ಬಿಗ್ ಬಾಸ್ ಮನೆಯಲ್ಲಿ ಸಿಗರೇಟ್ ಸೇದಲು ಸೋನು ಶ್ರೀನಿವಾಸ್ ಗೌಡಗೆ ಕಂಪನಿ ಕೊಟ್ಟ ರಾಕೇಶ್ ಅಡಿಗ

Public TV
2 Min Read

ಬಿಗ್ ಬಾಸ್ ಮನೆಯಲ್ಲಿ ಮೊದಲೇ ರೂಲ್ ಜಾಸ್ತಿ. ಅದರ ಮಧ್ಯೆ ಕೊಡುವ ಸವಲತ್ತುಗಳನ್ನು ಸ್ಪರ್ಧಿಗಳೇ ಕಿತ್ತುಕೊಂಡರೆ ಮನೆ ಮಂದಿಯ ಮನಸ್ಥಿತಿ ಹೇಗಿರುತ್ತದೆ ಅಲ್ಲವಾ..? ಇಂದು ಆಗಿದ್ದು ಅದೇ ಕೊಟ್ಟಿದ್ದೆ ಕಡಿಮೆ ಸವಲತ್ತು. ಆದರೆ ಸೋನು ಮತ್ತು ರಾಕಿ ಮಾಡಿದ ಒಂದು ತಪ್ಪಿನಿಂದಾಗಿ ಇಡೀ ಮನೆಯ ಸದಸ್ಯರಿಗೆ ಬಿಗ್ ಬಾಸ್ ಶಿಕ್ಷೆ ವಿಧಿಸಿದೆ.

ಆಗಿದ್ದೇನು ಗೊತ್ತಾ..? ಇಂದು ಮನೆಯ ಮಂದಿಗೆ ತಮ್ಮ ಬಟ್ಟೆಗಳು ಬೇಕು ಎಂದರೆ ಬಿಗ್ ಬಾಸ್ ಕೊಟ್ಟಿದ್ದ ಟಾಸ್ಕ್ ನಲ್ಲಿ ವಿನ್ ಆಗಬೇಕಿತ್ತು. ಆದರೆ ವಿನ್ ಆಗಲಿಲ್ಲ. ಈ ಬಗ್ಗೆ ಆಮೇಲೆ ವಿವರಣೆ ನೀಡುತ್ತೀವಿ. ಅದಕ್ಕೂ ಮುನ್ನ ಸೋನು ಗೌಡಳಿಂದ ಆದ ಪ್ರಮಾದವನ್ನು ಇಲ್ಲಿ ವಿವರಿಸಿ ಬಿಡೋಣಾ. ಬಿಗ್ ಬಾಸ್ ಮೊಟ್ಟೆ ಟಾಸ್ಕ್ ಕೊಡುವುದಕ್ಕೂ ಮುನ್ನ ಅದರ ರೂಲ್ಸ್ ಕೂಡ ಹೇಳಿದರು. ಜೊತೆಗೆ ಮನೆಯ ಎಲ್ಲಾ ಕೋಣೆಗಳು ಲಾಕ್ ಆಗಿರುತ್ತವೆ. ಕೇವಲ ಶೌಚಾಲಯವನ್ನು ಉಪಯೋಗಿಸಬಹುದು ಎಂದು ಹೇಳಿತ್ತು. ಆದರೆ ಟಾಸ್ಕ್ ಶುರುವಾಗುವುದಕ್ಕೂ ಮುನ್ನ ರಾಕೇಶ್ ಮೊದಲು ಸ್ಮೋಕ್ ಝೋನ್ ಗೆ ಹೋಗಿದ್ದರು. ಬಿಗ್ ಬಾಸ್ ಆ ಬಗ್ಗೆ ಹೇಳಿಯೇ ಹೋಗಿದ್ದರು. ರಾಕೇಶ್ ಹೋಗಿ ಬಂದ ಮೇಲೆ ಸೋನು ಕೂಡ ಸ್ಮೋಕ್ ಝೋನ್ ಗೆ ಹೋಗಿ ಬಂದಿದ್ದಳು.

ಆದರೆ ಬಿಗ್ ಬಾಸ್ ಮೊದಲೇ ಈ ಬಗ್ಗೆ ಎಚ್ಚರಿಕೆಯನ್ನು ನೀಡಿತ್ತು. ಗೇಮ್ ಎಲ್ಲಾ ಮುಗಿದ ಮೇಲೆ ಮತ್ತೆ ಮನೆಯ ಸದಸ್ಯರೆಲ್ಲ ಕನ್ಫೆಷನ್ ರೂಮಿನಲ್ಲಿ ಬಿಗ್ ಬಾಸ್ ತೀರ್ಮಾನಕ್ಕಾಗಿ ಕಾಯುತ್ತಿದ್ದರು. ಬಿಗ್ ಬಾಸ್ ಎಲ್ಲರಿಗೂ ಉತ್ತರ ಕೊಟ್ಟರು. ಈ ಗೇಮಿನಲ್ಲಿ ನೀವೂ ಸೋತಿರುವ ಕಾರಣ ಬಟ್ಟೆಗಳನ್ನು ವಾಪಾಸ್ಸು ಮಾಡುವುದಿಲ್ಲ. ಈ ಮಧ್ಯೆ ನಿಯಮಗಳನ್ನು ಮೀರಿದ್ದೀರಿ. ಶೌಚಾಲಯ ಮಾತ್ರ ಬಳಸಬೇಕು ಎಂದಿದ್ದರು ಸದಸ್ಯರು ಸ್ಮೋಕಿಂಗ್ ಕೋಣೆ ಬಳಸುವುದನ್ನು ಬಿಗ್ ಬಾಸ್ ಗಮನಿಸಿದೆ ಎಂದಾಗ ಮನೆಯವರೆಲ್ಲಾ ಯಾರು ಯಾರು ಎಂಬ ಹುಡುಕಾಟದಲ್ಲಿದ್ದರು. ಆಗ ಸೋನು ಮತ್ತು ರಾಕೇಶ್ ಬಳಸಿರುವುದು ಗೊತ್ತಾಯಿತು.

