ಮೈಸೂರಿಗೆ ಬಂದು ಆದಿಲ್ ಬಗ್ಗೆ ಮತ್ತೊಂದು ಆರೋಪ ಮಾಡಿದ ರಾಖಿ

By
1 Min Read

ಮೈಸೂರಿನ (Mysore) ಹುಡುಗ ಆದಿಲ್ ಖಾನ್ (Adil) ಜೊತೆ ಮದುವೆ ಆಗಿರುವ ರಾಖಿ (Rakhi Sawant)  ಆನಂತರ ಅವನ ಮೇಲೆಯೇ ಗುರುತರ ಆರೋಪಗಳನ್ನು ಮಾಡಿದ್ದರು. ಲೈಂಗಿಕವಾಗಿ ತನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಮತ್ತು ಹಿಂಸೆ ನೀಡಿದ್ದಾನೆ ಎಂದು ಹೇಳಿ ದೂರು ಕೂಡ ನೀಡಿದ್ದರು. ರಾಖಿ ನೀಡಿದ ದೂರನ್ನು ಸ್ವೀಕರಿಸಿದ್ದ ಕೋರ್ಟ್ ಆದಿಲ್ ನನ್ನು ಜೈಲಿಗೆ ಕಳುಹಿಸಿತ್ತು. ಇದೀಗ ಆದಿಲ್ ಜೈಲಿನಿಂದ ಹೊರ ಬಂದಿದ್ದಾನೆ. ಆತನನ್ನು ಭೇಟಿ ಮಾಡುವುದಕ್ಕಾಗಿ ರಾಖಿ ಮೈಸೂರಿಗೆ ಬಂದಿದ್ದರು.

ರಾಖಿ ಮೈಸೂರಿಗೆ ಬಂದಿದ್ದರೂ, ಆದಿಲ್ ಮನೆಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಹಾಗಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆದಿಲ್ ಮೇಲೆ ಮತ್ತಷ್ಟು ಆರೋಪಗಳನ್ನು ಮಾಡಿದರು. ತಮ್ಮ ಬೆತ್ತಲೆಯ ವಿಡಿಯೋಗಳನ್ನು ಮೂರರಿಂದ ನಾಲ್ಕು ಲಕ್ಷ ರೂಪಾಯಿಗೆ  ಆದಿಲ್ ಮಾರಾಟ ಮಾಡುತ್ತಿದ್ದಾನೆ ಎಂದು ಹೇಳಿಕೊಂಡರು. ಆದಿಲ್ ಗೆ ಡಿವೋರ್ಸ್ ನೀಡಿರುವುದಾಗಿಯೂ ಹೇಳಿಕೊಂಡರು. ಇದನ್ನೂ ಓದಿ:ನಿತ್ಯಾ ಮೆನನ್ ಜೊತೆ ತಮಿಳು ನಟ ಅನುಚಿತವಾಗಿ ವರ್ತಿಸಿದ್ರಾ? ಮೈನಾ ನಟಿ ಸ್ಪಷ್ಟನೆ

ಹಾಗಂತ ಆದಿಲ್ ಕೂಡ ಸುಮ್ಮನೆ ಕೂತಿಲ್ಲ. ರಾಖಿ ಸಾವಂತ್ ವಿರುದ್ಧ ಮತ್ತಷ್ಟು ಆರೋಪಗಳನ್ನು ಮಾಡಿದ್ದಾನೆ. ಜೈಲಿನಿಂದ ಆಚೆ ಬಂದ ನಂತರ ನಿರಂತರವಾಗಿ ಆದಿಲ್ ಮಾಧ್ಯಮ ಗೋಷ್ಠಿ ಕರೆಯುತ್ತಾ, ರಾಖಿ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾನೆ. ಇದೀಗ ರಾಖಿ ಗೆಳತಿ ರಾಜಶ್ರೀ ಜೊತೆ ಒಟ್ಟಾಗಿ ಮಾಧ್ಯಮಗೋಷ್ಠಿ ನಡೆಸಿದ ಆದಿಲ್, ‘ತಾನು ರಾಖಿ ಜೀವನದಲ್ಲಿ ಬಂದ ಆರನೇ ಗಂಡಸು. ಏಳನೇ ಗಂಡಸಿಗಾಗಿ ಆಕೆ ಹುಡುಕುತ್ತಿದ್ದಾಳೆ’ ಎಂದು ಆರೋಪ ಮಾಡಿದ್ದಾನೆ.

 

ರಾಖಿ ಜೊತೆ ಸದಾ ಗುರುತಿಸಿಕೊಳ್ಳುತ್ತಿದ್ದ ಗೆಳತಿ ರಾಜಶ್ರೀ (Rajshree) ಕೂಡ ರಾಖಿ ಬಗ್ಗೆ ಹಲವಾರು ಆರೋಪಗಳನ್ನು ಮಾಡಿದ್ದಾರೆ. ತಾನು ಮೀಟೂ ಪ್ರಕರಣದಲ್ಲಿ ಸಂಕಟ ಪಡುತ್ತಿದ್ದಾಗ, ತನ್ನ ವಿಡಿಯೋ ಇಟ್ಟುಕೊಂಡು ರಾಖಿ ಮಾನಹಾನಿ ಮಾಡಿದರು ಎಂದಿದ್ದಾರೆ. ದುಡ್ಡಿಗಾಗಿ ರಾಖಿ ಸಾವಂತ್ ಎಂತಹ ಕೆಲಸಕ್ಕೆ ಬೇಕಾದರೂ ಇಳಿಯುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ ರಾಜಶ್ರೀ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್