿ ನಿಂದಿಸಿ ಬೆದರಿಸಿದ್ದರು. ಆ ಸ್ಥಳದಲ್ಲಿ ಬುಲೆಟ್ ರಕ್ಷಕ್ ಕೂಡ ಇರುವುದಾಗಿ ಹೇಳಿದ್ದರು. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಬಂದ ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರನ್ನ ಭೇಟಿಯಾಗಿ ಘಟನೆ ವಿವರಿಸಿದ್ದರು. ಬಳಿಕ ಎಸ್ಪಿ ಸಂಬಂಧಪಟ್ಟ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಸ್ಪಿ ಸಿಕೆ ಬಾಬಾ, ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಅವರನ್ನ ಈಗಾಗಲೇ ಕರೆದು ಮಾತನಾಡಿದ್ದೀನಿ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ತಿವಿ ಎಂದು ಹೇಳಿದ್ದರು.ಇದನ್ನೂ ಓದಿ: ಗೂಂಡಾಗಳನ್ನ ಸಾಕ್ಬೇಡಿ, ಮನೆಯಲ್ಲಿ ನಾಯಿ ಸಾಕಿ, ಒಳ್ಳೆಯವರ ಸಹವಾಸ ಮಾಡಿ – ದರ್ಶನ್‌ಗೆ ಪ್ರಥಮ್‌ ಸ್ಟ್ರೈಟ್‌ ಹಿಟ್‌

Share This Article