ಇದರ ತಪ್ಪಿಗೆ ಬಿಗ್ ಬಾಸ್ ಇದ್ದ ಸವಲತ್ತುಗಳನ್ನು ವಾಪಾಸ್ ಪಡೆದಿದೆ. ಗರಿಷ್ಠ ನಾಲ್ಕು ಸದಸ್ಯರಿಗೆ ಉಪಯೋಗಿಸಲಾಗಿದ್ದ ಎಲ್ಲಾ ಭಾಗಗಳು, ಬೆಡ್ ರೂಮ್, ಅಡುಗೆ ಮನೆ, ಲೀವಿಂಗ್ ಮನೆ, ಗಾರ್ಡನ್, ಸ್ವಿಮ್ಮಿಂಗ್ ಫೂಲ್ ಉಪಯೋಗಿಸಲು ಗರಿಷ್ಠ ಇಬ್ಬರು ಸದಸ್ಯರಿಗಷ್ಟೇ ಅವಕಾಶ ನೀಡಲಾಗಿದೆ. ಹಾಗೂ ಸ್ಮೋಕಿಂಗ್ ಏರಿಯಾವನ್ನು ಮುಂದಿನ ಆದೇಶದ ತನಕ ಉಪಯೋಗಿಸುವಂತಿಲ್ಲ ಎಂದು ಆದೇಶ ಹಿರಡಿಸಿದೆ. ಈ ಆದೇಶಕ್ಕೆ ಸೋಮಣ್ಣ ಒಬ್ಬರು ಫುಲ್ ಖುಷಿ ಪಟ್ಟಿದ್ದಾರೆ. ಥ್ಯಾಂಕ್ಯೂ ಸಿಗರೇಟ್ ಬಿಡುವಂತೆ ಮಾಡಿದ್ದಕ್ಕೆ ಎಂದಿದ್ದಾರೆ. ಇವತ್ತು ಕೂಡ ಸೋಮಣ್ಣ ಸ್ಮೋಕಿಂಗ್ ಝೋನ್ ನಲ್ಲಿ ಕುಳಿತು ಸಿಗರೇಟ್ ಸೇದುವುನ್ನು ಇನ್ನು ಕಡಿಮೆ ಮಾಡಬೇಕು. ಕಡಿಮೆ ಮಾಡುವಂತೆ ಮಾಡಿದ ಬಿಗ್ ಬಾಸ್ ಗೆ ಥ್ಯಾಂಕ್ಸ್ ಅಂತ ಹೇಳಿದ್ದರು. ಆದರೆ ಮನೆಯ ಸದಸ್ಯರಿಗೆಲ್ಲಾ ಇದು ಕಷ್ಟಕರವಾಗಿದೆ.

ಈ ಮಧ್ಯೆ ಚೈತ್ರಾ ಬಿಗ್ ಬಾಸ್ ಬಳಿ ಮನವಿ ಮಾಡಿದ್ದಾರೆ. ಬಿಗ್ ಬಾಸ್ ಪ್ಲೀಸ್ ಗರಿಷ್ಠ ನಾಲ್ಕು ಜನರ ಬಳಕೆಗೆ ಮತ್ತೆ ಅನುಮತಿ ಕೊಡಿ. ಕಷ್ಟ ಆಗುತ್ತೆ ಎಂದು ರಿಕ್ವೆಸ್ಟ್ ಮಾಡಿದ್ದಾರೆ. ಈ ಶಿಕ್ಷೆ ಎಲ್ಲರಿಗೂ ಒಂದು ರೀತಿಯ ಬೇಸರಕ್ಕೆ ಕಾರಣವಾಗಿದೆ. ಎಲ್ಲರು ಸೋನು ಮತ್ತು ರಾಕೇಶ್ ನನ್ನು ಶಪಿಸುತ್ತಿದ್ದಾರೆ. ಈ ಮಧ್ಯೆ ರಾಕೇಶ್, ನಾವಿಬ್ಬರಲ್ಲವಾ ತಪ್ಪು ಮಾಡಿದ್ದು, ನಮ್ಮ ಸವಲತ್ತುಗಳನ್ನು ಕಿತ್ತುಕೊಳ್ಳಿ ಎಲ್ಲರಿಗೂ ಸರಿ ಮಾಡಿ ಬಿಗ್ ಬಾಸ್ ಎಂದು ಮನವಿ ಮಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *