ರಕ್ಷಕ್‌ ಬುಲೆಟ್‌ ಎಡವಟ್ಟಿನಿಂದ ಯುವಕನ ಕಾಲು ಮುರಿತ

By
1 Min Read

ಬಿಗ್‌ ಬಾಸ್‌ ಖ್ಯಾತಿಯ ರಕ್ಷಕ್‌ ಬುಲೆಟ್‌ ಎಡವಟ್ಟಿನಿಂದ ಯುವಕನ ಕಾಲು ಮುರಿತ ಆಗಿರುವ ಘಟನೆ ನಡೆದಿದೆ.

ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಅಪಘಾತ ಸಂಭವಿಸಿತ್ತು. ರಕ್ಷಕ್‌ ಬುಲೆಟ್‌ ಅಜಾಗರೂಕತೆಯಿಂದ ಕಾರು ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ.

ವೇಣುಗೋಪಾಲ ಕಾಲು ಮುರಿದುಕೊಂಡ ಯುವಕ. ಯುವಕನ ಬೈಕ್ ಮತ್ತು ರಕ್ಷಕ್ ಕಾರು ಡಿಕ್ಕಿಯಾಗಿದೆ. ವೇಣುಗೋಪಾಲ ಮತ್ತು ಸ್ನೇಹಿತೆ ಬೈಕ್‌ನಲ್ಲಿ ಬರುತ್ತಿದ್ದಾಗ ಅಪಘಾತವಾಗಿತ್ತು.

ಮಾನ್ಯತಾ ಟೆಕ್‌ಪಾರ್ಕ್‌ನ ಶಿವರಾಜ್ ಕುಮಾರ್ ಮನೆ ತಿರುವಿನಲ್ಲಿ ಅಪಘಾತವಾಗಿದೆ. ಆಕ್ಸಿಡೆಂಟ್ ಆದ ನಂತರ ಟ್ಯಾಕ್ಸಿಯಲ್ಲಿ ಹೆಬ್ಬಾಳ ಬಳಿಯ ಖಾಸಗಿ ಆಸ್ಪತ್ರೆಗೆ ಯುವಕ ದಾಖಲಾಗಿದ್ದಾರೆ.

ಅಪಘಾತದ ತೀವ್ರತೆಗೆ ಯುವಕನ ಎಡಗಾಲಿನ ಮೂಳೆ ಮುರಿತವಾಗಿದೆ. ಶಿಡ್ಲಘಟ್ಟ ಮೂಲದ ಯುವಕ ವೇಣುಗೋಪಾಲ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಸದ್ಯ ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Share This Article