ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದ ಪ್ರಧಾನಿ ಮೋದಿಗೆ HDD ಧನ್ಯವಾದ

Public TV
1 Min Read

ನವದೆಹಲಿ: ರಾಮ ಮಂದಿರದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಹಾಡಿ ಹೊಗಳಿದ್ದಾರೆ. ಜೊತೆಗೆ ರಾಮಮಂದಿರ ನಿರ್ಮಾಣ ಮಾಡಲು ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಮಂದಿರ ನಿರ್ಮಾಣಕ್ಕೆ ನರೇಂದ್ರ ಮೋದಿ (Narendra Modi) ತುಂಬಾ ಶ್ರಮಿಸಿದ್ದಾರೆ. ಅವರ ಪ್ರಾಮಾಣಿಕ ಪ್ರಯತ್ನ ಮಂದಿರ ವಿಚಾರದಲ್ಲಿ ಆಗಿದೆ ಎಂದ ಅವರು ರಾಮ ಮಂದಿರ ನಿರ್ಮಾಣ ಮಾಡಿದ್ದ ಮೋದಿಗೆ ಧನ್ಯವಾದಗಳನ್ನು ತಿಳಿಸಿದರು.

ರಾಮ ಮಂದಿರ ನಿರ್ಮಾಣ ಆಗಿರುವುದು ದೇಶಕ್ಕೆ ಹೆಮ್ಮೆಯ ವಿಚಾರವಾಗಿದೆ. ರಾಮ ಮಂದಿರ (Ram Mandir) ಉದ್ಘಾಟನೆ ದಿನ ನಾನು ಮತ್ತು ನನ್ನ ಹೆಂಡತಿ ಅಯೋಧ್ಯೆಗೆ (Ayodhya) ಹೋಗಿದ್ವಿ. ಆ ಒಂದು ಅಭೂತಪೂರ್ವವಾದ ಕ್ಷಣಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಭವ್ಯ ಮಂದಿರ ಮುಂದಿನ ಪೀಳಿಗೆಗೂ ಸಾಕ್ಷಿಯಾಗಲಿದೆ ಎಂದರು. ಇದನ್ನೂ ಓದಿ: ಈಶ್ವರಪ್ಪನವ್ರೇ.. ನಾನೇ ಬರ್ತೀನಿ, ನೀವೇ ಗುಂಡು ಹೊಡೆಯಿರಿ: ಡಿ.ಕೆ ಸುರೇಶ್

ರಾಮ ಧರ್ಮವನ್ನ ಪಾಲಿಸಿದ ವ್ಯಕ್ತಿ. ರಾಮ ಅಂದರೆ ಭಕ್ತಿ, ಪ್ರೀತಿ. ಗಾಂಧೀಜಿ ಸಮೇತ ರಾಮನ ಬಗ್ಗೆ ಮಾತನಾಡುತ್ತಿದ್ದರು. ರಾಮನ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣ ಆಗಿರುವುದು ಹೆಮ್ಮೆಯ ಸಂಗತಿ. ಮಂದಿರ ನಿರ್ಮಾಣ ಆಗಿ ರಾಮನ ಮೂರ್ತಿ ಸಹ ಪ್ರತಿಷ್ಠಾಪನೆ ಮಾಡಲಾಗಿದೆ. ರಾಮ ಮಂದಿರದ ಬಗ್ಗೆ ನನಗೆ ಬಹಳ ಸಂತಸ ಇದೆ ಎಂದರು.

ಇದೇ ವೇಳೆ ಪಿ.ವಿ ನರಸಿಂಹ ರಾವ್, ಸ್ವಾಮೀನಾಥನ್ ಅಂತವರಿಗೆ ಭಾರತ ರತ್ನ ನೀಡಿರುವುದು ಸ್ವಾಗತಾರ್ಹ ಎಂದು ಮಾಜಿ ಪ್ರಧಾನಿಗಳು ತಿಳಿಸಿದರು.

Share This Article