ಕಾರಿಗಾಗಿ ಗಂಡನನ್ನೇ ಬಿಟ್ಟರಾ ರಾಖಿ ಸಾವಂತ್?: ಸೇಡು ತೀರಿಸಿಕೊಳ್ತೀನಿ ಅಂದ ಮಾಜಿಪತಿ

Public TV
1 Min Read

ಮೈಸೂರು ಹುಡುಗ ಆದಿಲ್ ತಮಗೊಂದು ಕಾರು ಕೊಟ್ಟರು ಎಂದು ಹೇಳುವ ಮೂಲಕ ಹೊಸ ಬಾಯ್ ಫ್ರೆಂಡ್ ನನ್ನು ಪರಿಚಯಿಸಿದ್ದರು ಬಾಲಿವುಡ್ ವಿವಾದಿತ ತಾರೆ ರಾಖಿ ಸಾವಂತ್. ಕಾರು ಕೊಡುವ ಮೂಲಕವೇ ತನಗೆ ಆದಿಲ್ ಪ್ರಪೋಸ್ ಮಾಡಿದರು ಎಂದೂ ಹೇಳಿಕೆ ನೀಡಿದ್ದರು. ಆದರೆ, ಇದೀಗ ರಾಖಿ ಮಾಜಿಪತಿ ರಿತೇಶ್, ಇದೇ ಕಾರಿನ ವಿಚಾರವನ್ನು ಹೊರಗೆಡವಿದ್ದಾರೆ. ತಾವು ರಾಖಿಗೆ ಕಾರು ಕೊಡಿಸಲಿಲ್ಲ ಎನ್ನುವ ಕಾರಣಕ್ಕಾಗಿ ತನ್ನನ್ನು ಬಿಟ್ಟು ಹೋದಳು ಎಂದು ಆರೋಪಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ರಾಖಿ ಸಾವಂತ್ ಮಾಜಿ ಪತಿಯ ವಿರುದ್ಧ ಮುಂಬೈನಲ್ಲಿ ದೂರು ನೀಡಿದ್ದರು. ತಮ್ಮ ಮಾಜಿಪತಿಯಿಂದಾಗಿ ತಮಗೆ ಕಿರುಕುಳ ಆಗುತ್ತಿದೆ ಎಂದು ಮತ್ತು ತಮ್ಮ ಸೋಷಿಯಲ್ ಮೀಡಿಯಾಗಳನ್ನು ಅವರೇ ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ರಿತೇಶ್ ಕಿರುಕುಳವನ್ನು ನನ್ನಿಂದ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಗಳಗಳನೆ ಅತ್ತಿದ್ದರು. ಇದೀಗ ರಿತೀಶ್ ಮಾಜಿ ಪತ್ನಿಯ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ : ಶಿವರಾಜ್ ಕುಮಾರ್ ಗಾಗಿ ಚಿತ್ರ ಮಾಡಲಿದೆ ಹೊಂಬಾಳೆ ಫಿಲ್ಮ್ಸ್: ನಿರ್ದೇಶಕರು ಯಾರು?

ರಾಖಿ ತುಂಬಾ ದುಬಾರಿ ಕಾರು ಕೊಡಿಸುವಂತೆ ಪೀಡಿಸುತ್ತಿದ್ದರು. ಹಣದಾಹ ಹೆಚ್ಚಾಗಿತ್ತು. ನಾನು ಅವಳು ಕೇಳಿದ ಕಾರನ್ನು ಕೊಡಿಸಲಿಲ್ಲ. ಹಾಗಾಗಿ ಅವರು ನನ್ನ ಜೊತೆಗಿನ ಸಂಬಂಧವನ್ನು ಕಡಿದುಕೊಂಡರು. ಇದೀಗ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ ಮತ್ತು ಸೇಡು ತೀರಿಸಿಕೊಳ್ಳುವೆ ಎಂದು ರಿತೇಶ್ ಹೇಳಿದ್ದಾರೆ. ರಾಖಿ  ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ರಿತೀಶ್, “ಈಗಲೂ ರಾಕಿ ನನ್ನ ಹಣದಲ್ಲೇ ಬದುಕುತ್ತಿದ್ದಾಳೆ. ಸಾಕಷ್ಟು ದುಬಾರಿ ವಸ್ತುಗಳನ್ನು ಕೊಡಿಸಿಕೊಂಡಿದ್ದಾಳೆ. ಕಾರು ಯಾರು ಕೊಡಿಸುತ್ತಾರೋ ಅವರ ಹಿಂದೆ ಆಕೆ ಹೋಗುತ್ತಾಳೆ. ಈಗ ಆದಿಲ್ ಎನ್ನುವವನು ಕೊಡಿಸಿರುವ ಕಾರು ಅದು ಹೊಸದಲ್ಲ, ಸೆಕೆಂಡ್ ಹ್ಯಾಂಡ್’ ಎಂದು ಟಾಂಗ್ ಕೊಟ್ಟಿದ್ದಾರೆ ರಿತೀಶ್.

Share This Article
Leave a Comment

Leave a Reply

Your email address will not be published. Required fields are marked *